ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಬರತ್ತೆ. ಹಾಗಾಗಿ ಮನೆಯಲ್ಲಿ ಏನಾದ್ರೂ ಸಿಹಿ ತಿಂಡಿ ಮಾಡಲೇಬೇಕು. ಅದಕ್ಕಾಗಿ ನಾವಿವತ್ತು ಮನೆಯಲ್ಲೇ ಟೇಸ್ಟಿಯಾಗಿ ಬೇಸನ್ ಲಡ್ಡು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಕಪ್ ಕಡಲೆ ಹಿಟ್ಟು, ಮುಕ್ಕಾಲು ಕಪ್ ಸಕ್ಕರೆ ಪುಡಿ, ಅರ್ಧ ಕಪ್ ತುಪ್ಪ. ಅಗತ್ಯವಿದ್ದಲ್ಲಿ ಡ್ರೈ ಫ್ರೂಟ್ಸ್ ಬಳಸಿ.
ರೆಸ್ಟೋರೆಂಟ್ ಸ್ಟೈಲ್ ಶಾಹಿ ಪನೀರ್ ಮನೆಯಲ್ಲೇ ತಯಾರಿಸಿ..
ಮಾಡುವ ವಿಧಾನ: ಮೊದಲು ಒಂದು ಕಡಾಯಿಯನ್ನು ಬಿಸಿ ಮಾಡಲು ಇಟ್ಟು ಅದಕ್ಕೆ, ನೀವು ತೆಗೆದುಕೊಂಡ ತುಪ್ಪದಲ್ಲಿ ಮುಕ್ಕಾಲು ಭಾಗ ತುಪ್ಪವನ್ನು ಕಡಾಯಿಗೆ ಹಾಕಿ. ಈಗ ಕಡಲೆ ಹಿಟ್ಟು ಹಾಕಿ, ಘಮ ಬರುವವರೆಗೂ ಹುರಿಯಿರಿ. ಹಾಗೆ ಹುರಿಯುವಾಗ ಹಿಟ್ಟು ಗಂಟಾಗಬಾರದು. ಹಾಗಾಗಿ ನೀವು ಸರಿಯಾಗಿ ಹುರಿಯಬೇಕು. ಸರಿಯಾಗಿ ಹುರಿದರೆ, ಸರಿಯಾದ ರೀತಿಯಲ್ಲಿ ಲಡ್ಡು ತಯಾರಾಗುತ್ತದೆ.
ಒಮ್ಮೆ ಹಿಟ್ಟು ಹುರಿದ ಬಳಿಕ ಮತ್ತೆ 4 ಸ್ಪೂನ್ ತುಪ್ಪ ಹಾಕಿ, ಚೆನ್ನಾಗಿ ಹುರಿಯಿರಿ. ಹೀಗೆ ಹಿಟ್ಟು ಹುರಿದ ಬಳಿಕ, ಒಂದು ಲೋಟೆಯ ಸಹಾಯದಿಂದ ಅದನ್ನ ಅರೆಯಿರಿ. ಇದಾದ ಬಳಿಕ ಎಲ್ಲ ತುಪ್ಪವನ್ನೂ ಮಿಕ್ಸ್ ಮಾಡಿ. ಈಗ ಹಿಟ್ಟು ಕೊಂಚ ಪೇಸ್ಟ್‌ನಂತಾಗುತ್ತದೆ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಗ್ಯಾಸ್ ಆಫ್ ಮಾಡಿ, ಈ ಮಿಶ್ರಣವನ್ನು ಪ್ಲೇಟ್‌ಗೆ ಹಾಕಿ. ಈಗ ಇದಕ್ಕೆ ಸಕ್ಕರೆ ಪುಡಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದಾದ ಬಳಿಕ ಲಾಡು ತಯಾರಿಸಬಹುದು.