Wednesday, January 15, 2025

Latest Posts

ಎರಡು ರೀತಿ ಶೇಂಗಾ ಚಟ್ನಿ ರೆಸಿಪಿ..

- Advertisement -

ಊಟ ಮಾಡುವಾಗ, ದೋಸೆ, ಚಪಾತಿ, ರೊಟ್ಟಿ ತಿನ್ನುವಾಗ, ಪಲ್ಯ, ಚಟ್ನಿ ಅಥವಾ ಚಟ್ನಿ ಪುಡಿ ಬೇಕಾಗುತ್ತದೆ. ಹಾಗಾಗಿ ನಾವಿಂದು ಧಿಡೀರ್‌ ಶೇಂಗಾ ಚಟ್ನಿ ಪುಡಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ. ಈ ಚಟ್ನಿಯನ್ನು ನೀವು ಅನ್ನ, ದೋಸೆ, ಚಪಾತಿ ಯಾವುದರ ಜೊತೆ ಬೇಕಾದ್ರೂ ತಿನ್ನಬಹುದು.

ನೆನೆಸಿದ ಕಡಲೆಬೀಜ ಪ್ರತಿದಿನ ತಿನ್ನುವುದರಿಂದ ಆಗುವ ಅದ್ಭುತ ಪ್ರಯೋಜನಗಳು..!

ಬೇಕಾಗುವ ಸಾಮಗ್ರಿ: ಒಂದು ಕಪ್ ಹುರಿದ ಶೇಂಗಾ, ಖಾರ ಬೇಕಾದಷ್ಟು ಹಸಿ ಮೆಣಸಿನಕಾಯಿ ಮತ್ತು ಒಣ ಮೆಣಸಿನಕಾಯಿ, ಅರ್ಧ ಕಪ್ ಕೊತ್ತೊಂಬರಿ ಸೊಪ್ಪು, 20 ಎಸಳು ಬೆಳ್ಳುಳ್ಳಿ, 2 ಸ್ಪೂನ್ ಜೀರಿಗೆ, 4 ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಹಸಿರು ಚಟ್ನಿ: ಗ್ಯಾಸ್‌ ಆನ್ ಮಾಡಿ, ಒಂದು ಪ್ಯಾನ್ ಇರಿಸಿ, ಅದಕ್ಕೆ ಎರಡು ಸ್ಪೂನ್ ಎಣ್ಣೆ ಹಾಕಿ, ಹಸಿಮೆಣಸು, ಬೆಳ್ಳುಳ್ಳಿ, ಜೀರಿಗೆ, ಕೊತ್ತೊಂಬರಿ ಸೊಪ್ಪು ಒಂದೊಂದಾಗಿ ಹುರಿದುಕೊಳ್ಳಿ. ಈ ಮಿಶ್ರಣ ತಣ್ಣಗಾದ ಮೇಲೆ, ಮಿಕ್ಸಿ ಜಾರ್‌ಗೆ ಶೇಂಗಾಕಾಳು, ಹುರಿದುಕೊಂಡ ಮಿಶ್ರಣ ಮತ್ತು ಉಪ್ಪು ಹಾಕಿ, ತರಿ ತರಿಯಾಗಿ ಗ್ರೈಂಡ್ ಮಾಡಿದ್ರೆ ಹಸಿರು ಶೇಂಗಾ ಚಟ್ನಿ ರೆಡಿ.

ಈ ಆಹಾರಗಳಿಂದ ಕ್ರಿಸ್ಮಸ್ ಆಚರಣೆ ಮಾಡಿ..ರುಚಿಯೇ ಬೇರೆ..!

ಕೆಂಪು ಚಟ್ನಿ: ಹುರಿದುಕೊಂಡ ಒಣಮೆಣಸು, ಬೆಳ್ಳುಳ್ಳಿ, ಶೇಂಗಾ ಮತ್ತು ಉಪ್ಪನ್ನು ಮಿಕ್ಸಿ ಜಾರ್‌ಗೆ ಹಾಕಿ, ಗ್ರೈಂಡ್ ಮಾಡಿಕೊಳ್ಳಿ. ಪ್ಯಾನ್ ಬಿಸಿ ಮಾಡಿ, ಎಣ್ಣೆ, ಜೀರಿಗೆ ಹಾಕಿ ಹುರಿದು ಅದಕ್ಕೆ ಮಿಕ್ಸಿ ಮಾಡಿಕೊಂಡ ಮಿಶ್ರಣ ಸೇರಿಸಿ ಹುರಿದ್ರೆ, ಕೆಂಪು ಶೇಂಗಾ ಚಟ್ನಿ ರೆಡಿ. ಇವೆರಡು ಚಟ್ನಿಯನ್ನ ಒಂದುವಾರವಿಟ್ಟು ಬಳಸಬಹುದು. ಆದ್ರೆ ಇದನ್ನ ಫ್ರಿಜ್‌ನಲ್ಲಿರಿಸಬೇಕು. ಮತ್ತು ಹುರಿಯಬೇಕಾದ ಪದಾರ್ಥವನ್ನು ಚೆನ್ನಾಗಿ ಹುರಿಯಬೇಕು. ಆಗ ಚಟ್ನಿ ಹಾಳಾಗುವುದಿಲ್ಲ. ಅನ್ನ, ರೊಟ್ಟಿ ಜೊತೆ ಮೊಸರಿನೊಂದಿಗೆ ಈ ಚಟ್ನಿ ಸೇರಿಸಿ ತಿಂದ್ರೆ ರುಚಿಯಾಗುತ್ತದೆ.

- Advertisement -

Latest Posts

Don't Miss