ಎಷ್ಟೋ ಜನರಿಗೆ ತಾನು ಹೈಟ್ ಆಗಬೇಕು. ಚೆಂದಗಾಣಬೇಕು ಅನ್ನೋ ಮನಸ್ಸಿರುತ್ತದೆ. ಆದ್ರೆ ಏನೇ ಮಾಡಿದ್ರೂ ಹೈಟ್ ಹೆಚ್ಚಾಗುವುದಿಲ್ಲ. 21 ವರ್ಷ ವಯಸ್ಸಾದ ಮೇಲಂತೂ ಹೈಟ್ ಹೆಚ್ಚುವುದು ಡೌಟ್. ಹಾಗಾಗಿ ಅದರೊಳಗೆ ನೀವು ಹೈಟ್ ಆಗಲು ಪ್ರಯತ್ನಿಸಬೇಕು. ಹಾಗಾದ್ರೆ ಹೈಟ್ ಆಗಲು ನ್ಯಾಚುರಲ್ ಆಗಿ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ವಾಸ್ತು ಶಾಸ್ತ್ರದ ಪ್ರಕಾರ 7 ಕುದುರೆ ವರ್ಣಚಿತ್ರಗಳನ್ನು ಇಡುವ ಪ್ರಯೋಜನಗಳು..!
ನೀವು ನ್ಯಾಚುರಲ್ ಆಗಿ ಹೈಟ್ ಆಗಬೇಕು ಅಂದ್ರೆ, ಅಥವಾ ನಿಮ್ಮ ಮಕ್ಕಳು ನ್ಯಾಚುರಲ್ ಆಗಿ ಹೈಟ್ ಆಗಬೇಕು ಅಂದ್ರೆ, ನೀವು ಪ್ರತಿದಿನ ವ್ಯಾಯಾಮ, ಯೋಗಾಭ್ಯಾಸ ಮಾಡುವುದನ್ನ ರೂಢಿಸಿಕೊಳ್ಳಬೇಕು. ವ್ಯಾಯಾಮ ಅಥವಾ ಯೋಗಾಭ್ಯಾಸ ಮಾಡುವುದರಿಂದ, ನಮ್ಮ ಹೈಟ್ ಬೆಳೆಯುತ್ತದೆ. ಜೊತೆಗೆ ಸ್ಕಿಪ್ಪಿಂಗ್ ಕೂಡ ಆಡಿ. ಜೊತೆಗೆ ಹ್ಯಾಂಗಿಂಗ್ ಮತ್ತು ರನ್ನಿಂಗ್ ಕೂಡ ಮುಖ್ಯ.
ಇನ್ನು ಆಹಾರದ ಬಗ್ಗೆ ಹೇಳುವುದಾದರೆ, ನಿಮ್ಮ ಮೂಳೆಯನ್ನು ಗಟ್ಟಿಗೊಳಿಸುವ ಆಹಾರವನ್ನು ಸೇವಿಸಿ. ವಾರದಲ್ಲಿ ಮೂರು ಬಾರಿಯಾದ್ರೂ ಪಾಲಕ್, ಶೇಂಗಾ ಚಿಕ್ಕಿ, ಬೀಟ್ರೂಟ್ ಸೇರಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸಿ. ಹಾಲು ಕುಡಿಯಬೇಕು. ಇದರೊಂದಿಗೆ ನಿಮ್ಮ ದೇಹಕ್ಕೆ ಸರಿಹೊಂದುವಂಥ ಪ್ರೋಟೀನ್ ಪೌಡರ್ ಇದ್ದರೆ ಅಥವಾ ಡ್ರೈಫ್ರೂಟ್ಸ್ ಪೌಡರ್ ಇದ್ರೆ ಅದರೊಂದಿಗೆ ಹಾಲನ್ನ ಸೇವಿಸಿ.
ಈ 4 ವಿಷಯ ನಿಮಗೆ ಗೊತ್ತಿದ್ದಲ್ಲಿ ನೀವು ಖಂಡಿತ ಜೀವನದಲ್ಲಿ ಸಫಲರಾಗುತ್ತೀರಿ..
ಮುಖ್ಯವಾದ ವಿಚಾರ ಅಂದ್ರೆ, ನೀವು ಹೈಟ್ ಆಗಲು, ಮಾರುಕಟ್ಟೆಯಲ್ಲಿ ಸಿಗುವ ಪೌಡರ್‌ಗಳನ್ನ ಅಥವಾ ಮಾತ್ರೆಗಳನ್ನ ಸೇವಿಸಬೇಡಿ. ಇದರಿಂದ ಸೈಡ್ ಎಫೆಕ್ಟ್ ಆಗಿ, ಎಷ್ಟೋ ಜನ ಮೃತಪಟ್ಟ ಘಟನೆ ನಡೆದಿದೆ. ಅಲ್ಲದೇ, ಹಲವರ ಅಂಗಾಂಗ ಹಾಳಾದ ಘಟನೆಯೂ ನಡೆದಿದೆ. ಹಾಗಾಗಿ ಹೈಟ್ ಹೆಚ್ಚಿಸಲು ಗುಳಿಗೆ, ಟಾನಿಕ್, ಪೌಡರ್‌ಗಳ ಮೊರೆ ಹೋಗಬೇಡಿ.