ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 3

ಈ ಹಿಂದಿನ ಭಾಗದಲ್ಲಿ ನಾವು ಮನುಷ್ಯ ತನ್ನ ಜೀವನದಲ್ಲಿ ಬಿಡಬೇಕಾದ 17 ಚಟಗಳಲ್ಲಿ 8 ಚಟಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಇನ್ನು 4 ಚಟಗಳ ಬಗ್ಗೆ ಹೇಳಲಿದ್ದೇವೆ..

ಒಂಭತ್ತನೇಯ ಚಟ ಬೇರೆಯವರು ಏನು ತಿಳ್ಕೋತಾರೋ ಏನೋ ಅನ್ನೋ ಬಗ್ಗೆ ಹೆಚ್ಚು ಯೋಚಿಸೋದು. ನಾವು ಜೀವನ ಮಾಡುವಾಗ ನಮ್ಮ ಘನತೆ ಗೌರವದ ಬಗ್ಗೆ ಯೋಚಿಸಿ ಬದುಕಬೇಕು ಅನ್ನೋದು ನಿಜ. ಆದ್ರೆ ನಾವು ಬದುಕೋದೆ ಬೇರೆಯವರಿಗೋಸ್ಕರ ಅನ್ನೋ ರೀತಿ ಎಂದಿಗೂ ಬದುಕಬೇಡಿ. ಆಗ ಮುಂದೊಂದು ದಿನ, ಛೇ್ ನಾನು ನನಗಾಗಿ ಬದುಕಬೇಕಿತ್ತು ಅಂತಾ ಕೊರಗಬೇಕಾಗುತ್ತದೆ. ಹಾಗಾಗಿ ಕೊಂಚವಾದ್ರೂ ನಿಮ್ಮಿಷ್ಟದಂತೆ ಬದುಕಿ.

ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 2

ಹತ್ತನೇಯ ಚಟ ಆಲಸ್ಯ. ಯಾವ ವ್ಯಕ್ತಿಗೆ ಹೆಚ್ಚು ಆಲಸ್ಯ ಇರುತ್ತದೆಯೋ, ಅವನು ಎಂದೂ ಉದ್ಧಾರವಾಗುವುದಿಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ಯವ್ವನದಲ್ಲೇ ನೀವು ಆಲಸ್ಯ ಹೊಂದಿದ್ದರೆ, ಮುಂದೊಂದು ದಿನ ನಿಮಗೆ ವಯಸ್ಸಾದಾಗ, ಅಯ್ಯೋ ನಾನು ಸಮಯ ವ್ಯರ್ಥ ಮಾಡಿಬಿಟ್ಟೆನಲ್ಲಾ ಎನ್ನಿಸುವ ಕಾಲ ಬರುತ್ತದೆ. ಹಾಗಾಗಿ ಯವ್ವನ ಇದ್ದಾಗ, ಆರೋಗ್ಯವಿದ್ದಾಗಲೇ, ಏನಾದರೂ ಸಾಧನೆ ಮಾಡಿಬಿಡಿ.

ಹನ್ನೊಂದನೇಯ ಚಟ ನಡೆದ ಘಟನೆಯನ್ನೇ ನೆನಪಿಸಿಕೊಂಡು ಬದುಕುವುದು. ಪ್ರತೀ ಮನುಷ್ಯನ ಬದುಕಲ್ಲೂ ಕೆಲವು ಘಟನೆಗಳು ನಡೆಯುತ್ತದೆ. ಕೆಲವರ ಜೀವನದಲ್ಲಿ ದೊಡ್ಡದಾದ ಕಹಿ ಘಟನೆ, ಅನಾಹುತ ನಡೆದಿದ್ದರೆ, ಇನ್ನು ಕೆಲವರ ಜೀವನದಲ್ಲಿ ಸಣ್ಣಪುಟ್ಟ ಘಟನೆಗಳು ಜರುಗಿರುತ್ತದೆ. ಅದನ್ನೇ ಯೋಚಿಸುತ್ತ ಜೀವನಪೂರ್ತಿ ಇದ್ದರೆ, ನಿಮ್ಮ ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ನಡೆದ ಘಟನೆಯನ್ನೇ ನೆನೆಯುತ್ತ ಕೂರುವ ಬದಲು, ನಿಮ್ಮ ಗುರಿಯತ್ತ ಗಮನ ಕೊಡಿ..

ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 1

ಹನ್ನೆರಡನೇಯ ಚಟ ಇನ್ನೊಬ್ಬರ ಬಗ್ಗೆ ಹೊಟ್ಟೆಕಿಚ್ಚು ಪಡೋದು. ಅಥವಾ ಇನ್ನೊಬ್ಬರನ್ನು ದ್ವೇಷಿಸುವುದು ಕೂಡ ಕೆಟ್ಟ ಚಟ. ಇವೆರಡೂ ಚಟದಿಂದ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಮತ್ತು ಹೀಗೆ ಮಾಡುವುದರಿಂದ ನೀವು ಯಾವ ಕೆಲಸದಲ್ಲೂ ಗಮನ ಕೊಡಲಾಗುವುದಿಲ್ಲ. ಹಾಗಾಗಿ ಯಾರನ್ನೂ ದ್ವೇಷಿಸಬೇಡಿ, ಯಾರ ಬಗ್ಗೆಯೂ ಹೊಟ್ಟೆ ಕಿಚ್ಚು ಪಡಬೇಡಿ. ಯಾರನ್ನೂ ಹೀಯಾಳಿಸಬೇಡಿ. ಹೀಗೆ ಮಾಡುವುದರಿಂದ ನಿಮ್ಮ ನೆಮ್ಮದಿ ನೀವೇ ಹಾಳು ಮಾಡಿಕೊಂಡಂತೆ..

About The Author