Thursday, December 12, 2024

Latest Posts

ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 2

- Advertisement -

ಈ ಕಥೆಗೆ ಸಂಬಂಧಿಸಿದಂತೆ ಹಿಂದಿನ ಭಾಗದಲ್ಲಿ ನಾವು ಭಿಕ್ಷುಕನಾಗಿದ್ದ ರಾಬರ್ಟ್ ಓರ್ವ ಹೆಂಗಸಿನ ಮನೆಗೆ ಹೋದ ಬಗ್ಗೆ, ಅಲ್ಲಿ ಆಕೆ ಅವನಿಗೆ ಪುಸ್ತಕ ಕೊಟ್ಟ ಬಗ್ಗೆ ಹೇಳಿದ್ದೆವು. ಈಗ ಆ ಪುಸ್ತಕದಲ್ಲಿ ಏನಿತ್ತು..? ಭಿಕ್ಷುಕನಾಗಿದ್ದ ರಾಬರ್ಟ್ ಹೇಗೆ ಶ್ರೀಮಂತನಾಗುತ್ತಾನೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 1

ಆ ಪುಸ್ತಕವನ್ನು ಓದಿದ ತಕ್ಷಣ ಅವನಿಗೇನೋ ಯೋಚನೆ ಬಂತು. ಆ ಸಮಯದಲ್ಲಿ ಅವನ ಜೇಬಿನಲ್ಲಿ ಒಂದು ರೂಪಾಯಿಯೂ ಇರಲಿಲ್ಲ. ಅವನು ರಾತ್ರಿ ಊಟಕ್ಕಾಗಿ ಬೇರೆಯವರ ಬಳಿ ಭಿಕ್ಷೆ ಬೇಡಬಹುದಿತ್ತು. ಆದ್ರೆ ಅವನು ಹಾಗೆ ಮಾಡಲಿಲ್ಲ. ಬದಲಾಗಿ ಅಲ್ಲೇ ಹತ್ತಿರದಲ್ಲಿದ್ದ ಅಂಗಡಿಗೆ ಹೋದ. ಆ ಅಂಗಡಿಯ ಮಾಲೀಕ ಅವನನ್ನು ಮುಂದಕ್ಕೆ ಹೋಗು ಎಂದರು. ಆದರೆ ಅವನು ಧೈರ್ಯದಿಂದ, ಸ್ಪೂರ್ತಿದಾಯಕವಾಗಿ ಮಾತನಾಡಿದ.

ನೋಡಿ ಸ್ವಾಮಿ ನಾನು ನಿಮ್ಮ ಬಳಿ ಭಿಕ್ಷೆ ಬೇಡಲು ಬಂದಿಲ್ಲ. ಹಾ ನಾನು ಈಗ ಒಂದೆರಡು ಗಂಟೆ ಮುಂಚೆ ಭಿಕ್ಷುಕನಾಗಿದ್ದೆ. ಆದ್ರೆ ಈಗ ನನ್ನ ಮನಸ್ಸು ಬದಲಾಗಿದೆ. ನಾನು ಕೂಡ ದುಡಿತು ಬದುಕಲು ಇಚ್ಛಿಸುತ್ತೇನೆ. ನಿಮ್ಮ ಅಂಗಡಿಯಲ್ಲಿ ಯಾವುದಾದರು ಕೆಲಸ ಖಾಲಿ ಇದ್ದರೆ ನನಗೆ ಕೆಲಸ ಕೊಡಿ. ಅದು ಚಿಕ್ಕ ಪುಟ್ಟ ಕೆಲಸವಾದರೂ ಆದೀತು. ನಾನು ದುಡಿದು ತಿನ್ನುತ್ತೇನೆ. ಇದಕ್ಕೆ ನೀವು ನನಗೆ ಸಹಾಯ ಮಾಡಬೇಕು ಎನ್ನುತ್ತಾನೆ.

ನಿಮ್ಮ ಲಿವರ್ ಸ್ಟ್ರಾಂಗ್ ಆಗಲು ಈ ಟಿಪ್ಸ್ ಅನುಸರಿಸಿ..

ಆಗ ಆ ಅಂಗಡಿಯ ಮಾಲಿಕ ಅವನ ಕೈಗೆ ಕೆಲ ವ್ಸತುಗಳನ್ನು ಕೊಟ್ಟು ಇದನ್ನು ಮಾಡಿಕೊಂಡು ಬಾ. ಆ ದುಡ್ಡಲ್ಲಿ ಸ್ವಲ್ಪ ಹಣವನ್ನು ನಿನಗೆ ಸಂಬಳವನ್ನಾಗಿ ನೀಡುತ್ತೇನೆ ಎನ್ನುತ್ತಾನೆ. ನಂತರ ಅಲ್ಲೇ ಸಮೀಪದಲ್ಲಿದ್ದ ಪೇಪರ್ ಅಂಗಡಿಗೆ ಹೋಗಿ ಕೆಲಸ ಕೇಳುತ್ತಾನೆ. ಪ್ರತಿದಿನ ಪೇಪರ್ ಮಾರುವ ಕೆಲಸ ಸಿಗುತ್ತದೆ. ಹೀಗೆ ಮೂರರಿಂದ ನಾಲ್ಕು ಚಿಕ್ಕ ಪುಟ್ಟ ಕೆಲಸ ಹುಡುಕಿಕೊಳ್ಳುತ್ತಾನೆ.

ನಿಯತ್ತಿನಿಂದ ಶ್ರಮವಹಿಸಿ ದುಡಿಯುತ್ತಾನೆ. ದುಡ್ಡು ಜಮಾಯಿಸುತ್ತಾನೆ. ಒಂದು ಬಾಡಿಗೆ ಮನೆ ಖರೀದಿಸುತ್ತಾನೆ. ಬಟ್ಟೆ ಖರೀದಿಸುತ್ತಾನೆ. ಮೊದಲಿನಂತೆ ಬ್ಯಾಂಕಿನಲ್ಲಿ ಹಣ ಕೂಡಿಡಲು ಶುರು ಮಾಡುತ್ತಾನೆ. ನಾಲ್ಕು ವರ್ಷ ಕಷ್ಟಪಟ್ಟು ದುಡಿದು, ತನ್ನದೊಂದು ಸ್ವಂತ ಅಂಗಡಿ ಇಡುತ್ತಾನೆ. ಅದರಿಂದ ಲಾಭ ಮಾಡಿಕೊಂಡು ಒಂದು ಬಂಗಲೆ, ಕಾರು ಖರೀದಿಸುತ್ತಾನೆ. ಚೆನ್ನಾಗಿ ದುಡ್ಡು ಮಾಡುತ್ತಾನೆ. ಇನ್ನೊಂದು ಮದುವೆ ಮಾಡಿಕೊಳ್ಳುತ್ತಾನೆ. ಸುಖವಾಗಿ ಸಂಸಾರ ನಡೆಸುತ್ತಾನೆ. ಆದ್ರೆ ಅವನು ಸಾಯುವ ತನಕವೂ ಆ ಹೆಂಗಸು ಕೊಟ್ಟ ಪುಸ್ತಕ ಅವನ ಬಳಿ ಇರುತ್ತದೆ.

ಹಾಗಾದ್ರೆ ಆ ಪುಸ್ತಕದಲ್ಲಿ ಅಂಥಾದ್ದೇನು ಬರೆದಿತ್ತು ಅಂದ್ರೆ, ನೀವು ದುಡ್ಡಿಲ್ಲದೇ ಕಂಗಾಲಾಗಿದ್ದೀರಾ..? ನೀವು ಬಡವರೆಂದು ನಿಮ್ಮ ಪತ್ನಿ ಮಮಕ್ಕಳು ನಿಮ್ಮಿಂದ ದೂರ ಹೋಗಿದ್ದಾರಾ..? ಕೆಲಸ ಸಿಗುತ್ತಿಲ್ಲವಾ..? ಹಾಗಾದ್ರೆ ಇಲ್ಲೊಂದು ವಿಷಯವಿದೆ ಅದನ್ನು ಓದಿ ಎಂದು ಬರೆದಿತ್ತು. ಅದರ ಇನ್ನೊಂದು ಪುಟದಲ್ಲಿ, ಯಾರು ಸಮಯಕ್ಕೆ ಹೆದರಿ ಕೂರುತ್ತಾರೋ, ಅವರೆಂದೂ ಮುಂದೆ ಬರುವುದಕ್ಕೆ ಸಾಧ್ಯವಿಲ್ಲ. ಹೊಸ ಹೊಸ ಅವಕಾಶವನ್ನು ಹುಡುಕಿಕೊಳ್ಳಿ. ಜೀವನ ಕಟ್ಟಿಕೊಳ್ಳಿ. ಸಮಯದ ಮುಂದೆ ಹೆದರಿ ಕೂರಬೇಡಿ. ನಿಮ್ಮ ಸಮಯವನ್ನು ಬದಲಾಯಿಸಿಕೊಳ್ಳಿ ಎಂದು ಬರೆದಿತ್ತು.

- Advertisement -

Latest Posts

Don't Miss