ಅಹಂಕಾರದಿಂದ ಮೆರೆದವರಿಗೆ ಎಂದೂ ಯಶಸ್ಸು ಸಿಗೋದಿಲ್ಲಾ ಅಂತಾ ನಮ್ಮ ಹಿರಿಯರು ಹೇಳಿದ್ದನ್ನು ನೀವು ಕೇಳಿರ್ತೀರಿ. ಹಾಗಾಗಿ ವಿನಯವೇ ಭೂಷಣ ಅಂತಾ ಹೇಳಿರೋದು. ಇದೇ ರೀತಿ ದುರಹಂಕಾರ ತೋರಿಸಲು ಹೋಗಿ, ದೇವರಾಜ ಇಂದ್ರ ಕೂಡ ದರಿದ್ರನಾಗಿದ್ದನಂತೆ. ಹಾಗಾದ್ರೆ ಇಂದ್ರ ಮಾಡಿದ ತಪ್ಪಾದ್ರೂ ಏನು..? ಅವನು ಹೇಗೆ ದರಿದ್ರನಾದ..? ಮತ್ತೆ ಅವನು ಲಕ್ಷ್ಮೀ ದೇವಿಯನ್ನು ಒಲಿಸಿಕೊಂಡಿದ್ದು ಹೇಗೆ ಅಂತಾ ತಿಳಿಯೋಣ ಬನ್ನಿ..
ಹನುಮನನ್ನು ನೆನೆದವರಿಗೆ ಶನಿ ತೊಂದರೆ ಕೊಡುವುದಿಲ್ಲವೇಕೆ..? ಇದರ ಹಿಂದಿರುವ ಕಾರಣವೇನು..?
ಒಮ್ಮೆ ದೂರ್ವಾಸ ಮುನಿಗಳು ಕಾಡಿನಲ್ಲಿ ಧ್ಯಾನ ಮಾಡುತ್ತ ಕುಳಿತಿದ್ದರು. ಆಗ ಓರ್ವ ಹೆಣ್ಣು ಮಗಳು ಸುಗಂಧಭರಿತವಾದ ಪಾರಿಜಾತ ಹೂವಿನ ಹಾರವನ್ನು ತೆಗೆದುಕೊಂಡು ಅದೇ ದಾರಿಯಲ್ಲಿ ಬರುತ್ತಿದ್ದಳು. ಅದನ್ನು ಕಂಡು ದೂರ್ವಾಸ ಮುನಿಗಳು, ಈ ಹಾರವನ್ನು ನನಗೆ ಕೊಡುವೆಯಾ ಎಂದು ಕೇಳಿದರು. ಆಕೆ ಆ ಮಾಲೆಯನ್ನು ದೂರ್ವಾಸರಿಗೆ ಕೊಟ್ಟು ಮುನ್ನೆಡದಳು.
ಅದೇ ಜಾಗಕ್ಕೆ ದೇವರಾಜ ಇಂದ್ರ ದೇವತೆಗಳ ಸಮೇತನಾಗಿ ಬರುತ್ತಿದ್ದ. ಇದನ್ನು ಕಂಡ ದೂರ್ವಾಸ ಮುನಿಗಳು ಇಂದ್ರನನ್ನು ಸ್ವಾಗತಿಸಲು, ತಾವು ಇಷ್ಟಪಟ್ಟು ತೆಗೆದುಕೊಂಡಿದ್ದ ಪಾರಿಜಾತದ ಹಾರವನ್ನು, ಇಂದ್ರನ ಕೊರಳಿಗೆ ಹಾಕಿ ಸ್ವಾಗತಿಸಿದರು. ಆದ್ರೆ ಇಂದ್ರ ಆ ಹಾರವನ್ನು ತೆಗೆದು ತನ್ನ ಐರಾವತಕ್ಕೆ ಹಾಕಿದ. ಅದರಿಂದ ಬರುತ್ತಿದ್ದ ಪರಿಮಳದಿಂದ ಆನೆಗೆ ತೊಂದರೆಯಾಗತೊಡಗಿತ್ತು. ಹಾಗಾಗಿ ಐರಾವತ ಆ ಮಾಲೆಯನ್ನು ತೆಗೆದು ನೆಲಕ್ಕೆ ಹಾಕಿತು.
ಕುರುವಂಶ ನಾಶಕ್ಕಾಗಿ ಶಕುನಿ ರಚಿಸಿದ್ದ ಈ 3 ತಂತ್ರ..
ಇದನ್ನು ಕಂಡು ದೂರ್ವಾಸರಿಗೆ ಕೋಪ ಬಂದಿತು. ಅವರು ಇಂದ್ರನನ್ನು ಕುರಿತು, ನಿನಗಿರುವ ಅಧಿಕಾರ, ಹಣದ ಮದದಿಂದ ನಾನು ಕೊಟ್ಟ ಮಾಲೆಗೆ ಬೆಲೆ ಕೊಡದೆ, ಅದು ನೆಲಕ್ಕೆ ಬೀಳುವಂತೆ ಮಾಡಿದೆ. ನಿನ್ನ ಬಳಿ ಇರುವ ಲಕ್ಷ್ಮೀ ನಿನ್ನನ್ನು ಬಿಟ್ಟುಹೋಗಲಿ. ನೀನು ದರಿದ್ರನಾಗು ಎಂದು ಶಾಪ ನೀಡಿದರು. ಇದೇ ವೇಳೆಗೆ ಬಲಿ ಚಕ್ರವರ್ತಿ ಯಾಗ ಮಾಡಿ, ಮೂರು ಲೋಕವನ್ನೂ ತನ್ನ ವಶವಾಗಿ ಮಾಡಿಕೊಂಡ. ಆಗ ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿ, ಎಲ್ಲವನ್ನೂ ತಮ್ಮದಾಗಿಸಿಕೊಂಡರು.
ಹೀಗೆ ಇಂದ್ರ ದರಿದ್ರನಾದ. ನಂತರ ವಿಷ್ಣುವಿನಲ್ಲಿ ಹೋಗಿ ಇದಕ್ಕೆ ಪರಿಹಾರ ಕೇಳಿದಾಗ, ನೀವು ಸಮುದ್ರ ಮಂಥನ ನಡೆಸಿರಿ. ಇದರಿಂದ ಬರುವ ಅಮೃತ ಕುಡಿದರೆ ನೀವು ಅಮರರಾಗುತ್ತೀರಿ. ಹಾಗೂ ಈ ಸಮುದ್ರ ಮಂಥನದಿಂದ ಲಕ್ಷ್ಮೀ ಮತ್ತೆ ಉದ್ಭವಿಸುತ್ತಾಳೆ. ಅವಳ ಮೂಲಕ ನೀನು ಮತ್ತೆ ಶ್ರೀಮಂತನಾಗುತ್ತೀ ಎನ್ನುತ್ತಾನೆ. ಹೀಗೆ ರಾಕ್ಷಸರ ಬಳಿ ಸಂಧಾನ ಮಾಡಿ, ಮಂದ್ರಾಚಲ ಪರ್ವತವನ್ನು ಕಳಸವನ್ನಾಗಿ, ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು, ಸಮುದ್ರ ಮಂಥನ ಮಾಡಲಾಯಿತು. ಇದಾದ ಬಳಿಕ ದೇವೆಂದ್ರ ಅಮರ ಮತ್ತು ಶ್ರೀಮಂತನಾದ.