Wednesday, January 15, 2025

Latest Posts

ಗರ್ಭಾವಸ್ಥೆಯಲ್ಲಿ ಬಟರ್ ಫ್ರೂಟ್ ತಿನ್ನುವುದರಿಂದ ಆಗಲಿದೆ ಆರೋಗ್ಯಕರ ಲಾಭ..

- Advertisement -

ಪ್ರತೀ ತಾಯಿಯಾಗುವವಳಿಗೂ ತನ್ನ ಮಗು ಚೆಂದವಾಗಿರಬೇಕು, ಬುದ್ಧಿವಂತವಾಗಬೇಕು, ಆರೋಗ್ಯವಾಗಿರಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿಯೇ ಅದಕ್ಕೆ ಬೇಕಾದ ಆಹಾರಗಳನ್ನು ಆಕೆ ಸೇವಿಸಬೇಕಾಗುತ್ತದೆ. ಇಂದು ನಾವು ಗರ್ಭಿಣಿಯರು ಬಟರ್ ಫ್ರೂಟ್ ತಿಂದ್ರೆ ಅದರಿಂದಾಗುವ ಆರೋಗ್ಯಕರ ಲಾಭವೇನು ಅಂತಾ ಹೇಳಲಿದ್ದೇವೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

ಫೈಬರ್, ಕ್ಯಾಲ್ಸಿಯಂ, ಸೇರಿ ಹಲವು ಪೋಷಕತತ್ವಗಳಿಂದ ಭರಪೂರವಾಗಿರುವಂಥ ಬಟರ್ ಫ್ರೂಟ್ ತಿನ್ನುವುದರಿಂದ, ಗರ್ಭಿಣಿಯರ ಸೌಂದರ್ಯವೃದ್ಧಿಯಾಗುವುದರ ಜೊತೆಗೆ, ಮಗುವಿನ ಅಂದವು ಕೂಡ ಹೆಚ್ಚುತ್ತದೆ.  ಬೆಣ್ಣೆ ಹಣ್ಣನ್ನು ಹಾಗೆ ಸೇವಿಸಲು ಆಗೋದಿಲ್ಲ. ಅದನ್ನು ಜ್ಯೂಸ್ ಮಾಡಿಕೊಂಡು ಕುಡಿಯಬಹುದು.

ಬೆಣ್ಣೆಹಣ್ಣಿನ ಒಳಭಾಗವನ್ನ ಹಾಲು ಮತ್ತು ಕಲ್ಲು ಸಕ್ಕರೆಯ ಜೊತೆ ಸೇರಿಸಿ, ಗ್ರೈಂಡ್ ಮಾಡಿದ್ರೆ, ಬಟರ್ ಫ್ರೂಟ್ ಮಿಲ್ಕ್ ಶೇಕ್ ರೆಡಿ. ಇದನ್ನ ಗರ್ಭಿಣಿಯರು ಸಾಧ್ಯವಾದ್ರೆ ವಾರಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಬಹುದು. ಬೆಣ್ಣೆಹಣ್ಣಿನ ಸೇವನೆಯಿಂದ ತಾಯಿ ಮತ್ತು ಮಗುವಿನ ಹೃದಯದ ಆರೋಗ್‌ಯ ಉತ್ತಮವಾಗಿರುತ್ತದೆ.

ಜಾಯಿಕಾಯಿ ತೆಯ್ದು ಮಕ್ಕಳಿಗೆ ತಿನ್ನಿಸುವುದರಿಂದ ಏನಾಗತ್ತೆ ಗೊತ್ತಾ..?

ಅಲ್ಲದೇ, ಗರ್ಭಾವಸ್ಥೆಯಲ್ಲಿರಬೇಕಾದ್ರೆ, ಹೆಣ್ಣಿಗೆ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಆಗ ಬಟರ್ ಫ್ರೂಟ್ ಸೇವಿಸಿದ್ರೆ, ಪಾಚನಕ್ರಿಯೆ ಸರಿಯಾಗಿ ಆಗುತ್ತದೆ. ಅಲ್ಲದೇ ಪ್ರೆಗ್ನೆನ್ಸಿಯಲ್ಲಿ ನಿಮ್ಮ ತೂಕ ಹೆಚ್ಚಬಾರದು. ಸಮವಾಗಿರಬೇಕು. ಮಗುವಾದ ಮೇಲೂ ನಿಮ್ಮ ದೇಹದ ಆಕೃತಿ ಸರಿಯಾಗಿ ಇರಬೇಕು ಅಂದ್ರೆ ನೀವು ಬಟರ್ ಫ್ರೂಟ್ ಸೇವನೆ ಮಾಡಬೇಕು.

- Advertisement -

Latest Posts

Don't Miss