ಯಾರಿಗೆ ತಾನೇ ತಮ್ಮ ಮಕ್ಕಳು ಬುದ್ಧಿವಂತರಾಗಲಿ, ಸಂಸ್ಕಾರಿಯಾಗಲಿ, ಶಕ್ತಿವಂತರು, ಆರೋಗ್ಯವಂತರಾಗಲಿ ಅಂತಾ ಆಸೆ ಇರೋದಿಲ್ಲಾ ಹೇಳಿ. ಆದ್ರೆ ಎಲ್ಲರಿಗೂ ಹೀಗೆ ಉತ್ತಮ ಮಮಗು ಸಿಗುವುದಿಲ್ಲ. ಕೆಲ ಮಕ್ಕಳು ಶಕ್ತಿ ವಂತರಾಗಿರುತ್ತಾರೆ. ಆದ್ರೆ ಚುರುಕಾಗಿರುವುದಿಲ್ಲ. ಇನ್ನು ಕೆಲವರು ಸಂಸ್ಕಾರಿಯಾಗಿರುತ್ತಾರೆ. ಆದ್ರೆ ಕಲಿಯುವುದರಲ್ಲಿ ಜಾಣರಿರುವುದಿಲ್ಲ. ಹಾಗಾಗಿ ನಿಮಗೆ ಎಲ್ಲ ಅತ್ಯುತ್ತಮ ಗುಣವಿರುವ ಮಗು ಬೇಕಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ರಾಮಚರಿತ ಮಾನಸದ ಪ್ರಕಾರ ಈ 14 ಜನ ಬದುಕಿದ್ದು ಸತ್ತ ಹಾಗೆ.. ಭಾಗ 1
ಹಿಂದೂ ಧರ್ಮದ ಪ್ರಕಾರ, ಉತ್ತಮ ಸಂತಾನಕ್ಕಾಗಿ ಉತ್ತಮ ಆಹಾರ ಸೇವನೆ ತುಂಬಾ ಮುಖ್ಯ ಎನ್ನಲಾಗಿದೆ. ಅಂದ್ರೆ ನಾವು ಊಟ ಮಾಡುವ ಅನ್ನವನ್ನ ಮೊದಲು ದೇವರಿಗೆ ನೈವೇದ್ಯವನ್ನಾಗಿ ಇರಿಸಿ ನಂತರ ಊಟ ಮಾಡಬೇಕು. ನೈವೇದ್ಯ ಆಹಾರವನ್ನು ಗರ್ಭಿಣಿ ತಿಂದರೆ ಮಗುವಿನ ಆರೋಗ್ಯ ಅಭಿವೃದ್ಧಿಯಾಗತ್ತೆ ಅನ್ನೋ ನಂಬಿಕೆ ಇದೆ. ಆಹಾರದಲ್ಲಿ ಕೆಟ್ಟ ಅಂಶಗಳಿದ್ದರೆ, ಅದು ಕೂಡ ನೈವೇದ್ಯವಾದ ಬಳಿಕ ಹೊರಟು ಹೋಗುತ್ತದೆ ಅನ್ನೋ ನಂಬಿಕೆ ಇದೆ.
ಅಲ್ಲದೇ ನಿಮ್ಮ ವಿಚಾರ ಸ್ವಚ್ಛವಾಗಿರಬೇಕು. ತಂದೆಯಾಗಲಿ, ತಾಯಿಯಾಗಲಿ ಅಥವಾ ಮನೆಯಲ್ಲಿರುವ ಯಾವುದೇ ಸದಸ್ಯರಾಗಲಿ ಒಳ್ಳೆಯ ಮಾತುಗಳನ್ನೇ ಮಾತನಾಡಬೇಕು. ಯಾಕಂದ್ರೆ ಮಗು ಗರ್ಭದಲ್ಲಿರುವಾಗಲೇ, ಮನೆಯವರ ಮಾತನ್ನ ಕೇಳುವ ಅರ್ಹತೆಯನ್ನು ಹೊಂದಿರುತ್ತದೆ. ನೀವು ಒಳ್ಳೆಯದನ್ನ ಮಾತನಾಡಿದ್ರೆ, ಅದು ಕೂಡ ಒಳ್ಳೆಯದನ್ನೇ ಕಲಿಯುತ್ತದೆ. ನೀವು ಗಲೀಜು ಮಾತು, ಬೈಗುಳ ಬೈಯ್ಯುತ್ತಿದ್ದರೆ, ಮಗು ಕೂಡ ಅದೇ ರೀತಿ ಕೆಟ್ಟ ಮಾತನಾಡುತ್ತದೆ. ಅದಕ್ಕಾಗಿಯೇ ಗರ್ಭಿಣಿಯರು ಒಳ್ಳೆಯ ಹಾಡು, ಶ್ಲೋಕಗಳನ್ನ ಕೇಳಬೇಕು ಅಂತಾ ಹೇಳಲಾಗಿದೆ.
ರಾಮಚರಿತ ಮಾನಸದ ಪ್ರಕಾರ ಈ 14 ಜನ ಬದುಕಿದ್ದು ಸತ್ತ ಹಾಗೆ.. ಭಾಗ 2
ಇನ್ನು ಮಗು ಹುಟ್ಟಿದ ಮೇಲೆ ಅದರ ಎದುರಿಗೆ ಒಳ್ಳೆಯ ಕೆಲಸಗಳನ್ನೇ ಮಾಡಬೇಕು. ನೀವು ದೇರ ಪೂಜೆ ಮಾಡಿದ್ರೆ, ಇನ್ನೊಬ್ಬರಿಗೆ ಒಳ್ಳೆಯದನ್ನ ಮಾಡಿದ್ರೆ, ಮಾತಾಡಿದ್ರೆ, ಮಗು ಕೂಡ ಅದೇ ರೀತಿ ಮಾಡುತ್ತದೆ. ಇನ್ನು ಕೆಲವರು ಮಕ್ಕಳನ್ನು ಬೀಡಿ, ಸಿಗರೇಟು, ಗುಟಕಾಗಳನ್ನ ತರಲು ಅಂಗಡಿಗೆ ಕಳುಹಿಸುತ್ತಾರೆ. ಜೊತೆಗೆ ನೀನು ಒಂದೆರಡು ರೂಪಾಯಿ ಚಾಕೋಲೇಟ್ಸ್ ತೊಗೋ ಎನ್ನುತ್ತಾರೆ. ಆ ಮಗು ಚಾಕೋಲೇಟ್ಸ್ ಆಸೆಗೆ ಅಂಗಡಿಗೆ ಹೋಗತ್ತೆ. ಆದ್ರೆ ಅಲ್ಲಿರುವ ಕೆಟ್ಟ ಜನರನ್ನ ಕಂಡು, ಅದು ಕೂಡ ಕೆಟ್ಟ ನಡುವಳಿಕೆಯನ್ನೇ ಕಲಿಯುತ್ತದೆ. ಇಂದು ಚಾಕೋಲೇಟ್ಸ್ ತಿನ್ನುವ ಮಗು, ನಾಳೆ ಅಪ್ಪ ಅಮ್ಮನ ಕಣ್ಣು ತಪ್ಪಿಸಿ, ಬೀಡಿ ಸಿಗರೇಟು ಎಳೆಯುವುದನ್ನ ಕಲಿಯುತ್ತೆ. ಹಾಗಾಗಿ ಮಕ್ಕಳ ಕೈಯಲ್ಲಿ ಅಂಥ ಕೆಲಸವನ್ನ ಮಾಡಿಸಬೇಡಿ.
ಇನ್ನು ಗರುಡ ಪುರಾಣದ ಪ್ರಕಾರ, ಒಳ್ಳೆಯ ಮಗು ಹುಟ್ಟಲು ಪತಿ- ಪತ್ನಿ ಯಾವ ರೀತಿ ತಯಾರಿಯಾಗಬೇಕು ಎಂದು ಹೇಳಲಾಗಿದೆ. ಆ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..