ಮಧುರೈ ಮೀನಾಕ್ಷಿ ದೇವಸ್ಥಾನದ ಇತಿಹಾಸವೇನು..?

ತಮಿಳುನಾಡಿಗೆ ಹೋದರೆ, ಮಧುರೈ ಮೀನಾಕ್ಷಿಯನ್ನ ಮತ್ತು ಕಂಚಿ ಕಾಮಾಕ್ಷಿಯನ್ನ ಕಂಡು ಬರಬೇಕು ಅನ್ನೋ ಮಾತಿದೆ. ಯಾಕಂದ್ರೆ ಈ ದೇವಿಯರ ದರ್ಶನದಿಂದ ಜೀವನ ಪಾವನವಾಗುತ್ತದೆ. ಹಲವು ಪುಣ್ಯ ಪ್ರಾಪ್ತಿಯಾಗುತ್ತದೆ. ಮತ್ತು ನಮ್ಮ ಪೂರ್ವಜರು ದೇವಸ್ಥಾನವನ್ನು ನಿರ್ಮಿಸುವುದರಲ್ಲಿ ಎಷ್ಟು ಜಾಣತನ ತೋರಿಸಿದ್ದಾರೆಂದು ಕೂಡ ಹೆಮ್ಮೆಯಾಗುತ್ತದೆ. ಹಾಗಾಗಿ ನಾವಿಂದು ಮಧುರೈ ಮೀನಾಕ್ಷಿ ದೇವಸ್ಥಾನದ ಇತಿಹಾಸದ ಬಗ್ಗೆ ಹೇಳಲಿದ್ದೇವೆ.

ವೈಗೈ ಎಂಬ ನದಿ ತೀರದಲ್ಲಿರುವ ಮಧುರೈಯನ್ನು ದೇವಸ್ಥಾನಗಳ ಬೀಡೆಂದು ಕರೆಯುತ್ತಾರೆ., ಅಲ್ಲದೇ, ಇದು ಅತ್ಯಂತ ಪುರಾತನ ನಗರಗಳಲ್ಲೊಂದು. ಇಲ್ಲಿರುವ ಎಲ್ಲ ದೇವಸ್ಥಾನಗಳಿಗಿಂತ ಮೀನಾಕ್ಷಿ ದೇಗುಲವೇ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಮೀನಾಕ್ಷಿ ಎಂದರೆ ಸರ್ವಶಕ್ತಿಯಾಗಿರುವ ಪಾರ್ವತಿ ದೇವಿ. ಈ ದೇವಸ್ಥಾನದಲ್ಲಿ ಶಿವನನ್ನೂ ಕೂಡ ಪೂಜಿಸಲಾಗುತ್ತದೆ. ಆದ್ರೆ ಇಲ್ಲಿ ಪ್ರಮುಖ ಆದ್ಯತೆ ಕೊಟ್ಟಿರುವುದು ಮಾತ್ರ ಮೀನಾಕ್ಷಿಗೆ.

ಬಟ್ಟೆಯಲ್ಲಿ ಅಡಗಿದೆ ಭಾಗ್ಯ ಮತ್ತು ದೌರ್ಭಾಗ್ಯ.. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು..?

ಮಧುರೈಯನ್ನು ಆಳುತ್ತಿದ್ದ ಪಾಂಡ್ಯ ರಾಜನಾದ ಮಲಯಧ್ವಜನಿಗೆ ಮಕ್ಕಳಿರುವುದಿಲ್ಲ. ಹಾಗಾಗಿ ರಾಜ ಹಲವು ಯಾಗಗಳನ್ನು ಮಾಡುತ್ತಾನೆ. ಪುತ್ರ ಕಾಮೇಷ್ಠಿ ಯಾಗವನ್ನು ಕೂಡ ಮಾಡುತ್ತಾನೆ. ಆಗ ಪಾರ್ವತಿಯೇ ಮಲಯಧ್ವಜನ ಪುತ್ರಿಯಾಗಿ ಜನಿಸುತ್ತಾಳೆ. ಆದ್ರೆ ಆಕೆಯ ದೇಹ ರಚನೆ ಸರಿಯಾಗಿ ಇರುವುದಿಲ್ಲ. ಈಕೆಗೆ ತಡತ್ತಗೈ ಎಂದು ನಾಮಕರಣ ಮಾಡಲಾಗುತ್ತದೆ.

ತನ್ನ ಮಗಳು ಬೇರೆ ಹೆಣ್ಣು ಮಕ್ಕಳಂತೆ ಇಲ್ಲವೆಂದು ರಾಜನಿಗೆ ಚಿಂತೆ ಶುರುವಾಗುತ್ತದೆ. ಅವನು ಪ್ರತಿದಿನ ದೇವರಲ್ಲಿ ಇದಕ್ಕೆ ಪರಿಹಾರ ಕೊಡು ಎಂದು ಬೇಡುತ್ತಾನೆ. ಒಮ್ಮೆ ಅವನಿಗೆ ಅಶರೀರ ವಾಣಿ ಕೇಳಿಬಂದು, ತಡತ್ತಗೈ ತನ್ನ ಬಾಳ ಸಂಗಾತಿಯನ್ನು ಕಂಡ ತಕ್ಷಣ ಆಕೆಯ ದೇಹ ಸರಿಹೋಗುತ್ತದೆ. ಎಂದು ಹೇಳುತ್ತದೆ ಆ ಅಶರೀರವಾಣಿ. ಆಗ ರಾಜನಿಗೆ ಸಮಾಧಾನವಾಗುತ್ತದೆ.

ಇಲ್ಲಿ ಬಾಳೆಹಣ್ಣನ್ನು ನೈವೇದ್ಯ ಮಾಡಿದರೆ ಸಾಕು, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ..

ತಡತ್ತಗೈ ವಿವಾಹದ ವಯಸ್ಸಿಗೆ ಬರುತ್ತಾಳೆ, ಪರಾಕ್ರಮಿಯಾದ ತಡತ್ತಗೈ ಯುದ್ಧ ಮಾಡುವುದನ್ನು ಕಲಿತಿರುತ್ತಾಳೆ. ಎಲ್ಲಾ ಲೋಕಗಳನ್ನು ವಶಪಡಿಸಿಕೊಳ್ಳಬೇಕು ಎಂದು ಯುದ್ಧ ಸಾರುತ್ತಾಳೆ. ಬ್ರಹ್ಮಲೋಕ, ವೈಕುಂಠ, ಇಂದ್ರಲೋಕದಲ್ಲಿ ಯುದ್ಧ ಮಾಡಿ ಎಲ್ಲವನ್ನೂ ಗೆದ್ದು, ಕೈಲಾಸಕ್ಕೆ ಬರುತ್ತಾಳೆ. ತಮ್ಮ ಒಡೆಯನಿಗೆ ತೊಂದರೆಯಾಗಬಾರದೆಂದು ಆಕೆಯೊಂದಿಗೆ ನಂದಿ ಮತ್ತು ಶಿವಗಣಗಳೆಲ್ಲ ಯುದ್ಧ ಮಾಡುತ್ತಾರೆ.

ಆದರೆ ಅವರೆಲ್ಲರನ್ನೂ ಸೋಲಿಸಿ, ಶಿವನನ್ನು ಸೋಲಿಸಲು ತಡತ್ತಗೈ ಶಿವನ ಬಳಿ ಬರುತ್ತಾಳೆ. ಆದ್ರೆ ಆಕೆ ಯುದ್ಧ ಮಾಡಲು ಬರುವಷ್ಟರಲ್ಲಿ ಆಕೆಯ ದೇಹ ರಚನೆ ಸರಿಯಾಗುತ್ತದೆ.  ಅಲ್ಲಿಗೆ ತಾನು ಶಿವನ ಬಾಳ ಸಂಗಾತಿ ಎಂದು ತಡತ್ತಗೈಗೆ ಗೊತ್ತಾಗಿ, ಆಕೆ ನಾಚಿಕೆಯಿಂದ ತಲೆ ತಗ್ಗಿಸುತ್ತಾಳೆ. ನಂತರ ಮಧುರೈನಲ್ಲಿ ಇಬ್ಬರ ವಿವಾಹ ನೆರವೇರುತ್ತದೆ. ಶಿವ ಸುಂದರೇಶ್ವರನಾಗಿ ಮತ್ತು ತಡತ್ತಗೈ ಮೀನಾಕ್ಷಿಯಾಗಿ ಮಧುರೈನಲ್ಲಿ ನೆಲೆಸುತ್ತಾರೆ.

About The Author