ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರಿಗೆ, ಆರೋಗ್ಯವಾಗಿರಬೇಕು ಎಂದು ಬಯಸುವವರಿಗೆ ನಾವಿಂದು ಒಂದು ಲಾಡು ರೆಸಿಪಿ ಹೇಳಲಿದ್ದೇವೆ. ಈ ಹೆಲ್ದಿ ಲಾಡುವನ್ನ ಮಾಡೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ನೋಡೋಣ ಬನ್ನಿ..
ಸಂಜೆ ತಿಂಡಿಗಾಗಿ ಮಸಾಲಾ ಪೂರಿ ರೆಸಿಪಿ..
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅಗಸೇ ಬೀಜ, ಅರ್ಧಕಪ್ ಒಣಕೊಬ್ಬರಿ ತುರಿ, 3ರಿಂದ 4 ಸ್ಪೂನ್ ತುಪ್ಪ, ಒಂದು ಸ್ಪೂನ್ ಅಂಟು (ಇದನ್ನು ಗೋಂದ್, ಡಿಂಕ, ಗಮ್ ಅಂತಾನೂ ಕರಿಯುತ್ತಾರೆ), ಅರ್ಧ ಕಪ್ ಗೋದಿ ಹಿಟ್ಟು, 15 ಹಸಿ ಖರ್ಜೂರ, ಕಾಲು ಕಪ್ ಸಣ್ಣಗೆ ಕತ್ತರಿಸಿದ ಪಿಸ್ತಾ ಬಾದಾಮ್ ಮತ್ತು ಗೋಡಂಬಿ.
ಮಾಡುವ ವಿಧಾನ: ಅಗಸೆಬೀಜವನ್ನು 3ರಿಂದ 4 ನಿಮಿಷ ಮಂದ ಉರಿಯಲ್ಲಿ ಏನು ಹಾಕದೇ, ಹಾಗೆ ಹುರಿದುಕೊಳ್ಳಬೇಕು. ಇದಾದ ಬಳಿಕ ಒಣಕೊಬ್ಬರಿ ಹುರಿದುಕೊಳ್ಳಿ. ಇದನ್ನು ಬದಿಗಿರಿಸಿ, ಅದೇ ಪ್ಯಾನ್‌ಗೆ 4 ಸ್ಪೂನ್ ತುಪ್ಪ ಹಾಕಿ, ಅಂಟನ್ನು ಕರಿದುಕೊಳ್ಳಿ. ಇದನ್ನು ತೆಗೆದು ಬದಿಗಿರಿಸಿ. ಮತ್ತೊಂದಿಷ್ಟು ತುಪ್ಪ ಹಾಕಿ, ಗೋದಿ ಹಿಟ್ಟನ್ನು ಹುರಿದುಕೊಳ್ಳಿ. ಮತ್ತೆ ಅದೇ ಪ್ಯಾನ್‌ಗೆ ತುಪ್ಪ ಹಾಕಿ ಖರ್ಜೂರವನ್ನೂ ಹುರಿಯಿರಿ.
ಪೇರಲೆ ಮರದ ಎಲೆಗಳು ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?
ಈಗ ಹುರಿದುಕೊಂಡ ಅಗಸೆಬೀಜ ಮತ್ತು ಅಂಟನ್ನು ಮಿಕ್ಸಿ ಜಾರ್‌ಗೆ ಹಾಕಿ ಸಪರೇಟ್ ಆಗಿ ಪುಡಿ ಮಾಡಿ. ಈಗ ಇದಕ್ಕೆ ಮೊದಲೇ ಹುರಿದಿಟ್ಟುಕೊಂಡ ಗೋಧಿ ಹಿಟ್ಟು, ಒಣಕೊಬ್ಬರಿ, ಖರ್ಜೂರ, ಪಿಸ್ತಾ, ಬಾದಾಮ್ ಮತ್ತು ಗೊಡಂಬಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಲಾಡು ಕಟ್ಟಿದ್ರೆ, ತೂಕ ಇಳಿಸುವ ಪೌಷ್ಟಿಕ ಲಾಡು ರೆಡಿ.
ವಿಶೇಷ ಸೂಚನೆ: ಇದು ಉಷ್ಣ ಪದಾರ್ಥವಾಗಿರುವುದರಿಂದ ಇದನ್ನು ಗರ್ಭಿಣಿಯರು ಸೇವಿಸಬಾರದು. ಇನ್ನು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ದಿನಕ್ಕೆ ಒಂದು ಲಾಡು ತಿಂದರೆ ಸಾಕು. ಅದಕ್ಕಿಂತ ಹೆಚ್ಚು ತಿನ್ನುವುದು ಬೇಡ.




