Friday, November 22, 2024

Latest Posts

ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 3

- Advertisement -

ಈ ಕಥೆಗೆ ಸಂಬಂಧಿಸಿದಂತೆ, ನಾವು ಈಗಾಗಲೇ ಎರಡು ಭಾಗದಲ್ಲಿ ವಿಂಗಡಿಸಿ, ಕಥೆಯನ್ನ ಹೇಳಿದ್ದೇವೆ. ಶ್ರೀವಿಷ್ಣು ಬ್ರಾಹ್ಮಣನ ವೇಷ ಧರಿಸಿ, ಜಿಪುಣನನ್ನ ಪರೀಕ್ಷಿಸಲು ಬರುತ್ತಾರೆ. ಆದ್ರೆ ಜಿಪುಣ, ತಾನು ಸತ್ತೆನೆಂದು ಸುಳ್ಳು ಹೇಳು ಎಂದು ಪತ್ನಿಯಲ್ಲಿ ಹೇಳಿ ಕಳುಹಿಸುತ್ತಾನೆ. ಪತ್ನಿ ಹಾಗೆ ಹೇಳಿದ ಬಳಿಕ, ಬ್ರಾಹ್ಮಣ ಏನು ಮಾಡುತ್ತಾನೆ..? ಬ್ರಾಹ್ಮಣ ಹಾಗೆ ಹೊರಟು ಹೋಗ್ತಾನಾ..? ಅಥವಾ ದಾನ ಪಡೆದೇ ಹೋಗ್ತಾನಾ..? ಕಥೆಯ ಮುಂದುವರಿದ ಭಾಗವನ್ನ ತಿಳಿಯೋಣ ಬನ್ನಿ..

ಅದಕ್ಕೆ ಆ ಬ್ರಾಹ್ಮಣ, ಅಯ್ಯೋ ದೇವರೇ, ಇಂಥ ದಾನಿಯನ್ನ ಇಷ್ಟು ಬೇಗ ಕರೆದುಕೊಂಡು ಬಿಟ್ಟೆಯಾ..? ಛೇ.. ಹೀಗಾಗಬಾರದಿತ್ತು. ನೀವೊಬ್ಬರೇ ಮನೆಯಲ್ಲಿದ್ದೀರಿ ಅನ್ನಿಸುತ್ತೆ. ನೀವೊಬ್ಬರೇ ಹೇಗೆ ಅವರ ಅಂತ್ಯಸಂಸ್ಕಾರ ಮಾಡ್ತೀರಿ.. ನಾನೂ ಈ ಕಾರ್ಯಕ್ಕೆ ಸಾಥ್ ಕೊಡುತ್ತೇನೆ. ಅವರ ಅಂತ್ಯಸಂಸ್ಕಾರ ಮಾಡಲು ನಾನು ನಿಮಗೆ ಸಹಾಯ ಮಾಡುತ್ತೇನೆ. ಎಲ್ಲರನ್ನೂ ಕರೆತರುತ್ತೇನೆ ಎನ್ನುತ್ತಾನೆ. ಸ್ವಲ್ಪ ಹೊತ್ತಿನಲ್ಲೇ ಜನ ಜಿಪುಣನ ಮನೆಮುಂದೆ ಸೇರುತ್ತಾರೆ.

ಏನು ಮಾಡುವುದೆಂದು ತಿಳಿಯದೇ, ಜಿಪುಣ ಸತ್ತಂತೆ ನಾಟಕವಾಡ್ತಾನೆ. ಅವನನ್ನ ಚಟ್ಟ ಕಟ್ಟಿ, ಅದರ ಮೇಲೆ ಮಲಗಿಸಿ, ಸ್ಮಶಾನಕ್ಕೆ ಕರೆದೊಯ್ಯಲಾಗತ್ತೆ. ಆದ್ರೆ ಅವನ ಪತ್ನಿ ಮಾತ್ರ, ಅವರು ಸತ್ತಿಲ್ಲ, ಅವರನ್ನ ಸ್ಮಶಾನಕ್ಕೆ ಕರೆದೊಯ್ಯಬೇಡಿ ಎಂದು ಕೂಗಾಡುತ್ತಾಳೆ. ಆದ್ರೆ ಅವರೆಲ್ಲರೂ, ಪತಿ ಸತ್ತಿದ್ದರಿಂದ ಆಕೆಗೆ ತಲೆ ಕೆಟ್ಟಿದೆ ಎಂದು ತಿಳಿದುಕೊಳ್ಳುತ್ತಾರೆ. ಮತ್ತು ತಮ್ಮ ಕೆಲಸವನ್ನ ಮುಂದುವರಿಸುತ್ತಾರೆ.

ಸ್ಮಶಾನಕ್ಕೆ ಜಿಪುಣನನ್ನು ಕರೆದೊಯ್ದು, ಚಿತೆಯ ಮೇಲೆ ಮಲಗಿಸುತ್ತಾರೆ. ಇನ್ನೇನು ಅಗ್ನಿ ಸ್ಪರ್ಶ ಮಾಡಬೇಕು ಎನ್ನುವಷ್ಟರಲ್ಲಿ, ಅವರನ್ನ ಆ ಬ್ರಾಹ್ಮಣ ವೇಷಧಾರಿಯಾಗಿದ್ದ ಶ್ರೀವಿಷ್ಣು ತಡೆಯುತ್ತಾನೆ. ಅಲ್ಲದೇ, ನನಗೊಂದು ಮಂತ್ರ ಬರುತ್ತದೆ. ಅದನ್ನು ನಾನು ಇವರ ಕಿವಿಯಲ್ಲಿ ಹೇಳುತ್ತೇನೆ. ಆಗ ಇವರು ಬದುಕಬಹುದು ಎನ್ನುತ್ತಾನೆ.

ಮತ್ತು ಆ ಜಿಪುಣನ ಕಿವಿಯಲ್ಲಿ, ನಾನು ನಿನ್ನ ಬಳಿ ಏನೂ ತೆಗೆದುಕೊಳ್ಳುವುದು ಎದ್ದೇಳು ಎಂದು ಹೇಳುತ್ತಾನೆ. ಆದ್ರೆ ಜಿಪುಣ ಕಣ್ಣು ಬಿಟ್ಟಾಗ, ಎದುರಿಗೆ ಬ್ರಾಹ್ಮಣ ಕಾಣುತ್ತಾನೆ. ಜಿಪುಣ ಮತ್ತೆ ಕಣ್ಣು ಮುಚ್ಚುತ್ತಾನೆ. ಅದಕ್ಕೆ ಬ್ರಾಹ್ಮಣ, ನಾನು ವಿಷ್ಣು, ನಿನ್ನನ್ನು ಪರೀಕ್ಷಿಸಲು ಭೂಮಿಗೆ ಬಂದಿದ್ದೆ. ಆದ್ರೆ ನೀವು ಜೀವಾನಾದ್ರೂ ಬಿಟ್ಟೇನು, ಆದ್ರೆ ದಾನ ಕೊಡುವುದಿಲ್ಲ ಎಂಬ ಬುದ್ಧಿಯವನು. ಹಾಗಾಗಿ ನಿನ್ನ ಬುದ್ಧಿಯ ಮುಂದೆ ನಾನು ಸೋತೆ ಎಂದು ಹೇಳುತ್ತಾನೆ.

ಮತ್ತು ನಿನಗೇನು ವರ ಬೇಕು ಕೇಳು ಎನ್ನುತ್ತಾನೆ. ಅದಕ್ಕೆ ಜಿಪುಣ, ನೀನಿಲ್ಲಿಂದ ಹೋದ್ರೆ ಸಾಕು ಎಂದು ಹೇಳುತ್ತಾನೆ. ನಂತರ ವಿಷ್ಣು ಪುನಃ ವೈಕುಂಠಕ್ಕೆ ಹೋಗುತ್ತಾನೆ. ಇತ್ತ ಜಿಪುಣ ಎದ್ದು ಮನೆ ನಡೆಯುತ್ತಾನೆ. ಮತ್ತು ತನ್ನ ಕಂಜೂಸುತನವನ್ನು ಮುಂದುವರಿಸುತ್ತಾನೆ.

ನಾಯಿಗಳು ನೀಡುತ್ತದೆ ಈ ಶುಭ ಮತ್ತು ಅಶುಭದ ಸಂಕೇತಗಳು..

ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ1

ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ2

- Advertisement -

Latest Posts

Don't Miss