Saturday, June 21, 2025

Latest Posts

ಅವಲಕ್ಕಿ ಮತ್ತು ಮೆಂತ್ಯೆ ಸೊಪ್ಪಿನಿಂದ ಈ ತಿಂಡಿಯನ್ನೊಮ್ಮೆ ಮಾಡಿ ನೋಡಿ..

- Advertisement -

ಮೆಂತ್ಯೆಸೊಪ್ಪು ಆರೋಗ್ಯಕ್ಕಷ್ಟೇ ಉತ್ತಮವಲ್ಲ. ಬದಲಾಗಿ ರುಚಿಕರವೂ ಹೌದು. ಇದರಿಂದ ತಯಾರಿಸಲ್ಪಡುವ ತಿಂಡಿ ಸಖತ್ ಟೇಸ್ಟಿಯಾಗಿರತ್ತೆ. ನಾವಿಂದು ಅವಲಕ್ಕಿ ಮತ್ತು ಮೆಂತ್ಯೆಸೊಪ್ಪನ್ನ ಸೇರಿಸಿ, ಮಾಡುವ ತಿಂಡಿ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಈ ತಿಂಡಿ ತಯಾರಿಸೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಕಪ್ ದಪ್ಪ ಅವಲಕ್ಕಿ, ಒಂದು ಕಪ್ ಮೆಂತ್ಯೆ, ಅರ್ಧ ಕಪ್ ಕಡಲೆ ಹಿಟ್ಟು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಚಿಟಿಕೆ ಅರಿಶಿನ, ಒಂದು ಸ್ಪೂನ್ ಶುಂಠಿ- ಹಸಿಮೆಣಸಿನ ಪೇಸ್ಟ್, ಒಂದು ಸ್ಪೂನ್ ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಖಾರದ ಪುಡಿ, ವೋಮ, ನಿಂಬೆರಸ, ಕೊಂಚ ಕೊತ್ತೊಂಬರಿ ಸೊಪ್ಪು, ಕರಿಯಲು ಬೇಕಾದಷ್ಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಅವಲಕ್ಕಿಯನ್ನು ತೊಳೆದು, 5 ನಿಮಿಷ ನೀರಿನಲ್ಲಿ ನೆನೆಸಿಡಿ. ನಂತರ ನೀರು ತೆಗೆದು, ಅವಲಕ್ಕಿಗೆ ಸ್ವಚ್ಛವಾಗಿ ತೊಳೆದ ಮೆಂತ್ಯೆ ಸೊಪ್ಪನ್ನ ಕತ್ತರಿಸಿ, ಸೇರಿಸಿ. ಜೊತೆಗೆ ಈರುಳ್ಳಿ, ಅರಿಶಿನ, ಶುಂಠಿ- ಹಸಿಮೆಣಸಿನ ಪೇಸ್ಟ್, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಖಾರದ ಪುಡಿ, ವೋಮ, ಉಪ್ಪು, ನಿಂಬೆರಸ, ಕಡಲೆ ಹಿಟ್ಟು, ಕೊಂಚ ಕೊತ್ತೊಂಬರಿ ಸೊಪ್ಪು ಇವೆಲ್ಲವನ್ನೂ ಸೇರಿಸಿ. ವಡೆ ಹಿಟ್ಟನ್ನ ತಯಾರು ಮಾಡಿ.  ಈಗ ವಡೆ ಶೇಪ್ ಮಾಡಿ, ಕಾದ ಎಣ್ಣೆಯಲ್ಲಿ ಕರಿದರೆ, ಅವಲಕ್ಕಿ ವಡೆ ರೆಡಿ.

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

ತರಕಾರಿಯಿಂದ ಪೋಷಕಾಂಶಗಳನ್ನ ಹೀಗೆ ಪಡೆಯಿರಿ..

ಸಕ್ಕರೆ ಬದಲು ನೀವು ಈ 5 ವಸ್ತುಗಳನ್ನ ಬಳಸಬಹುದು..

- Advertisement -

Latest Posts

Don't Miss