ಪ್ರತೀ ಸಲವೂ ದೋಸೆ ಜೊತೆ ತಿನ್ನೋಕ್ಕೆ ತೆಂಗಿನಕಾಯಿಯ ಚಟ್ನಿ ಮಾಡಿ ಮಾಡಿ ನಿಮಗೂ ಬೋರ್ ಬಂದಿರಬಹುದು. ಜೊತೆಗೆ ಅದನ್ನ ತಿಂದವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ದೋಸೆ ಜೊತೆ ಸ್ಪೆಶಲ್ ಚಟ್ನಿ ರೆಸಿಪಿ ಹೇಳಲಿದ್ದೇವೆ.
ಈ ಬಾರಿ ದೀಪಾವಳಿಗೆ ತಯಾರಿಸಿ ಬೇಸನ್ ಲಡ್ಡು..
ಬೇಕಾಗುವ ಸಾಮಗ್ರಿ: ಒಂದು ಈರುಳ್ಳಿ, ಒಂದು ಟೊಮೆಟೋ, 3 ಒಣಮೆಣಸು, 4 ಎಸಳು ಬೆಳ್ಳುಳ್ಳಿ, ಕೊಂಚ ಹುಣಸೆಹಣ್ಣು ಮತ್ತು ಕೊಂಚ ಬೆಲ್ಲ, 2 ಸ್ಪೂನ್ ಎಣ್ಣೆ, ಉಪ್ಪು. ಒಗ್ಗರಣೆಗೆ, ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನ ಬೇಳೆ, ಕಡಲೇಬೇಳೆ.
ಉತ್ತರ ಭಾರತದ ಸ್ನ್ಯಾಕ್ಸ್ ಮೇಥಿ ಮಟರಿ ರೆಸಿಪಿ..
ಮಾಡುವ ವಿಧಾನ: ಮೊದಲು ಬಿಸಿ ನೀರಿನಲ್ಲಿ ಒಣಮೆಣಸನ್ನು 10 ನಿಮಿಷ ನೆನೆಸಿಡಿ. ನಂತರ ಬಾಣಲೆ ಬಿಸಿ ಮಾಡಿ, ಎಣ್ಣೆ ಹಾಕಿ, ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೋವನ್ನು ಹುರಿದುಕೊಳ್ಳಿ. ಹುರಿದ ಮಿಶ್ರಣ ತಣ್ಣಗಾದ ಮೇಲೆ, ನೆನೆಸಿದ ಮೆಣಸಿನಕಾಯಿ, ಹುಣಸೆಹಣ್ಣು, ಬೆಲ್ಲ ಹಾಕಿ, ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಬೌಲ್ಗೆ ಹಾಕಿ. ಈಗ ಇದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೇಬೇಳೆ ಹಾಕಿ, ಒಗ್ಗರಣೆ ಕೊಟ್ಟರೆ, ಈರುಳ್ಳಿ- ಟೊಮೆಟೋ ಚಟ್ನಿ ರೆಡಿ..