ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗಾಗಿ ಓರ್ವ ವಿದೇಶಿ ವ್ಯಕ್ತಿ 150 ಉರಿಯುವ ಕ್ಯಾಂಡಲ್ಗಳನ್ನು 30 ಸೆಕೆಂಡುಗಳ ಕಾಲ ಬಾಯಲ್ಲಿರಿಸಿಕೊಂಡಿದ್ದಾನೆ. ಡೆವಿಡ್ ರಶ್ ಎಂಬ ವ್ಯಕ್ತಿ ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮೆಥಮೆಟಿಕ್ಸ್ ಪ್ರಮೋಟ್ ಮಾಡುವ ಸಲುವಾಗಿ ಈಗಾಗಲೇ 250 ರೆಕಾರ್ಡ್ಗಳನ್ನ ಬ್ರೇಕ್ ಮಾಡಿದ್ದಾರೆ. ಈಗ ಈ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಡಿಸೆಂಬರ್ನಲ್ಲೇ ಈ ರೆಕಾರ್ಡ್ ಬ್ರೇಕ್ ಮಾಡೋಕ್ಕೆ ರಶ್ ಟ್ರೈ ಮಾಡಿದ್ರಂತೆ. ಆದ್ರೆ ಬಾಯಲ್ಲಿರುವ ಕ್ಯಾಂಡಲ್ಗಳು ಮುರಿದಿದ್ದು, ಸರಿಯಾಗಿ ಹಿಡಿದುಕೊಳ್ಳಲಾಗದೇ, ಬ್ಯಾಲೆನ್ಸ್ ತಪ್ಪಿ, ರೆಕಾರ್ಡ್ ಬ್ರೇಕ್ ಮಾಡಲಾಗಲಿಲ್ಲ. ಹಾಗಾಗಿ ಈಗ ಈ ರೆಕಾರ್ಡ್ ಬ್ರೇಕ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ರೆಕಾರ್ಡ್ ಬ್ರೇಕಿಂಗ್ ವೇಳೆ, ರಶ್ ಕಣ್ಣಿಗೆ ಯಾವುದೇ ಅಪಾಯ ಆಗದಂತೆ, ರಕ್ಷಣಾ ಕವಚ ಹಾಕಿದ್ದರಂತೆ.




