ಮೊದಲ ಭಾಗದಲ್ಲಿ ನಾವು ರಾಜ ಸನ್ಯಾಸಿಯನ್ನು ಅರಮನೆಗೆ ಕರೆಂದಿದ್ದರ ಬಗ್ಗೆ, ಸನ್ಯಾಸಿ ರಾಣಿಯನ್ನೇ ತನಗೊಪ್ಪಿಸಲು ಕೇಳಿದ್ದರ ಬಗ್ಗೆ ಕಥೆ ಹೇಳಿದ್ದೆವು. ಈಗ ಅದರ ಮುಂದದುವರಿದ ಭಾಗವಾಗಿ, ರಾಜ ರಾಣಿಯನ್ನು ಸನ್ಯಾಸಿಗೆ ಕೊಡುತ್ತಾನಾ..? ಮುಂದೇನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1
ತಾನೇ ಸನ್ಯಾಸಿಯನ್ನ ಅರಮನೆಗೆ ಕರೆ ತಂದಿದ್ದೇನೆ. ಇವರು ಶಕ್ತಿಶಾಲಿ ಸನ್ಯಾಸಿ ಬೇರೆ. ನಾನೇನಾದರೂ ಇವರ ಮಾತನ್ನ ಧಿಕ್ಕರಿಸಿದರೆ, ನನಗೂ ನನ್ನ ರಾಣಿಗೂ ಸಮಸ್ಯೆ ಎದುರಾಗುವುದು ಖಂಡಿತ. ಹಾಗಾಗಿ ಈ ಬಗ್ಗೆ ರಾಣಿಯ ಬಳಿಯೇ ಮಾತನಾಡಬೇಕೆಂದು ನಿರ್ಧರಿಸುತ್ತಾನೆ. ಸನ್ಯಾಸಿಯನ್ನ ಕರೆದುಕೊಂಡು ಅರಮನೆಗೆ ಹೋಗುತ್ತಾನೆ. ಅಲ್ಲಿ ರಾಣಿಯ ಬಳಿ ಎಲ್ಲ ವಿಷಯ ಹೇಳುತ್ತಾನೆ. ಅದಕ್ಕೆ ರಾಣಿ, ಮಹಾರಾಜರೇ ನಾವೇನೂ ಚಿಂತೆ ಮಾಡಬೇಡಿ. ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆಂದು ಹೇಳುತ್ತಾಳೆ.
ಮತ್ತು ಸನ್ಯಾಸಿಯ ಜೊತೆ ಕುಟೀರಕ್ಕೆ ಬರುತ್ತಾಳೆ. ಹಾಗೆ ಬಂದವಳೇ ಸನ್ಯಾಸಿಯ ಬಳಿ, ನನಗೊಂದು ಚೆಂದದ ಮನೆ ಬೇಕು ಎನ್ನುತ್ತಾಳೆ. ಸನ್ಯಾಸಿ ರಾಜನ ಬಳಿ ಹೋಗಿ ಮನೆ ಕೇಳುತ್ತಾನೆ. ಮನೆ ಸಿಗುತ್ತದೆ. ಆದರೆ ಈ ಮನೆ ಧೂಳಿನಿಂದ ತುಂಬಿದೆ, ಸ್ವಚ್ಛಗೊಳಿಸಿ ಎನ್ನುತ್ತಾಳೆ. ಸನ್ಯಾಸಿ ರಾಜನ ಬಳಿ ಹೋಗಿ ಇದೇ ರೀತಿ ಹೇಳುತ್ತಾನೆ. ರಾಜ ಮನೆಯನ್ನು ಸ್ವಚ್ಛ ಮಾಡಿಸುತ್ತಾನೆ. ಆಕೆ ತನಗೆ ಚೆಂದದ ಬಟ್ಟೆ, ಒಡವೆಗಳು ಬೇಕೆಂದು ಕೇಳುತ್ತಾಳೆ. ಪುನಃ ಸನ್ಯಾಸಿ ರಾಜನ ಬಳಿ ಹೋಗಿ, ಆಕೆಯ ಬೇಡಿಕೆ ಹೇಳುತ್ತಾನೆ. ಹೀಗೆ ಒಂದಲ್ಲ ಒಂದು ಬೇಡಿಕೆಗಳನ್ನ ಇಡುತ್ತಲೇ ಇರುತ್ತಾಳೆ ರಾಣಿ.
ಎಂಥ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತದೆ ..?
ಕೊನೆಗೆ ರಾಣಿ ಸನ್ಯಾಸಿಯನ್ನು ಕುರಿತು, ನೀವು ಸನ್ಯಾಸಿಯಾಗಿದ್ದವರು, ಜನ ನಿಮ್ಮ ಮಾತನ್ನು ಕೇಳುತ್ತಿದ್ದರು. ಅಷ್ಟೇ ಏಕೆ ರಾಜರೂ ನಿಮ್ಮ ಮಾತನ್ನೇ ಕೇಳುತ್ತಿದ್ದರು. ಆದರೆ ನೀವಿಗ ನನ್ನ ಗುಲಾಮರಾಗಿದ್ದೀರಿ. ಇದೆಷ್ಟು ಸರಿ ಎಂದು ಕೇಳುತ್ತಾಳೆ. ಆಗ ಸನ್ಯಾಸಿಗೆ ತನ್ನ ತಪ್ಪಿನ ಅರಿವಾಗುತ್ತದೆ. ನಾನು ಮೋಹ ಮದ ಮತ್ಸರ ಲೋಭಗಳನ್ನೆಲ್ಲ ತ್ಯಜಿಸಿ, ಸನ್ಯಾಸಿಯಾಗಿದ್ದವರು. ಆದರೆ, ರಾಜ ಅರಮನೆಗೆ ತಂದ ಕೂಡಲೇ ನನಗೆ ಸಮಯಕ್ಕೆ ತಕ್ಕಂತೆ ಊಟ ಹಾಕುತ್ತಿದ್ದ. ಅದು ಸಿಗದಿದ್ದಾಗ, ನಾನು ಕೋಪ ತೋರಿಸಿದೆ. ನಿಮ್ಮನ್ನು ನೋಡಿ ಮೋಹಗೊಂಡೆ. ಹೀಗೆ ನನ್ನ ಅವನತಿಗೆ ಮೋಹ, ಮದ ಮತ್ಸರ, ಲೋಭವೇ ಕಾರಣವಾಯಿತೆಂದು ಸನ್ಯಾಸಿ ಪಶ್ಚಾತಾಪ ಪಡುತ್ತಾರೆ. ಶ್ರೀಕೃಷ್ಣನ ಪ್ರಕಾರ, ಲೋಭ, ಮೋಹ, ಮದ ಮತ್ಸರಗಳೇ ಮನುಷ್ಯನ ಅವನತಿಗೆ ಮೂಲ ಕಾರಣ.