ಈ ಕೆಲಸ ಮಾಡುವುದನ್ನು ನೀವು ಬಿಡದಿದ್ದಲ್ಲಿ, ಲಕ್ಷ್ಮೀ ನಿಮ್ಮ ಮನೆಗೆ ಕಾಲಿಡುವುದಿಲ್ಲ- ಭಾಗ 1

ನಾನೆಷ್ಟೇ ದುಡಿದರೂ ನನ್ನ ಬಳಿ ದುಡ್ಡೇ ನಿಲ್ಲುತ್ತಿಲ್ಲ. ಎಷ್ಟೇ ದೇವರ ಪೂಜೆ ಮಾಡಿದರೂ, ದೇವರು ನನ್ನ ಮೇಲೆ ಕರುಣೆಯೇ ತೋರಿಸುತ್ತಿಲ್ಲ. ಎಷ್ಟೇ ಉಳಿತಾಯ ಮಾಡಲು ಪ್ರಯತ್ನಿಸಿದರೂ, ಕೈ ಮೀರಿ ಖರ್ಚಾಗುತ್ತಿದೆ ಅಂತಾ ಹಲವರು ಬೇಸರ ಪಡುತ್ತಾರೆ. ಇದಕ್ಕೆ ಅವರು ಮಾಡುವ ಕೆಲ ಕೆಲಸಗಳೇ ಕಾರಣವಾಗುತ್ತದೆ. ಹಾಗಾದ್ರೆ ಯಾವ ಕೆಲಸ ಮಾಡುವುದನ್ನು ಬಿಡದಿದ್ದಲ್ಲಿ, ಲಕ್ಷ್ಮೀ ನಿಮ್ಮ ಮನೆಗೆ ಕಾಲಿಡುವುದಿಲ್ಲ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸಿ. ಮನೆ ಅಂಗಳದಿಂದ ಹಿಡಿದು, ನಿಮ್ಮ ಇಡೀ ಮನೆಯನ್ನು ನೀವು ಸ್ವಚ್ಛವಾಗಿ ಇಡಬೇಕು. ಆಗಲೇ ಲಕ್ಷ್ಮೀ ನಿಮ್ಮ ಮೇಲೆ ಕೃಪೆ ತೋರಿಸುತ್ತಾಳೆ. ನೀವು ನಿಮ್ಮ ಮನೆಯನ್ನು, ಅದರಲ್ಲೂ ದೇವರ ಕೋಣೆ ಮತ್ತು ಅಡಿಗೆ ಕೋಣೆಯನ್ನು ಕ್ಲೀನ್ ಆಗಿ ಇರಿಸದಿದ್ದಲ್ಲಿ, ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗುತ್ತೀರಿ.

ಸ್ನಾನ ಮಾಡಿ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ..? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು..?

ರಾತ್ರಿ ತೊಳೆಯಲು ಇರುವ ಪಾತ್ರೆಯನ್ನು ತೊಳೆದುಬಿಡಿ. ಅದನ್ನು ಹಾಗೆ ಇರಿಸಿ, ಮರುದಿನ ತೊಳೆಬೇಡಿ. ಇದು ಶಾಸ್ತ್ರದ ಪ್ರಕಾರ ತಪ್ಪು. ಹೀಗೆ ಮಾಡುವುದರಿಂದ ಲಕ್ಷ್ಮೀ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗಿದೆ. ಅದರಲ್ಲೂ ಎಂಜಿಲು ಪಾತ್ರೆ, ಮುಸುರೆ ಪಾತ್ರೆಗಳಿಗೆ ನೀರೂ ಹಾಕದೇ, ಹಾಗೆ ಒಣಗಲು ಬಿಟ್ಟರೆ, ಅದು ಮನೆಗೆ ದರಿದ್ರ ತರುತ್ತದೆ. ಹಾಗಾಗಿ ರಾತ್ರಿ ತೊಳೆಯಲು ಬಿದ್ದ ಪಾತ್ರೆಯನ್ನು ರಾತ್ರಿಯೇ ತೊಳೆದು ಮುಗಿಸಿ.

ಶುಕ್ರವಾರದ ದಿನ ಸಾಲ ನೀಡಲೂ ಬೇಡಿ, ಪಡೆದುಕೊಳ್ಳಲೂ ಬೇಡಿ.. ಯಾಕಂದ್ರೆ ಸಾಲ ಪಡೆದವನಿಗೆ ಆ ಸಾಲ ಹಿಂದಿರುಗಿಸಲು ಕಷ್ಟವಾಗುತ್ತದೆ. ಮತ್ತು ಸಾಲ ಕೊಟ್ಟವನಿಗೆ ಆ ದುಡ್ಡು ಹಿಂದಿರುಗಿ ಬರುವ ಗ್ಯಾರಂಟಿ ಇರೋದಿಲ್ಲ. ಹಾಗಾಗಿ ಶುಕ್ರವಾರದ ದಿನ ಸಾಲ ತೆಗೆದುಕೊಳ್ಳಲೂಬೇಡಿ, ಕೊಡಲೂಬೇಡಿ.

ಚಾಣಕ್ಯನ ಪ್ರಕಾರ ಇಂತಹ ಜನರು ಬಡತನದಲ್ಲಿ ಹುಟ್ಟಿದರೂ ಸಹ ಇವರ ಮೇಲೆ ಲಕ್ಷ್ಮಿಯ ಅಪಾರ ಕೃಪೆ ಇರುತ್ತದೆ..!

ಇನ್ನು ಮನೆಯಲ್ಲಿ ಪತಿ- ಪತ್ನಿ ಪದೇ ಪದೇ ಜಗಳವಾಡಬೇಡಿ. ಆದಷ್ಟು ಸುಧಾರಿಸಿಕೊಂಡು ಹೋಗಲು ಪ್ರಯತ್ನಿಸಿ. ಯಾಕಂದ್ರೆ ಯಾವ ಮನೆಯಲ್ಲಿ ಪತಿ- ಪತ್ನಿ ಪದೇ ಪದೇ ಜಗಳವಾಡುತ್ತಾರೋ, ಯಾರು ಹೆಣ್ಣಿನ ಕಣ್ಣೀರಿಗೆ ಕಾರಣವಾಗುತ್ತಾನೋ, ಅಂಥ ಮನೆಯಲ್ಲಿ ಲಕ್ಷ್ಮೀ ಎಂದಿಗೂ ನೆಲೆಸುವುದಿಲ್ಲ. ಇನ್ನುಳಿದ ವಿಷಯಗಳನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

About The Author