Spiritual: ಪ್ರತೀ ಬಾರಿಯೂ ಎಲ್ಲರಿಗೂ ಒಳ್ಳೆಯದ್ದೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅದೇ ರೀತಿ ಕೆಟ್ಟದ್ದೇ ಆಗುತ್ತದೆ ಅಂತಲೂ ಆಗುವುದಿಲ್ಲ. ಎಲ್ಲರಿಗೂ ಅವರವರ ಹಣೆಬರಹಕ್ಕೆ ತಕ್ಕಂತೆ, ಒಳ್ಳೆಯ ಕಾಲ, ಕೆಟ್ಟ ಕಾಲ ಬರುತ್ತದೆ. ಆದರೆ ಈ ಬಾರಿ ಶ್ರಾವಣ ಮಾಸದಲ್ಲಿ ಈ 5 ರಾಶಿಯವರ ಮೇಲೆ ಶಿವನ ಕೃಪೆ ಇರಲಿದೆಯಂತೆ. ಹಾಗಾದ್ರೆ ಯಾರು ಆ ಅದೃಷ್ಟವಂತರು ಅಂತಾ ತಿಳಿಯೋಣ ಬನ್ನಿ..
ಶ್ರಾವಣ ಮಾಸ ಎಂದರೆ ಶಿವನ ಮಾಸ ಎಂದೇ ಪ್ರಸಿದ್ಧ. ಏಕೆಂದರೆ, ಈ ಮಾಸದಲ್ಲಿ ಶಿವನ ಪೂಜೆ ಮಾಡುತ್ತಾರೆ. ಶ್ರಾವಣ ಸೋಮವಾರದಂದು ಹಲವರು ಉಪವಾಸ ಮಾಡಿ, ಶಿವನಿಗೆ ಜಲಾಭಿಷೇಕ ಮಾಡುತ್ತಾರೆ. ಹಾಗಾಗಿ ಶಿವ ತನ್ನ ಭಕ್ತರ ಮನೋಕಾಮನೆಗಳೆಲ್ಲ ಪೂರೈಸುತ್ತಾನೆಂಬ ನಂಬಿಕೆ ಇದೆ. ಈ ಬಾರಿ ಶ್ರಾವಣ ಮಾಸದಲ್ಲಿ ಶಿವ 5 ರಾಶಿಯವರ ಮೇಲೆ ಕೃಪೆ ತೋರಲಿದ್ದಾನಂತೆ. ಅವರ ಮನೋಕಾಮನೆಗಳೆಲ್ಲವನ್ನೂ ಪೂರ್ಣಗೊಳಿಸಲಿದ್ದಾನಂತೆ.
ವೃಷಭ ರಾಶಿ: ಈ ಶ್ರಾವಣದಲ್ಲಿ ವೃಷಭ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ಕುಟುಂಬಸ್ಥರಿಗೆ ನೀವು ಸಮಯ ಕೊಡುವಿರಿ. ಪರಿವಾರದಲ್ಲಿ ಭರಪೂರ ಖುಷಿ ಇರುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯವರು ಇಷ್ಟು ವರ್ಷ ಶ್ರಮಪಟ್ಟಿದ್ದಕೂ ಸಾರ್ಥಕವಾಗಲಿದೆ. ಈ ಶ್ರಾವಣ ಮಾಸದಲ್ಲಿ ನೀವು ಅಂದುಕೊಂಡ ಕೆಲಸಗಳು ಈಡೇರಲಿದೆ. ಈ ಸಮಯ ನಿಮಗೆ ಯಶಸ್ಸು ತಂದುಕೊಡಲಿದೆ. ಕುಟುಂಬಸ್ಥರೊಂದಿಗೆ ಸಂತಸದ ಕಾಲ ಕಳೆಯಲಿದ್ದೀರಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಅತ್ಯುತ್ತಮ ಅವಕಾಶಗಳು ಬರಲಿದೆ. ಆದರೆ ಆ ಅವಕಾಶಗಳನ್ನು ಅವರು ಸರಿಯಾಗಿ ಉಪಯೋಗಿಸಿಕೊಳ್ಳಬೇಕಷ್ಟೇ. ಅದರಲ್ಲೂ ಅವಿವಾಹಿತರಿಗೆ ವಿವಾಹವಾಗುವ, ಅಥವಾ ಮದುವೆ ಪ್ರಪೋಸಲ್ ಬರುವ ಸಾಧ್ಯತೆ ಇರುತ್ತದೆ. ಅದನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿದರೆ, ಈ ವರ್ಷ ವಿವಾಹದ ಕನಸು ನನಸಾಗುತ್ತದೆ.
ತುಲಾ ರಾಶಿ: ಈ ಶ್ರಾವಣ ತುಲಾ ರಾಶಿಯವರಿಗೆ ಯಶಸ್ಸು ತಂದು ಕೊಡಲಿದೆ. ಈ ಮಾಸದಲ್ಲಿ ನೀವು ಕೆಲ ಉತ್ತಮ ನಿರ್ಧಾರಗಳನ್ನು ಯೋಚಿಸಿ, ತೆಗೆದುಕೊಳ್ಳಬೇಕಾಗುತ್ತದೆ. ಆ ನಿರ್ಧಾರ ಸರಿಯಾಗಿದ್ದಲ್ಲಿ, ಆರ್ಥಿಕ ಪರಿಸ್ಥಿತಿ, ಕೌಟುಂಬಿಕ ಪರಿಸ್ಥಿತಿ ಅತ್ಯುತ್ತಮವಾಗಿ ಇರುತ್ತದೆ.
ಧನು ರಾಶಿ: ಧನುರಾಶಿಯವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಅದರಲ್ಲೂ ಕೆಲಸ ಹುಡುಕುತ್ತಿರುವವರಿಗೆ, ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸಂದರ್ಶನಕ್ಕೆ ಹೋಗುವಾಗ, ನಿರ್ಲಕ್ಷ್ಯ ಮಾಡದೇ, ಸಕಲ ಸಿದ್ಧತೆಗಳೊಂದಿಗೆ ಹೋಗಿ. ನೀವು ಸರಿಯಾದ ರೀತಿಯಲ್ಲಿ ನಿರ್ಧಾರ ಕೈಗೊಂಡಲ್ಲಿ, ಧನವಂತರಾಗುತ್ತೀರಿ.
ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 1
ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 2