Sunday, June 22, 2025

Latest Posts

ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ, ಸೌಂದರ್ಯಕ್ಕೆ ಬೇಕಾದ ಲಾಭ..

- Advertisement -

ಬಾಳೆಹಣ್ಣು ಎಷ್ಟು ಆರೋಗ್ಯಕರ ಹಣ್ಣು ಅಂತಾ ಎಲ್ಲರಿಗೂ ಗೊತ್ತು. ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆಯ ಸಮಸ್ಯೆ ಇದ್ದಲ್ಲಿ, ಬಾಳೆಹಣ್ಣು ತಿಂದ್ರೆ, ಸರಿಯಾಗತ್ತೆ ಅಂತಾ ಗೊತ್ತು. ಆದರೆ ಬರೀ ಬಾಳೆಹಣ್ಣಷ್ಟೇ ಅಲ್ಲ, ಬಾಳೆಹಣ್ಣಿನ ಸಿಪ್ಪೆಯೂ ಕೂಡ ಲಾಭಕಾರಿಯಾಗಿದೆ. ಹಾಗಾದರೆ, ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆ ಬಳಸಿ, ಅದರಿಂದ ಸೌಂದರ್ಯ ಲಾಭ ಪಡೆಯಬಹುದು ಅಂತಾ ತಿಳಿಯೋಣ ಬನ್ನಿ..

ಕಣ್ಣಿನ ಸುತ್ತಲೂ ಕಪ್ಪುಗಟ್ಟಿದ್ದರೆ, ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿದ್ರೆ, ಕಪ್ಪು ಕಲೆ ಹೋಗುತ್ತದೆ. ಆದರೆ ನೀವು ಕಣ್ಣಿನ ಸುತ್ತಲೂ ಬಾಳೆಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಮಸಾಜ್ ಮಾಡಬೇಕು. ಬಾಳೆಹಣ್ಣಿನ ಸಿಪ್ಪೆಯನ್ನು ತಣ್ಣೀರಿನಲ್ಲಿ ಅದ್ದಿಡಿ. ಅಥವಾ ಫ್ರಿಜ್‌ನಲ್ಲಿರಿಸಿ. ನಂತರ ಕಣ್ಣಿನ ಕೆಳಗಿರಿಸಿ. 15 ನಿಮಿಷ ಬಿಟ್ಟು, ತೆಗೆದರೆ, ಕಣ್ಣು ತಂಪಾಗುತ್ತದೆ.

ಬಾಳೆಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಹಲ್ಲುಜ್ಜಿದರೆ, ಹಲ್ಲು ಬಿಳಿಯಾಗುತ್ತದೆ. ಅಲ್ಲದೇ ನೀವು ಬಾಳೆಹಣ್ಣು ತಿನ್ನುವುದರ ಜೊತೆಗೆ ಬಾಳೆಹಣ್ಣಿನ ಸಿಪ್ಪೆ ತಿಂದರೂ ತೊಂದರೆ ಇಲ್ಲ. ಆದರೆ ಆ ಬಾಳೆಹಣ್ಣು ಹೆಚ್ಚು ಹಣ್ಣಾಗಿರಬಾರದು. ಹೀಗೆ ಬಾಳೆಹಣ್ಣು ಮತ್ತು ಸಿಪ್ಪೆ ತಿಂದರೆ, ಕ್ಯಾನ್ಸರ್ ಬರುವುದನ್ನ ಕೂಡ ತಡೆಗಟ್ಟಬಹುದು.

ಇನ್ನು ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿ, ಸ್ವಲ್ಪ ಹೊತ್ತು ಹಾಗೇ ಬಿಡಿ. ನಿಮ್ಮ ಮುಖದ ಮೇಲಿರುವ ಮೊಡವೆ, ಮೊಡವೆ ಕಲೆ ಎಲ್ಲ ಮಾಯವಾಗುತ್ತದೆ. ಚರ್ಮ ಸುಕ್ಕುಗಟ್ಟುವುದಿಲ್ಲ.

ಎದೆಹಾಲು ಹೆಚ್ಚಿಸಲು ಇದನ್ನು ಸೇವಿಸಿ..

ಬೇಸಿಗೆಯಲ್ಲಿ ಹಲಸಿನ ಹಣ್ಣನ್ನು ತಿನ್ನಲೇಬೇಕು ಅಂತಾ ಹೇಳೋದ್ಯಾಕೆ..?

ಮಾವಿನ ಕಾಯಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ..?

- Advertisement -

Latest Posts

Don't Miss