Sunday, December 22, 2024

Latest Posts

ಭಾರತದ ಈ 5 ಮಂದಿರಗಳಲ್ಲಿ ರಾಕ್ಷಸರನ್ನು ಪೂಜಿಸಲಾಗುತ್ತದೆ.

- Advertisement -

Spiritual: ಭಾರತವು ಸನಾತನ ಧರ್ಮದ ಪದ್ಧತಿಗಳಿಗಾಗಿ ಪ್ರಸಿದ್ಧವಾಗಿದೆ. ಇಲ್ಲಿ ಕೋಟಿ ಕೋಟಿ ದೇವಸ್ಥಾನಗಳಿದ್ದು, ಅದರಲ್ಲಿ ಕೆಲವು ಕೆಲವು ಮಂದಿರಗಳು ಪ್ರಸಿದ್ಧವಾಗಿದೆ. ಏಕೆಂದರೆ ಈ ದೇವಸ್ಥಾನಗಳು ಪುರಾತನ ಕಾಲದ್ದಾಗಿದ್ದು, ಕೆಲವು ತನ್ನ ಅದ್ಭುತಗಳಿಂದ ಹೆಸರಾಗಿದ್ದರೆ, ಇನ್ನು ಕೆಲ ದೇವಸ್ಥಾನಗಳು ಶ್ರೀಮಂತಿಕೆಗೆ ಹೆಸರಾಗಿದೆ. ಆದರೆ ಭಾರತದ ಕೆಲ ದೇವಸ್ಥಾನಗಳಲ್ಲಿ ರಾಕ್ಷಸರನ್ನೂ ಪೂಜಿಸುತ್ತಾರೆ ಅಂದರೆ ನೀವು ನಂಬಲೇಬೇಕು. ಹಾಗಾದರೆ ರಾಕ್ಷಸರನ್ನು ಪೂಜಿಸುವ ಆ 5 ದೇವಸ್ಥಾನಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಮಂದಿರ ಕಾನ್ಪುರದ ರಾವಣ ಮಂದಿರ. ಇಲ್ಲಿ ಪ್ರತೀ ವಿಜಯದಶಮಿಯಂದು ರಾವಣನನ್ನು ಪೂಜಿಸಲಾಗುತ್ತದೆ. ಇಲ್ಲಿ ರಾವಣ ಶಕ್ತಿಯ ಸ್ವರೂಪವಾಗಿದ್ದಾನೆ. ವಿಜಯ ದಶಮಿಯನ್ನು ರಾವಣನಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಗುತ್ತದೆ. ನಂತರ ಭಕ್ತರ ದರ್ಶನಕ್ಕಾಗಿ ಅವಕಾಶ ಮಾಡಿಕೊಡಲಾಗುತ್ತದೆ. ಸಂಜೆ ಇನ್ನೊಂದು ಪೂಜೆ ಮಾಡಿದ ಬಳಿಕ, ಮತ್ತೆ ಒಂದು ವರ್ಷದ ತನಕ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಬಳಿಕ ಮುಂದಿನ ವಿಜಯದಶಮಿಗೆ ಈ ಬಾಗಿಲು ತೆಗಿಯಲಾಗುತ್ತದೆ.

ಎರಡನೇಯ ಮಂದಿರ ಝಾನ್ಸಿಯ ಅಹಿರಾವಣ, ಮಹಿರಾವಣ ದೇವಸ್ಥಾನ. ಇಲ್ಲಿ ಹನುಮಂತನ ದೇವಸ್ಥಾನವಿದೆ. ಆದರೆ ಹನುಮಂತನ ಜೊತೆಗೆ, ರಾವಣನ ಸಹೋದರರೂ, ರಾಕ್ಷಸರಾದ ಅಹಿರಾವಣ ಮತ್ತು ಮಹಿರಾವಣನನ್ನೂ ಪೂಜಿಸಲಾಗುತ್ತದೆ. ಲಂಕಾ ಕಾಂಡ್‌ ಎಂಬ ಪುಸ್ತಕದ ಪ್ರಕಾರ, ಹನುಮಂತ ಅಹಿರಾವಣ ಮತ್ತು ಮಹಿರಾವಣನ ವಧೆ ಮಾಡುತ್ತಾನೆ.  ಇಲ್ಲಿ ಭಕ್ತರು ಹಿಟ್ಟಿನ ದೀಪ ಹಚ್ಚುತ್ತಾರೆ. ಇದರಿಂದ ಅವರ ಸಕಲ ಮನೋಕಾಮನೆ ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ.

ಮೂರನೇಯ ಮಂದಿರ ಪೂತನೀಯ ಮಂದಿರ. ಗೋಕುಲದಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಆದರೆ, ಇಲ್ಲಿ ಪೂತನಿಗೂ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಪೂತನಿ ಸ್ತನಪಾನ ಮಾಡಿಸುವ ಮೂರ್ತಿ ಸ್ಥಾಪಿಸಲಾಗಿದೆ. ಇದರ ವಿಶೇಷತೆ ಅಂದರೆ, ಸಾಯಿಸುವ ಸಲುವಾಗಿ ಪೂತನಿ ಶ್ರೀಕೃಷ್ಣನಿಗೆ ಹಾಲು ಕುಡಿಸಿದ್ದರೂ ಕೂಡ, ಆಕೆ ತಾಯಿಯ ಸ್ಥಾನ ತುಂಬಿದ್ದಾಳೆ. ಹಾಗಾಗಿ ಪೂತನಿಯನ್ನು ಈ ದೇವಸ್ಥಾನದಲ್ಲಿ ತಾಯಿಯ ರೂಪದಲ್ಲಿ ಪೂಜಿಸಲಾಗುತ್ತದೆ.

ನಾಲ್ಕನೇಯ ಮಂದಿರ ಶಕುನಿಯ ಮಂದಿರ. ಛಲ, ಕಪಟ ಎಂದಾಕ್ಷಣ ನೆನಪಾಗುವ ಪಾತ್ರ ಎಂದರೆ, ಮಹಾಭಾರತದ ಶಕುನಿಯ ಪಾತ್ರ. ಕುರುವಂಶದವರ ನಾಶಕ್ಕಾಗಿ ಜೀವನ ಮುಡಿಪಿಟ್ಟಿದ್ದ ಶಕುನಿ, ದುರ್ಯೋನನ ಪ್ರತೀ ಹೆಜ್ಜೆಯಲ್ಲೂ ದ್ವೇಷದ ಪಾಠ ಹೇಳುತ್ತಿದ್ದ. ಪಾಂಡವರ ವಿರುದ್ಧ ಕೌರವರು ದ್ವೇಷ ಕಾರುವಂತೆ ಮಾಡಿದ್ದ. ಆದರೆ ಇವನನ್ನೂ ಕೂಡ ಭಾರತದಲ್ಲಿ ಪೂಜಿಸಲಾಗುತ್ತದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಶಕುನಿಯ ಮಂದಿರವಿದೆ. ಇಲ್ಲಿ ಶಕುನಿಯನ್ನು ಪದ್ಧತಿ ಪ್ರಕಾರವಾಗಿ ಪೂಜಿಸಲಾಗುತ್ತದೆ. ಇದರಿಂದ ಭಕ್ತರ ಸಕಲ ಮನೋಕಾಮನೆ ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ.

ಐದನೇಯ ಮಂದಿರ ಕೇರಳದ ಏಡಕ್ಕಡ್ ಎಂಬಲ್ಲಿ ಇರುವ ದುರ್ಯೋಧನನ ದೇವಸ್ಥಾನ. ದುರ್ಯೋಧನ ಪಾಂಡವರ ವಿರುದ್ಧ ದ್ವೇಷ ಸಾಧಿಸಿದ್ದ. ದ್ರೌಪದಿಯ ವಸ್ತ್ರಾಪಹರಣಕ್ಕೆ ಕಾರಣನಾಗಿದ್ದ. ಆದರೂ ಕೂಡ ಈ ದೇವಸ್ಥಾನದಲ್ಲಿ ದುರ್ಯೋಧನನನ್ನು ಪೂಜಿಸಲಾಗುತ್ತೆ. ಇಲ್ಲಿ ದುರ್ಯೋಧನನಿಗೆ ಶರಾಬು, ಎಲೆ, ಅಡಿಕೆ, ತೆಂಗಿನಕಾಯಿ, ಕೆಂಪು ಬಟ್ಟೆ, ಸುಗಂಧ ದ್ರವ್ಯವನ್ನ ನೈವೇದ್ಯ ಮಾಡುತ್ತಾರೆ.

ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿರುವ 18 ಮೆಟ್ಟಿಲಿನ ಅರ್ಥವೇನು..?

ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 1

ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 2

- Advertisement -

Latest Posts

Don't Miss