ಮೊದಲೆಲ್ಲ ನದಿಗೋ, ಕೆರೆಗೋ ಹೋಗಿ ಮಿಂದು ಬರ್ತಿದ್ರು. ನಂತರದಲ್ಲಿ ಬಾತ್‌ರೂಮ್‌ನಲ್ಲಿ ಬಕೆಟ್ ಬಳಸಿ ಸ್ನಾನ ಮಾಡುತ್ತಿದ್ದರು. ಆದ್ರೆ ಇತ್ತೀಚೆಗೆ, ಶವರ್ ಮತ್ತು ಬಾತ್ ಟಬ್ ಇಲ್ಲಾ ಅಂದ್ರೆ ನಾಚಿಕೆಗೇಡಿನ ವಿಷಯ ಎಂಬಂತೆ ಜನ ಯೋಚಿಸುತ್ತಿದ್ದಾರೆ. ಹಾಗಾಗಿಯೇ ವೆರೈಟಿ ಡಿಸೈನ್ ಶವರ್ ಮತ್ತು ಬಾತ್ ಟಬ್ ಸೆಲೆಕ್ಟ್ ಮಾಡುತ್ತಿದ್ದಾರೆ. ಆದ್ರೆ ಶವರ್ ಬಳಸಿ ಸ್ನಾನ ಮಾಡಿದ್ರೆ, ಆರೋಗ್ಯಕ್ಕೆ ಕೆಲವು ನಷ್ಟವಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಶವರ್ ಬಳಸಿ ಸ್ನಾನ ಮಾಡೋಕ್ಕೆ ಖುಷಿ ಆಗಬಹುದು. ಆದ್ರೆ ನೀವು ಶವರ್ ಬಳಸಿ, ಸ್ನಾನ ಮಾಡುವುದರಿಂದ, ನಿಮ್ಮ ಚರ್ಮಕ್ಕೆ ತೊಂದರೆಯಾಗತ್ತೆ. ಅದರಿಂದ ತಲೆ ಸ್ನಾನ ಮಾಡಿದ್ರೆ ಹೆಚ್ಚು ಕೂದಲು ಉದುರುತ್ತೆ. ನೀವು ಬೇಕಾದ್ರೆ ಬಕೇಟ್‌ನಲ್ಲಿ ನೀರು ಬಳಸಿ ತಲೆ ಸ್ನಾನ ಮಾಡಿ. ಮತ್ತೊಂದು ದಿನ ಶವರ್ ಬಳಸಿ ತಲೆ ಸ್ನಾನ ಮಾಡಿನೋಡಿ. ನಿಮ್ಮ ಕೂದಲು ಹೆಚ್ಚು ಉದುರುವುದು ನೀವು ಶವರ್ ಬಳಸಿದಾಗ.
ಇನ್ನು ಬಕೇಟ್‌ನಲ್ಲಿ ನಾವು ಸ್ನಾನ ಮಾಡುವಾಗ, ನೀರನ್ನು ಹದವಾಗಿರಿ ಸ್ನಾನ ಮಾಡುತ್ತೇವೆ. ಆದರೆ ಶವರ್ ಬಳಸುವಾಗ. ಅದರಲ್ಲಿ ಬಿಸಿ ಬಿಸಿ ನೀರು ಬಂದರೂ, ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಹಾಗಾಗಿ ನಮಗೆ ಹಾಯಾಗಲಿ ಅಂತಾ ನಾವು ಅದರಲ್ಲಿ ಬಿಸಿ ನೀರು ಸ್ನಾನ ಮಾಡುತ್ತೇವೆ. ಅದರಿಂದಲೇ ನಮ್ಮ ಚರ್ಮ ಒಣಗಲು ಶುರುವಾಗುತ್ತದೆ. ಹಾಗಾಗಿ ನಾರ್ಮಲ್ ಆಗಿ ಸ್ನಾನ ಮಾಡುವುದು ಉತ್ತಮ.
ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..