ಡ್ರೈ ಫ್ರೂಟ್ಸ್ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳಿದೆ. ಆದ್ರೆ ಕೆಲವು ಡ್ರೈಫ್ರೂಟ್ಸ್ನ್ನ ನೆನೆಸಿಟ್ಟೇ ತಿನ್ನಬೇಕು. ಯಾಕಂದ್ರೆ ಅವುಗಳನ್ನು ಹಾಗೆ ತಿಂದ್ರೆ, ಅದರ ಪೋಷಕಾಂಶಗಳು ದೇಹಕ್ಕೆ ಸಿಗೋದಿಲ್ಲಾ. ಬದಲಾಗಿ ರುಚಿಗೆ ತಿಂದ ಹಾಗೆ ಆಗುತ್ತದೆ. ಹಾಗಾಗಿ ಕೆಲವು ಒಣ ಹಣ್ಣುಗಳನ್ನು ನೆನೆಸಿಯೇ ತಿನ್ನಬೇಕು. ಹಾಗಾಗಿ ಇಂದು ನಾವು ನೆನೆಸಿಟ್ಟ ವಾಲ್ನಟ್ ತಿನ್ನುವುದರಿಂದ ನಮ್ಮ ದೇಹಕ್ಕಾಗುವ ಲಾಭವೇನು ಅಂತಾ ಹೇಳಲಿದ್ದೇವೆ.
ಮನೆಯಲ್ಲೇ ಸಿಂಪಲ್ ಮತ್ತು ರುಚಿಯಾಗಿ ತಯಾರಿಸಬಹುದು ಮೊಸರೊಡೆ (ದಹಿ ವಡಾ)..
ಪ್ರತಿದಿನ ಒಂದು ವಾಲ್ನಟ್ ನೆನೆಸಿ ತಿಂದ್ರೆ ಸಾಕು, ನೀವು ಹಲವು ರೋಗಗಳಿಂದ ಮುಕ್ತಿ ಹೊಂದುತ್ತೀರಿ. ನೀವು ಯಂಗ್ ಆಗಿದ್ರೆ ಈಗಿಂದಾನೇ ನೆನೆಸಿದ ವಾಲ್ನಟ್ ತಿನ್ನೋಕ್ಕೆ ಶುರು ಮಾಡಿ.. ಮುಂದೊಂದು ದಿನ ನಿಮಗೆ ಸಕ್ಕರೆ ಖಾಯಿಲೆ ಬರುವುದನ್ನ ತಪ್ಪಿಸಬಹುದು. ಇನ್ನು ನಿಮಗೆ ಈಗಾಗಲೇ ಸಕ್ಕರೆ ಖಾಯಿಲೆ ಬಂದಿದ್ದರೆ, ಪ್ರತಿದಿನ ಬೆಳಿಗ್ಗೆ ನೆನೆಸಿಟ್ಟ ವಾಲ್ನಟ್ ತಿಂದರೆ, ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಏರದಿರುವಂತೆ ಮಾಡಬಹುದು.
ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಲಾಭ ಕೇಳಿದ್ರೆ ನೀವೂ ಇದನ್ನ ತಿಂತೀರಾ..
ಅಲ್ಲದೇ, ಇದರ ಸೇವನೆಯಿಂದ ದೇಹದಲ್ಲಿ ಕೆಟ್ಟ ಕಾಲೆಸ್ಟ್ರಾಲ್ ಇದ್ದರೆ, ಅದನ್ನು ಕೂಡ ತೆಗೆದು ಹಾಕುತ್ತದೆ. ಇನ್ನು ವಿದ್ಯಾರ್ಥಿಗಳು ಇದನ್ನು ತಿಂದ್ರೆ ನೆನಪಿನ ಶಕ್ತಿ ಹೆಚ್ಚುತ್ತದೆ. ಗರ್ಭಿಣಿಯರು, ನೆನೆಸಿಟ್ಟ ವಾಲ್ನಟ್ ತಿಂದ್ರೆ, ಮಗುವಿನ ಬುದ್ಧಿ ಶಕ್ತಿ ಹೆಚ್ಚುತ್ತದೆ. ಚಳಿಗಾಲದಲ್ಲಿ ನೆನೆಸಿಟ್ಟ ವಾಲ್ನಟ್ ತಿಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.




