Sunday, July 6, 2025

Latest Posts

ಇಡ್ಲಿ ಎಂಥ ಆರೋಗ್ಯಕರ ತಿಂಡಿ ಅಂತಾ ಗೊತ್ತಾ..?

- Advertisement -

Health Tips: ಪ್ರತೀ ಹೊಟೇಲ್‌ನಲ್ಲಿ ಹೆಚ್ಚು ಸೇಲ್ ಆಗುವ ತಿಂಡಿ ಅಂದ್ರೆ ಅದು ಇಡ್ಲಿ. ಇಡ್ಲಿ- ಸಾಂಬಾರ್, ಇಡ್ಲಿ- ಚಟ್ನಿ, ಇಡ್ಲಿ- ವಡೆ. ಈ ಕಾಂಬಿನೇಷನ್ ಹೆಚ್ಚು ಸೇಲ್ ಆಗುತ್ತದೆ. ಕಳೆದ ವರ್ಷ ಕೋಟಿ ಕೋಟಿ ಇಡ್ಲಿ, ಫುಡ್ ಆ್ಯಪ್‌ಗಳ ಮೂಲಕ ಸೇಲ್ ಆಗಿದೆ. ಇನ್ನು ಫುಡ್ ಆ್ಯಪ್ ಬಳಸದೇ, ಡೈರೆಕ್ಟ್ ಹೊಟೇಲ್‌ಗೆ ಬಂದು ಇಡ್ಲಿ ತಿನ್ನುವವರು ಹಲವರಿದ್ದಾರೆ. ಹಾಗಾಗಿ ಇಡ್ಲಿ ಹೊಟೇಲ್‌ನಲ್ಲಿ ಹೆಚ್ಚಾಗಿ ಸೇಲ್ ಆಗುವ ಮತ್ತು ಆರೋಗ್ಯಕರ ತಿಂಡಿಯಾಗಿದೆ. ಹಾಗಾಗಿ ಡಯಟ್ ಮಾಡುವವರೂ ಕೂಡ ಇಡ್ಲಿಯನ್ನೇ ಸೆಲೆಕ್ಟ್ ಮಾಡ್ತಾರೆ. ಇಂದು ನಾವು ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಇಡ್ಲಿ ಹೇಗೆ ಆರೋಗ್ಯಕರ ಎಂದು ಹೇಳುವುದಾದಲ್ಲಿ, ಇಡ್ಲಿ ಮಾಡುವಾಗ, ಅಕ್ಕಿ ಉದ್ದನ್ನು ನೆನೆಸಿಟ್ಟು, ಹಿಟ್ಟು ರುಬ್ಬಿ ಫರ್ಮೆಂಟ್ ಮಾಡಿ, ಇಡ್ಲಿ ಹಿಟ್ಟು ತಯಾರಿಸುತ್ತಾರೆ. ಈ ಇಡ್ಲಿ ಹಿಟ್ಟಿನಿಂದ ಇಡ್ಲಿ ತಯಾರಾಗುತ್ತದೆ. ಈ ರೀತಿ ತಿಂಡಿ ಮಾಡುವುದರಿಂದ, ಇದು ಬೇಗ ಜೀರ್ಣವಾಗುತ್ತದೆ. ಅಲ್ಲದೇ, ಇಡ್ಲಿ ಮಾಡುವಾಗ ಎಣ್ಣೆ ಬಳಕೆ ಮಾಡುವುದಿಲ್ಲ. ಇದರಿಂದ ದೇಹದ ತೂಕವೂ ಇಳಿಯುತ್ತದೆ. ಹಾಗಾಗಿ ಡಯಟ್ ಮಾಡುವವರಿಗೆ ಇದು ಪರ್ಫೆಕ್ಟ್ ತಿಂಡಿ.

ಬಿಪಿ, ಶುಗರ್ ಇದ್ದವರು ಕೂಡ ಆರಾಮವಾಗಿ ಇಡ್ಲಿ ಸೇವನೆ ಮಾಡಬಹುದು. ಇದರಲ್ಲಿ ನಾರಿನಂಶ, ಪ್ರೋಟೀನ್ ಪ್ರಮಾಣ ಹೆಚ್ಚಾಗಿದ್ದು, ಬಿಪಿ, ಶುಗರ್ ಕಂಟ್ರೋಲ್ ಮಾಡುತ್ತದೆ. ಆದರೆ ಇದರ ಜೊತೆ ಬಳಸುವ ಚಟ್ನಿಯಲ್ಲಿ ಉಪ್ಪು ಕಡಿಮೆ ಇರಲಿ. ಇನ್ನು ಈ ಇಡ್ಲಿ ತೂಕ ಇಳಿಸಲು ಹೇಗೆ ಸಹಾಯ ಮಾಡುತ್ತದೆ ಎಂದರೆ, ಇಡ್ಲಿ ಸುಲಭವಾಗಿ ಜೀರ್ಣವಾಗುತ್ತದೆ. ಮತ್ತು ತುಂಬ ಹೊತ್ತು ಹೊಟ್ಟೆ ತುಂಬುವಂತೆ ಮಾಡುತ್ತದೆ. ಈ ವೇಳೆ ಹೆಚ್ಚು ಆಹಾರ ಸೇವಿಸುವ ಅಗತ್ಯವಿರುವುದಿಲ್ಲ. ಈ ರೀತಿಯಾಗಿ ನಿಮ್ಮ ತೂಕ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಬರೀ ಇಡ್ಲಿ ತಿನ್ನಲು ಆಗದಿದ್ದಲ್ಲಿ, ನೀವು ಇಡ್ಲಿ ಹಿಟ್ಟಿಗೆ ಕ್ಯಾರೆಟ್ ತುರಿ, ಕೊತ್ತೊಂಬರಿ ಸೊಪ್ಪು, ಕರಿಬೇವು, ಬಟಾಣಿ, ಓಟ್ಸ್, ರಾಗಿ, ರವಾ, ಇವನ್ನೆಲ್ಲ ಸೇರಿಸಿ, ಸವಿಯಬಹುದು. ರವಾ ಇಡ್ಲಿ, ಸೌತೇಕಾಯಿ ಇಡ್ಲಿ, ಅಕ್ಕಿ ಇಡ್ಲಿ, ಹೀಗೆ ವೆರೈಟಿ ಇಡ್ಲಿ ಮಾಡಿ ಸವಿಯಬಹುದು.

ಚಹಾ ಮಾಡುವಾಗ ಈ ಪದಾರ್ಥಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು..

ಸಿಸರಿನ್ ಆದವರು ಈ ಆಹಾರಗಳನ್ನು ಸೇವಿಸಬೇಕು..

ಈ ರೀತಿಯಾಗಿ ಮಗುವಿನ ಫೀಡಿಂಗ್ ಬಾಟಲಿಯನ್ನು ಸ್ವಚ್ಛಗೊಳಿಸಬೇಕು..

- Advertisement -

Latest Posts

Don't Miss