Friday, September 20, 2024

Latest Posts

ಹಿಂಗಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ..?

- Advertisement -

ಹಿಂಗು. ಪ್ರತೀ ಭಾರತೀಯನ ಅಡುಗೆ ಕೋಣೆಯಲ್ಲೂ ಸಿಗುವ ಮಸಾಲೆ ಪದಾರ್ಥ. ಪದಾರ್ಥಗಳಿಗೆ ಹಾಕಿದಾಗ, ಎಷ್ಟು ಸ್ವಾದ ಕೊಡುತ್ತದೆಯೋ, ಅಷ್ಟೇ ಆರೋಗ್ಯಕರವಾಗಿದೆ. ಹಾಗಾಗಿ ಇಂದು ಹಿಂಗಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ಮೆಹೆಂದಿ ಜೊತೆ ಇದನ್ನ ಮಿಕ್ಸ್ ಮಾಡಿದ್ರೆ, ನಿಮ್ಮ ಕೂದಲ ಕಲರ್ ಸೂಪರ್ ಆಗಿರತ್ತೆ ನೋಡಿ..

ಪ್ರತಿದಿನ ಸಾರು ಅಥವಾ ಸಾಂಬಾರ್ ಮಾಡುವಾಗ ಕೊಂಚವಾದ್ರೂ ಹಿಂಗನ್ನು ಬಳಸಿ. ಇದು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹೊಟ್ಟೆ ನೋವಿನ ಸಮಸ್ಯೆ ಹೋಗಲಾಡಿಸುತ್ತದೆ. ಹೃದಯದ ಆರೋಗ್ಯವನ್ನು ಅಭಿವೃದ್ಧಿ ಮಾಡುತ್ತದೆ. ತುಂಬ ಸಮಯದ ಒಣ ಕೆಮ್ಮಿನ ಸಮಸ್ಯೆಯನ್ನ ಕೂಡ ದೂರ ಮಾಡುವ ಶಕ್ತಿ ಹಿಂಗಿಗಿದೆ. ಹೊಟ್ಟೆ ಹುಳವಿದ್ರೆ ಅದು ಕೂಡ ಹೋಗುತ್ತದೆ. ಗ್ಯಾಸ್ ಸಮಸ್ಯೆಯನ್ನ ಕೂಡ ತೊಡೆದು ಹಾಕುವ ಶಕ್ತಿ ಹಿಂಗಿಗಿದೆ.

ಆಯುರ್ವೇದಿಕ ಅಂಗಡಿಯಲ್ಲಿ ಹಿಂಗ್ವಾಷ್ಠಕ ಚೂರ್ಣ ಸಿಗುತ್ತದೆ.  ಇದನ್ನು ರಾತ್ರಿ ಮಲಗುವಾಗ ಅರ್ಧ ಚಮಚ ಪುಡಿ ಮತ್ತು ಬಿಸಿ ನೀರನ್ನು ತೆಗೆದುಕೊಂಡು ಮಲಗಬೇಕು. ಇದರಿಂದ ಮಲಬದ್ಧತೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಈ ಸಮಸ್ಯೆ ಸರಿ ಹೋದ ಮೇಲೆ ಚೂರ್ಣ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.

ಈ ಬಾರಿ ಸಂಕ್ರಾಂತಿಗೆ ಶೇಂಗಾ ಹೋಳಿಗೆ ಮಾಡಿ..

ಒಣ ಕೆಮ್ಮಿನ ಸಮಸ್ಯೆ ಇದ್ದಲ್ಲಿ, ಚಿಟಿಕೆ ಹಿಂಗಿನ ಜೊತೆ ಅರ್ಧ ಚಮಚ ಜೇನುತುಪ್ಪವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಿ. ಒಂದು ವಾರ ತೆಗೆದುಕೊಂಡು ನೋಡಿ. ನಿಮ್ಮ ಆರೋಗ್ಯದಲ್ಲೇನು ಸಮಸ್ಯೆ ಆಗದಿದ್ದಲ್ಲಿ, ಕೆಮ್ಮು ಹೋಗುವ ತನಕ ತೆಗೆದುಕೊಳ್ಳಬಹುದು.

ವಾರಕ್ಕೆ ನಾಲ್ಕು ಬಾರಿಯಾದ್ರೂ ನೀವು ಮಜ್ಜಿಗೆಯನ್ನ ಕುಡಿಯಿರಿ. ಹೀಗೆ ಮಜ್ಜಿಗೆ ಕುಡಿಯುವಾಗ ತುಪ್ಪ ಮತ್ತು ಜೀರಿಗೆಯ ಜೊತೆ ಚಿಟಿಕೆ ಹಿಂಗು ಹಾಕಿ ಹುರಿದು. ಇದನ್ನು ಮಜ್ಜಿಗೆಗೆ ಸೇರಿಸಿ ಕುಡಿಯಿರಿ. ಇದರಿಂದ ಹೃದಯದ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಚಿಟಿಕೆ ಹಿಂಗ್ವಾಷ್ಟಕದ ಜೊತೆ ಕೊಂಚ ತುಪ್ಪ ಸೇರಿಸಿ, ಚಟ್ನಿಯಂತೆ ತಯಾರಿಸಿ. ಇದನ್ನು ಊಟದೊಂದಿಗೆ ಸೇವಿಸಿ. ಇದರಿಂದ ಗ್ಯಾಸ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

- Advertisement -

Latest Posts

Don't Miss