ವಾಕಿಂಗ್ ಅನ್ನೋದು, ಈಸಿಯಾಗಿರುವ ವ್ಯಾಯಾಮವಿದ್ದ ಹಾಗೆ. ನಾವು ಈಗಾಗಲೇ ನಿಮಗೆ ಬೆಳಗ್ಗಿನ ವಾಕಿಂಗ್ ಮತ್ತು ರಾತ್ರಿ ವಾಕಿಂಗ್‌ನಲ್ಲಿ ಯಾವ ವಾಕಿಂಗ್ ಬೆಟರ್ ಅಂತಾ ಹೇಳಿದ್ದೇವೆ. ಇಂದು ನಾವು ಎಷ್ಟು ಹೆಜ್ಜೆ ವಾಕಿಂಗ್ ಮಾಡ್ಬೇಕು..? ಅದಕ್ಕಿಂತ ಹೆಚ್ಚು ವಾಕಿಂಗ್ ಮಾಡಿದ್ರೆ, ಏನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ..
ಆಯುರ್ವೇದದ ಪ್ರಕಾರ ಹೆಚ್ಚು ನಡೆಯಬಾರದು, ಹೆಚ್ಚು ಕುಳಿತುಕೊಳ್ಳಲೂಬಾರದು ಮತ್ತು ಹೆಚ್ಚು ಓಡಲೂಬಾರದು. ಇವೆಲ್ಲವೂ ಆರೋಗ್ಯಕ್ಕೆ ಹಾನಿಯುಂಟು ಮಾಡತ್ತೆ. ಅಲ್ಲದೇ, ಹೆಚ್ಚು ವ್ಯಾಯಾಮ ಮಾಡಲೂಬಾರದು. ನೀವು ಜಿಮ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಿ, ಹಾರ್ಟ್ ಅಟ್ಯಾಕ್‌ನಿಂದ ಮರಣ ಹೊಂದಿದ್ದನ್ನ ನೋಡಿರ್ತೀರಿ. ಹಾಗಾಗಿ ಹೆಚ್ಚಾಗಿ ಕಸರತ್ತನ್ನ ಕೂಡ ಮಾಡಬಾರದು ಅನ್ನೋ ನಿಯಮವಿದೆ.
5 ಕಿಲೋಮೀಟರ್‌ಗಿಂದ ಹೆಚ್ಚು ವಾಕಿಂಗ್ ಮಾಡಬಾರದು. ಕೆಲವರಿಗೆ ನಾವು ಹೆಚ್ಚು ನಡೆದಷ್ಟು ನಾವು ಹೆಚ್ಚು ಆರೋಗ್ಯಕರವಾಗಿ ಇರ್ತೇವೆ ಅನ್ನೋ ಕಲ್ಪನೆ ಇರುತ್ತದೆ. ಇದು ತಪ್ಪು ಕಲ್ಪನೆ. ನೀವು 5 ಕಿಲೋಮೀಟರ್‌ಗಿಂತ ಹೆಚ್ಚು ನಡೆದರೆ, ನಿಮ್ಮ ಹೃದಯಕ್ಕೆ ಹೆಚ್ಚು ಸಮಸ್ಯೆ ಬರುತ್ತದೆ. ಇದರಿಂದ ಆರೋಗ್ಯ ಸುಧಾರಿಸುವಲ್ಲಿ, ಆರೋಗ್ಯ ಏರುಪೇರಾಗುತ್ತದೆ. ಹಾಗಾಗಿ ಬರೀ 5 ಕಿಲೋಮೀಟರ್ ನಡೆಯಿರಿ. ಅಥವಾ ಅದಕ್ಕಿಂತ ಕಡಿಮೆಯೇ ನಡೆಯಿರಿ.
ಯಾಕೆ ನಾವು ಹೆಚ್ಚು ನಡೆಯಬಾರದು ಅಂದ್ರೆ, ನಡೆಯುವುದರಿಂದ ದೇಹದಲ್ಲಿ ವಾಯುವಿನ ಪ್ರಕೋಪ ಹೆಚ್ಚುತ್ತದೆ. ವಾಯು ಪ್ರಕೋಪ ಹೆಚ್ಚಾದ್ರೆ, ನಮ್ಮ ಮೆದುಳಲ್ಲಿ ಉಷ್ಣತೆ ತುಂಬಿಕೊಳ್ಳತ್ತೆ. ಮತ್ತು ನಮಗೆ ಯಾವಾಗ ಬೇಕಾದ್ರೂ ಪ್ಯಾರಾಲಿಸಸ್ ಬರಬಹುದು. ಅಥವಾ ಬ್ರೇನ್ ಸ್ಟ್ರೋಕ್ ಆಗಬಹುದು. ಹಾಗಾಗಿ ಹೆಚ್ಚು ವಾಕಿಂಗ್ ಮಾಡಬೇಡಿ.
ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..