Friday, October 18, 2024

Latest Posts

ಇಂದ್ರದೇವನನ್ನು ಏಕೆ ಪೂಜಿಸಲಾಗುವುದಿಲ್ಲ ಗೊತ್ತಾ..?.. ಭಾಗ 2

- Advertisement -

ಈ ವಿಷಯಕ್‌ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ಇಂದ್ರ ಹೇಗಿದ್ದ..? ಇಂದ್ರನ ಮೊದಲು ಸ್ವರ್ಗವನ್ನು ಯಾರು ಆಳಿದ್ದರು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, ಇಂದ್ರನನ್ನು ಯಾಕೆ ಪೂಜಿಸಲಾಗುವುದಿಲ್ಲ ಅಂತಾ ತಿಳಿಯೋಣ ಬನ್ನಿ..

ಬರೀ ಊರ್ವಷಿ, ಮೇನಕೆಯರ ಸಂಗದಲ್ಲಿರುತ್ತಿದ್ದ ಇಂದ್ರದೇವ, ಒಮ್ಮೆ ವಾಯುವಿಹಾರಕ್ಕೆಂದು ಭೂಮಿಗೆ ಬಂದ. ಹಾಗೆ ಬಂದಾಗ, ಗೌತಮ ಋಷಿಗಳ ಕುಟೀರದ ಮೂಲಕ ಹಾದು ಹೋಗುತ್ತಾನೆ. ಆಗ ಅವನಿಗೆ ಅಲ್ಲಿ ಗೌತಮ ಋಷಿಗಳ ಪತ್ನಿ ಅಹಲ್ಯಾ ಕಾಣುತ್ತಾಳೆ. ಅತ್ಯಂತ ಸುಂದರಿಯಾಗಿದ್ದ ಅಹಲ್ಯಾದೇವಿ, ಪತಿವೃತೆಯೂ ಆಗಿರುತ್ತಾಳೆ. ಆದ್ರೆ ಆಕೆಯನ್ನು ನೋಡಿದ ಇಂದ್ರನಿಗೆ, ಆಕೆಯನ್ನ ಪಡೆದುಕೊಳ್ಳಬೇಕು ಅನ್ನುವ ಆಸೆಯಾಯಿತು.

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.. ಈ ರಾಶಿಯವರಿಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳು..!

ಆತ ಸ್ವರ್ಗಕ್ಕೆ ಹೋದರೂ ಅಹಲ್ಯಾಳ ಗುಂಗಲ್ಲೇ ಇದ್ದ. ಆಗ ತಾನು ಮೋಸದಿಂದಾರೂ ಆಕೆಯನ್ನ ಪಡೆಯಬೇಕೆಂದು, ತನ್ನ ಶಕ್ತಿಯನ್ನು ಬಳಸಿ, ರಾತ್ರಿಯಲ್ಲಿ ಬೆಳಕು ಬರುವಂತೆ ಮಾಡಿದ. ಗೌತಮ ಋಷಿಗಳು ಬೆಳಗಾಯಿತೆಂದು, ನದಿಯ ಬಳಿ ಧ್ಯಾನ, ಪೂಜೆ ಮಾಡಲು ಹೊರಟರು. ಆಗ ಗೌತಮ ಋಷಿಗಳ ವೇಷ ಧರಿಸಿ, ಇಂದ್ರದೇವ ಕುಟೀರಕ್ಕೆ ಬಂದ. ಅಹಲ್ಯಾಳಿಗೆ ತನ್ನ ಪತಿ ಇಷ್ಟು ಬೇಗ ಬರಲು ಹೇಗೆ ಸಾಧ್ಯ ಎಂಬ ಯೋಚನೆ ಬಂದರೂ, ಆಕೆ ಏನನ್ನೂ ಪ್ರಶ್ನಿಸಲಿಲ್ಲ.

ಗೌತಮ ಮುನಿಯ ವೇಷದಲ್ಲಿದ್ದ ಇಂದ್ರ ದೇವ ಅಹಲ್ಯಾಳ ಬಳಿ ಇರುವಾಗ, ಗೌತಮ ಋಷಿಗಳು ಕುಟೀರಕ್ಕೆ ಬಂದರು. ಅವ್ರಿಗೆ ತಕ್ಷಣ, ಅಲ್ಲಿ ತನ್ನಂತೆ ವೇಷ ಧರಿಸಿ ಬಂದವನು ಇಂದ್ರನೆಂದು ಗೊತ್ತಾಯಿತು. ಕೋಪಗೊಂಡ ಗೌತಮ ಮುನಿಗಳು ನೀನು ಓರ್ವ ಹೆಣ್ಣಿನ ಯೋನಿಗಾಗಿ ಈ ರೀತಿ ಮಾಡಿದೆ. ನಿನ್ನ ಮೈಯ್ಯ ತುಂಬ ಯೋನಿಯಾಗಲಿ ಎಂದು ಶಾಪ ನೀಡುತ್ತಾನೆ. ಅಲ್ಲದೇ ಇಂದಿನಿಂದ ನಿನ್ನನ್ನು ಯಾರೂ ಪೂಜಿಸದಿರಲಿ ಎಂದು ಶಾಪ ಕೊಡುತ್ತಾರೆ. ಆಗ ಇಂದ್ರ ದೇವ ತಪ್ಪಾಯಿತೆಂದು ಕ್ಷಮೆಯಾಚಿಸಿದಾಗ, ಅವನ ದೇಹದ ಮೇಲಿನ ಯೋನಿಯನ್ನ ಕಣ್ಣಾಗಿ ಪರಿವರ್ತನೆ ಮಾಡುತ್ತಾರೆ.

ಹಬ್ಬ ಒಂದೇ ಆದರೆ ಪದ್ದತಿಗಳು ಹಲವು.. ಅದೇ ಸಂಕ್ರಾಂತಿ.. ಅದರ ವಿಶೇಷತೆಗಳನ್ನು ತಿಳಿಯೋಣ..!

ಇನ್ನು ಅಹಲ್ಯಾದೇವಿ ಕಲ್ಲಾಗಿ ಹೋಗಲಿ ಎಂದ ಗೌತಮ ಮುನಿಗಳು ಶಾಪ ನೀಡುತ್ತಾರೆ. ಆದರೆ ಅಹಲ್ಯಾ ದೇವಿ, ಇದರಲ್ಲಿ ನನ್ನದೇನೂ ತಪ್ಪಿಲ್ಲವೆಂದು ಹೇಳುತ್ತಾಳೆ. ಆಗ ಗೌತಮ ಮುನಿಗಳು, ನೀನು ಕಲ್ಲುಬಂಡೆಯಾಗಿರುತ್ತಿ. ಶ್ರೀರಾಮನ ಸ್ಪರ್ಶವಾದ ಬಳಿಕ ನಿನಗೆ ಮೋಕ್ಷ ಸಿಗುತ್ತದೆ ಎಂದು ಹೇಳುತ್ತಾರೆ. ಈ ಕಾರಣಕ್ಕೆ ಇಂದ್ರದೇವನನ್ನು ಯಾರೂ ಪೂಜಿಸುವುದಿಲ್ಲ.

- Advertisement -

Latest Posts

Don't Miss