Tuesday, October 7, 2025

Latest Posts

ಊಟವಾದ ಬಳಿಕ ಸಿಹಿ ತಿನ್ನುವ ಪದ್ಧತಿ ಆರೋಗ್ಯಕ್ಕೆಷ್ಟು ಮಾರಕ ಗೊತ್ತಾ..?

- Advertisement -

ಸಿಹಿ ತಿಂಡಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಶುಗರ್ ಇದ್ದವರಲ್ಲಿ ಕೆಲವರು ಮಾತ್ರ ಸಿಹಿಯನ್ನ ಹೇಟ್ ಮಾಡ್ತಾರೆ. ಅದನ್ನ ಬಿಟ್ರೆ ಡಯಟ್ ಮಾಡುವವರು. ಆದ್ರೆ ಹಲವರಿಗೆ ಊಟವಾದ ಮೇಲೆ ಸಿಹಿ ತಿಂಡಿ ತಿನ್ನುವುದೆಂದರೆ ಬಲು ಇಷ್ಟ. ಹಾಗಾಗಿ ಊಟವಾದ ಬಳಿಕ ಹಲವರು, ಸಿಹಿ ತಿಂಡಿ ತಿನ್ನುತ್ತಾರೆ. ಇಲ್ಲವಾದಲ್ಲಿ ಬೆಲ್ಲವಾದರೂ ತಿನ್ನುತ್ತಾರೆ. ಆದ್ರೆ ಇದರಿಂದ ಆರೋಗ್ಯಕ್ಕೆ ನಷ್ಟವಾಗುತ್ತದೆ ಹೊರತು, ಲಾಭವೇನೂ ಇಲ್ಲ. ಅದರ ಬದಲು ನೀವು ಊಟಕ್ಕಿಂತ ಮೊದಲು ಕೊಂಚ ಸ್ವೀಟ್ ತಿಂದು, ನಂತರ ಊಟ ಮಾಡಬಹುದು. ಹಾಗಾದ್ರೆ ಊಟವಾಗುವುದಕ್ಕಿಂತ ಮೊದಲು ಸಿಹಿ ಯಾಕೆ ತಿನ್ನಬೇಕು..? ಊಟವಾದ ಬಳಿಕ ಸಿಹಿ ಯಾಕೆ ತಿನ್ನಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಹೃದಯದ ಆರೋಗ್ಯವನ್ನ ಸರಿಯಾಗಿ ಇಟ್ಟುಕೊಳ್ಳಲು ಟಿಪ್ಸ್..

ಊಟವಾದ ಮೇಲೆ ಸಿಹಿ ತಿಂಡಿ ತಿಂದ್ರೆ, ಹೊಟ್ಟೆ ಉಬ್ಬರ, ಮಲಬದ್ಧತೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಹಾಗಾಗಿ ಊಟವಾದ ಮೇಲೆ ಫ್ಯಾಶನ್‌ಗಾಗಿ ಸಿಹಿ ತಿನ್ನುವ ಬದಲು, ಊಟಕ್ಕಿಂತ ಮುಂಚೆ ಸ್ವಲ್ಪವೇ ಸ್ವಲ್ಪ ಸಿಹಿ ತಿನ್ನಬೇಕು.

ಸಂಕ್ರಾಂತಿ ಸ್ಪೆಶಲ್ ಮಾದಲಿ ರೆಸಿಪಿ..

ಆದ್ರೆ ಊಟಕ್ಕೂ ಮುನ್ನ ಕೊಂಚ ಸಿಹಿ ತಿಂಡಿ ತಿಂದ್ರೆ, ಅದರಿಂದ ಉತ್ತಮ ಲಾಭವಿದೆ. ವಾತದೋಷವನ್ನು ಬ್ಯಾಲೆನ್ಸ್ ಮಾಡುವ ಶಕ್ತಿ ಇದಕ್ಕಿದೆ. ಅಲ್ಲದೇ ಪಾಚನ ತಂತ್ರ ಕೂಡ ಉತ್ತಮವಾಗುತ್ತದೆ. ಇದರಿಂದ ನಿಮ್ಮ ಜೀರ್ಣಶಕ್ತಿ ಇನ್ನೂ ಉತ್ತಮವಾಗುತ್ತದೆ. ತಿಂದಿದ್ದೆಲ್ಲ ಸುಲಭವಾಗಿ ಜೀರ್ಣವಾಗುತ್ತದೆ. ಹಾಗಂತ ಊಟಕ್ಕೂ ಮುನ್ನ ಹೆಚ್ಚು ಸಿಹಿ ತಿನ್ನಬೇಡಿ. ಸಿಹಿ ಸೇವನೆ ಲಿಮಿಟ್ನಲ್ಲಿರಲಿ.

- Advertisement -

Latest Posts

Don't Miss