Thursday, October 16, 2025

Latest Posts

ಹೊಟ್ಟೆಯಲ್ಲಿ ಹುಳವಾದ ಲಕ್ಷಣ ಮತ್ತು ಅದಕ್ಕೆ ಪರಿಹಾರ ಮಾಡುವ ರೀತಿ..

- Advertisement -

ಕೆಲವರಿಗೆ ಪದೇ ಪದೇ ಹೊಟ್ಟೆ ನೋವಾಗುತ್ತದೆ. ಆದ್ರೆ ಅದಕ್ಕೆ ಕಾರಣ ಗೊತ್ತಿರುವುದಿಲ್ಲ. ಬಿಸಿ ನೀರು ಕುಡಿದೋ, ಜೀರಿಗೆ ತಿಂದೋ ಅದಕ್ಕೆ ಪರಿಹಾರ ತೆಗೆದುಕೊಳ್ಳುತ್ತಾರೆ. ಆದ್ರೆ ಒಂದೆರಡು ದಿನದ ಬಳಿಕ ಮತ್ತೆ ಹೊಟ್ಟೆ ನೋವು ಬರುತ್ತದೆ. ಹಾಗಾದ್ರೆ ಪದೇ ಪದೇ ಬರುವ ಹೊಟ್ಟೆ ನೋವಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು..

ಪದೇ ಪದೇ ಆಗುವ ಹೊಟ್ಟೆ ನೋವಿಗೆ ಹೊಟ್ಟೆಯಲ್ಲಿ ಹುಳವಾಗುವುದೇ ಕಾರಣ. ಹೊಟ್ಟೆಯಲ್ಲಿ ಜಂತು ಹುಳುವಿನ ಕಾಟವಿದ್ದಲ್ಲಿ ಪದೇ ಪದೇ ಹೊಟ್ಟೆ ನೋವಾಗುತ್ತದೆ. ಊಟ ಮಾಡಬೇಕು ಅನ್ನಿಸಿದರು, ಏನೂ ರುಚಿಸುವುದಿಲ್ಲ. ಅಶಕ್ತತೆ ಕಾಡುತ್ತದೆ. ವಾಂತಿ ಬೇಧಿ ಆಗುತ್ತದೆ. ಇವೆಲ್ಲ ಹೊಟ್ಟೆಯಲ್ಲಿ ಹುಳವಾದ ಲಕ್ಷಣ.  ವರ್ಷಕ್ಕೆ 2 ಬಾರಿ, ಅಂದ್ರೆ 6 ತಿಂಗಳಿಗೊಮ್ಮೆ ಜಂತಿನ ಗುಳಿಗೆ ತೆಗೆದುಕೊಳ್ಳುವುದೇ ಇದಕ್ಕೆ ಪರಿಹಾರ.

ಇನ್ನು ಅರೆಬೆಂದ ಮಾಂಸ, ಮೊಟ್ಟೆ, ಮೀನು ತಿನ್ನುವುದು. ಹಳಸಿದ ಆಹಾರ ತಿನ್ನುವುದು. ತುಂಬ ದಿನ ಫ್ರಿಜ್‌ನಲ್ಲಿದ್ದ ಆಹಾರ ತಿನ್ನುವುದು, ಬೂಸ್ಟ್ ಬಂದ ಆಹಾರ ತಿನ್ನುವುದು ಕೂಡ, ಪದೇ ಪದೇ ಹೊಟ್ಟೆ ನೋವಿಗೆ ಕಾರಣವಾಗುತ್ತದೆ. ಇಂಥ ಹೊಟ್ಟೆ ನೋವು ಹೋಗಬೇಕೆಂದರೆ, ಕೆಲವು ಮನೆ ಮದ್ದುಗಳನ್ನು ನಾವು ಬಳಸಬೇಕು.

ಸಿಹಿ ಗೆಣಸು ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕ್ಕೂ ಉತ್ತಮ..

ವಾರಕ್ಕೆರಡು ಬಾರಿಯಾದ್ರೂ ಬೇವಿನ ಎಲೆಯ ಜ್ಯೂಸ್ ಕುಡಿಯಿರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಮಿತವಾಗಿ ತೆಗೆದುಕೊಂಡರೆ, ಹೊಟ್ಟೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಪ್ರತಿದಿನ ಉಂಡ ಬಳಿಕ ಮಧ್ಯಾಹ್ನ ಮಜ್ಜಿಗೆ ಸೇವನೆ ಮಾಡಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಿರಿ. ನೀವು ಕುಡಿಯುವ ಬಿಸಿ ನೀರಿಗೆ ಒಂದು ಚಮಚ ಜೀರಿಗೆ ಹಾಕಿಡಿ. ಇಡೀ ದಿನ ಆ ನೀರನ್ನೇ ಸೇವಿಸಿ. ಪ್ರತಿದಿನ ಕಾಯಿಸಿ ತಣಿಸಿದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ.

- Advertisement -

Latest Posts

Don't Miss