Devotional News: ನೀವು ಯಾವುದಾದರೂ ಫೋಟೋ, ವೀಡಿಯೋಗಳಲ್ಲಿ ಪೌರಾಣಿಕ ಸಿನಿಮಾಗಳಲ್ಲಿ ಭಜರಂಗಬಲಿ ಹನುಮಂತ್, ತನ್ನ ಎದೆಯನ್ನ ಸೀಳಿ ರಾಮನನ್ನು ತೋರಿಸುವ ಚಿತ್ರವನ್ನ ನೋಡಿರುತ್ತೀರಿ. ಆದರೆ ನಿಮಗೆ ಯಾಕೆ ಹನುಮಂತ ಆ ರೀತಿ ತನ್ನ ಎದೆ ಸೀಳಿ ತೋರಿಸುತ್ತಾನೆಂದು ಗೊತ್ತೇ..? ಇಂದು ನಾವು ಇದೇ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ರಾಮ ರರಾವಣನ ವಿರುದ್ಧ ವಿಜಯ ಸಾಧಿಸಿ, ಸೀತೆ, ಲಕ್ಷ್ಮಣ, ಹನುಮಂತನೊಂದಿಗೆ ಅಯೋಧ್ಯೆಗೆ ಬರುತ್ತಾನೆ. ಅಲ್ಲಿ ಅವರನಿಗೆ ಭರ್ಜರಿ ಸ್ವಾಗತ ಸಿಗುತ್ತದೆ. ರಾಮನ ಪಟ್ಟಾಭಿಷೇಕವೂ ನಡೆಯುತ್ತದೆ. ಇದಾದ ಬಳಿಕ ರಾಮ, ಇಷ್ಟು ದಿನದ ತನ್ನ ಯುದ್ಧದಲ್ಲಿ ಯಾರ್ಯಾರು ತನಗೆ ಸಾಥ್ ನೀಡಿದ್ದಾರೋ, ಅವರಿಗೆಲ್ಲ ಏನಾದರೂ ಉಡುಗೊರೆ ನೀಡಬೇಕೆಂದು ಯೋಚಿಸುತ್ತಾನೆ. ಲಕ್ಷ್ಮಣ ಸೇರಿ, ಹಲವು ಆಪ್ತರಿಗೆ ತನ್ನ ಆಭರಣಗಳನ್ನೇ ರಾಮ, ತೆಗೆದುಕೊಡುತ್ತಾನೆ. ಆದರೆ ಹನುಮಂತನಿಗೆ ಏನು ಕೊಡಬೇಕೆಂದು ರಾಮನಿಗೆ ತೋಚುವುದಿಲ್ಲ.
ಆಗ ಸೀತೆ ತಾನು ರಾಮನಿಗೆ ತನ್ನ ಮುತ್ತಿನ ಹಾರ ನೀಡುವುದಾಗಿ ಹೇಳಿ, ಹನುಮಂತನಿಗೆ ಹಾರ ನೀಡುತ್ತಾಳೆ. ಅರಮನೆಯಲ್ಲಿ ನೆರೆದಿದ್ದವರೆಲ್ಲ, ಹನುಮಂತ ಎಂಥ ಅದೃಷ್ಟವಂತ, ಅವನಿಗೆ ರಾಮನ ಪ್ರೀತಿಯ ಜೊತೆ, ಸೀತೆಯ ಉಡುಗೊರೆ, ಲಕ್ಷ್ಮಣನ ಗೆಳೆತನ ಸಿಕ್ಕಿದೆ ಎಂದು ಮಾತನಾಡಿಕೊಳ್ಳುತ್ತಾರೆ. ಹನುಮ ಸೀತೆ ಕೊಟ್ಟ ಉಡುಗೊರೆ ಪಡೆದು, ಧನ್ಯವಾದ ತಿಳಿಸುತ್ತಾನೆ. ಆದರೆ, ಆಕೆ ಕೊಟ್ಟ ಮುತ್ತಿನ ಹಾರದಿಂದ, ಒಂದೊಂದೇ ಮುತ್ತು ತೆಗೆಯುತ್ತ, ನೆಲಕ್ಕೆ ಹಾಕುತ್ತಾನೆ.
ಇದನ್ನು ಕಂಡ ಲಕ್ಷ್ಮಣನಿಗೆ ಕೋಪ ಬರುತ್ತದೆ. ತನ್ನ ಮಾತೆ ಸೀತಾದೇವಿ ಕೊಟ್ಟ ಉಡುಗೊರೆಯನ್ನ ಹನುಮ ಈ ರೀತಿ ಮಾಡುತ್ತಿದ್ದಾನಲ್ಲ ಎಂದು ಸಿಟ್ಟಾಗುತ್ತಾನೆ. ಈ ವೇಳೆ ಸೀತೆ, ಹನುಮನ ಬಳಿ ಬಂದು, ಏಕೆ ಈ ಉಡುಗೊರೆಯನ್ನು ಈ ರೀತಿ ನೆಲಕ್ಕೆ ಹಾಕುತ್ತಿದ್ದೀರಿ. ನಿಮಗೆ ನಾನು ಕೊಟ್ಟ ಉಡುಗೊರೆ ಇಷ್ಟವಾಗಲಿಲ್ಲವೇ ಎಂದು ಕೇಳುತ್ತಾಳೆ.
ಅದಕ್ಕೆ ಹನುಮ, ನೀವು ಕೊಟ್ಟ ಉಡುಗೊರೆ ಚೆನ್ನಾಗಿದೆ. ಆದರೆ ಅದರಲ್ಲಿ ರಾಮನ ಹೆಸರಿಲ್ಲ. ರಾಮನ ಅಂಶವೇ ಇಲ್ಲ. ಈ ಪ್ರಪಂಚದಲ್ಲಿ ಯಾವ ವಸ್ತುವಿನ ಮೇಲೆ ರಾಮನ ಅಂಶವಿರುವುದಿಲ್ಲ. ಅಥವಾ ಹೆಸರಿರುವುದಿಲ್ಲವೋ, ಅದನ್ನ ನಾನು ಎಂದಿಗೂ ಸ್ವೀಕರಿಸುವುದಿಲ್ಲ. ಹಾಗಾಗಿ ನೀವು ಕೊಟ್ಟ ಮುತ್ತಿನ ಮಾಲೆಯ ಒಂದೊಂದು ಮುತ್ತು ತೆಗೆದು ಕಂಡೆ, ಅದರಲ್ಲಿ ರಾಮನ ಹೆಸರಿದೆಯಾ ಎಂದು. ಆದರೆ ಅದರಲ್ಲಿ ರಾಮನ ಹೆಸರಿರಲಿಲ್ಲ ಎನ್ನುತ್ತಾನೆ.
ಆಗ ಲಕ್ಷ್ಮಣನಿಗೆ ಕೋಪ ಬರುತ್ತದೆ. ಅವನು ಹನುಮನೊಂದಿಗೆ ಇದೆಂಥಾ ಮೂರ್ಖತನ..? ರಾಮ ಎಲ್ಲೆಲ್ಲೂ ಹೇಗಿರಲು ಸಾಧ್ಯ..? ಇದು ನಿಮ್ಮ ಭ್ರಮೆ. ನಿಮ್ಮ ದೇಹದಲ್ಲೆಲ್ಲೂ ರಾಮನ ಹೆಸರೇ ಇಲ್ಲ. ಅವನ ಅಂಶವೇ ಇಲ್ಲ. ಹಾಗಾದರೆ ನೀವು ನಿಮ್ಮ ದೇಹವನ್ನೇ ತ್ಯಾಗ ಮಾಡುತ್ತೀರಾ..? ಎಂದು ವಾದಕ್ಕಿಳಿಯುತ್ತಾನೆ. ಆಗ ಹನುಮ ತನ್ನ ಎದೆ ಸೀಳಿ, ರಾಮ ಸೀತೆಯನ್ನು ತೋರಿಸಿ, ರಾಮ ನನ್ನ ಕಣ ಕಣದಲ್ಲೂ ಇದ್ದಾನೆ ಎಂದು ಹೇಳುತ್ತಾನೆ.
ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು ಅನ್ನೋದು ಯಾಕೆ ಗೊತ್ತಾ..?