Saturday, June 21, 2025

Latest Posts

ಉತ್ತಮ ನಿದ್ದೆಗಾಗಿ ಈ ಸೂತ್ರವನ್ನು ಅನುಸರಿಸಿ..

- Advertisement -

ರಾತ್ರಿ ಬೇಗ ಮಲಗಿ ಬೇಗ ಏಳುವವರು. ಅಥವಾ ಮಲಗಿದ ತಕ್ಷಣ ನಿದ್ದೆ ಮಾಡುವವರು ಪುಣ್ಯವಂತರು ಅಂತಾನೇ ಹೇಳಬಹುದು. ಯಾಕಂದ್ರೆ ಅವರು ಆರೋಗ್ಯವಂತರಾಗಿರ್ತಾರೆ. ಯಾಕಂದ್ರೆ ಕೆಲವರಿಗೆ ಏನೇ ಮಾಡಿದ್ರೂ ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡೋಕ್ಕೆ ಆಗೋದೇ ಇಲ್ಲಾ. ಅವರು ನಿದ್ದೆ ಬರಲು ಹಲವು ಟ್ರಿಕ್ಸ್ ಬಳಸುತ್ತಾರೆ. ಆದ್ರೂ ನಿದ್ರೆ ಬರಲ್ಲ. ಹಾಗಾಗಿ ನಾವಿಂದು ಉತ್ತಮ ನಿದ್ರೆ ಬರಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.

ಮೊದಲ ಸೂತ್ರ ಸಾಧನಾ ಸೂತ್ರ:  ನಿಮಗೆ ಉತ್ತಮ ನಿದ್ರೆ ಬರಬೇಕು ಎಂದಲ್ಲಿ ನೀವು ಬೆಳಿಗ್ಗೆ ಸೂರ್ಯನಿಗೆ ಮುಖ ಮಾಡಿ, ಸೂರ್ಯ ನಮಸ್ಕಾರ ಮಾಡಬೇಕು. ಪ್ರಾಣಾಯಾಮ, ಧ್ಯಾನ ಮಾಡಬೇಕು. ಇದರಿಂದ ನಿಮ್ಮ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ. ವಿಟಾಮಿನ್ ಡಿ ಸಿಕ್ಕಾಗ ಆರೋಗ್ಯ ಕೂಡ ಅಭಿವೃದ್ಧಿಯಾಗುತ್ತದೆ. ಇನ್ನು ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ನಿಮ್ಮ ಆರೋಗ್ಯದ ಜೊತೆ ಮೈಕಟ್ಟು ಕೂಡ ಚೆನ್ನಾಗಿರುತ್ತದೆ. ಅಲ್ಲದೇ, ಇದರಿಂದ ಸಿಗುವ ಶಕ್ತಿಯಿಂದ ಉತ್ತಮ ನಿದ್ರೆ ಬರಲು ಸಹಾಯ ಮಾಡುತ್ತದೆ.

ಎರಡನೇಯ ಸೂತ್ರ ಸಹಾಯ ಸೂತ್ರ: ಇದರ ಬಗ್ಗೆ ಕೇಳಿದ್ರೆ ನಿಮಗೆ ವಿಚಿತ್ರವೆನ್ನಿಸಬಹುದು. ಆದ್ರೆ ಈ ಕೆಲಸ ಮಾಡುವುದರಿಂದಲೂ, ನಿಮ್ಮ ಹಾರ್ಮೋನುಗಳಲ್ಲಿ ವ್ಯತ್ಯಾಸವಾಗುತ್ತದೆ. ಮತ್ತು ಉತ್ತಮ ನಿದ್ರೆ ಬರಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಪ್ರತಿದಿನ, ನಿಮ್ಮ ಗುರು ಹಿರಿಯರಿಗೆ. ನಿಮ್ಮ ಬಳಗದವರಿಗೆ, ಸ್ನೇಹಿತರಿಗೆ, ನಿಮ್ಮೊಂದಿಗೆ ಕೆಲಸ ಮಾಡುವವರಿಗೆ ಸಹಾಯ ಮಾಡಿ, ಅವರೊಂದಿಗೆ ತಾಳ್ಮೆಯಿಂದ ಇರಿ. ಇದರಿಂದ ನಿಮ್ಮ ಹಾರ್ಮೋನುಗಳಲ್ಲಿ ಉತ್ತಮ ವ್ಯತ್ಯಾಸವಾಗುತ್ತದೆ. ಇಂಥ ಕೆಲಸ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಇದರಿಂದ ನಿಮಗೆ ಉತ್ತಮ ನಿದ್ರೆ ಬರುತ್ತದೆ. ಇದನ್ನೇ ನೆಮ್ಮದಿಯ ನಿದ್ದೆ ಎಂದು ಕರೆಯುತ್ತಾರೆ.

ನಿಮ್ಮ ತಲೆಯಲ್ಲಿ ಬೇರೆಯವರ ಬಗ್ಗೆ ಅಸೂಯೆ, ಕೋಪ ತಾಪಗಳಿದ್ದಲ್ಲಿ, ಯಾವುದಾದರೂ ವಿಷಯಗಳ ಬಗ್ಗೆ ಟೆನ್ಶನ್ ಇದ್ದಲ್ಲಿ, ನಿಮ್ಮ ಮನಸ್ಸು ಒದ್ದಾಡುತ್ತಿರುತ್ತದೆ. ಈ ಕಾರಣಕ್ಕೆ ನಿಮಗೆ ನಿದ್ರೆ ಬರುವುದಿಲ್ಲ. ಹಾಗಾಗಿ ನೀವು ಈ ರೀತಿ ತಾಳ್ಮೆಯಿಂದಿದ್ದು, ಎಲ್ಲರಿಗೂ ಸಹಾಯ ಮಾಡುತ್ತ, ಖುಷಿ ಖುಷಿಯಾಗಿದ್ದರೆ, ಇದೇ ಖುಷಿ ನಿಮ್ಮ ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ.

ಮೂರನೇಯ ಸೂತ್ರ ಸತ್ಯ ಸೂತ್ರ. ಮಹರ್ಷಿ ಪತಂಜಲಿ ಎಂಬ ಯೋಗ ಗುರುಗಳು ಈ ಸೂತ್ರದ ಬಗ್ಗೆ ಹೇಳಿದ್ದಾರೆ. ಸತ್ಯ ನಮ್ಮ ನೆಮ್ಮದಿಗೆ ಹೇಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ನೀವು ಎಂದಿಗೂ ಸತ್ಯವನ್ನೇ ಮಾತನಾಡುತ್ತಿದ್ದರೆ, ನಿಮ್ಮ ಜೀವನದಲ್ಲಿ ಯಾವುದೇ ತೊಂದರೆ ಬರಲು ಸಾಧ್ಯವಿಲ್ಲ. ಮತ್ತು ನಿಮ್ಮ ಮನಸ್ಸು ಯಾವಾಗಲೂ ಶಾಂತ ರೀತಿಯಿಂದ ಇರುತ್ತದೆ. ನೀವೇನಾದ್ರೂ ಸುಳ್ಳು ಮಾತನಾಡಿದ್ದಲ್ಲಿ, ಅಯ್ಯೋ ನಾನು ಸುಳ್ಳು ಹೇಳಿಬಿಟ್ಟೆನಲ್ಲಾ. ಈಗ ಸತ್ಯ ಗೊತ್ತಾದ್ರೆ ಏನು ಮಾಡಲಿ ಎಂಬ ಕಳವಳ, ನಿಮ್ಮನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ. ಹಾಗಾಗಿ  ಯಾವಾಗಲೂ ಸತ್ಯವನ್ನೇ ಮಾತನಾಡಿ, ನೆಮ್ಮದಿಯಾಗಿ ನಿದ್ದೆ ಮಾಡಿ.

ಲವಂಗದ ನೀರಿನಿಂದ ಎಷ್ಟೆಲ್ಲ ಆರೋಗ್ಯ ಲಾಭವಿದೆ ಗೊತ್ತಾ..?

ಮಂಡಿನೋವು, ಕಾಲು ನೋವಿದ್ರೆ ಈ ಔಷಧಿ ಬಳಸಿ ನೋಡಿ..

ಯಾವ ಸಮಯದಲ್ಲಿ, ಯಾವ ರೀತಿ ಮತ್ತು ಎಷ್ಟು ಆಹಾರವನ್ನು ಸೇವಿಸಬೇಕು..?

- Advertisement -

Latest Posts

Don't Miss