Spiritual: ಗೋವಾ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಬೀಚ್, ಬಾರ್, ಪಬ್ ಇಷ್ಟೇ. ಆದರೆ ಅಲ್ಲಿಯೂ ಹಿಂದೂಗಳಿಗೆ ಸಂಬಂಧಿಸಿದ ಕೆಲ ಅತ್ಯದ್ಭುತ ದೇವಸ್ಥಾನಗಳಿದೆ. ಪೋರ್ಚುಗೀಸರು ದಾಳಿ ಮಾಡಿದ ಬಳಿಕವೂ ಅಲ್ಲಿ ಉಳಿದಿದ್ದ ಹಿಂದೂಗಳು ದೇವಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಾಗಾಗಿ ಇಂದು ನಾವು ಗೋವಾದಲ್ಲಿರುವ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮಹಾಲಸಾ ನಾರಾಯಣಿ ದೇವಸ್ಥಾನ. ಗೋವಾ ರಾಜ್ಯದ ಪೋಂಡಾದ ಮಾರ್ದೋಳ್‌ನಲ್ಲಿ ಮಹಾಲಸಾ ದೇವಿ ದೇವಸ್ಥಾನವಿದೆ. ಶ್ರೀವಿಷ್ಣುವಿನ ಮೋಹಿನಿ ರೂಪವೇ ಮಹಾಲಸಾ ನಾರಾಯಣಿ ಎಂದು ಹೇಳಲಾಗಿದೆ. ಈಕೆ ನಾಲ್ಕು ಕೈಗಳನ್ನು ಹೊಂದಿದ್ದು, ತ್ರಿಶೂಲ, ಕತ್ತಿ, ಕತ್ತರಿಸಿದ ರುಂಡ, ಕುಡಿಯುವ ಬಟ್ಟಲನ್ನು ಹಿಡಿದಿದ್ದಾಳೆ. ರಕ್ತವನ್ನು ನೆಕ್ಕುವ ರಾಕ್ಷಸನ ಮೇಲೆ ನಿಂತಿದ್ದಾಳೆ. ಈಕೆ ಗೌಡ ಸಾರಸ್ವತ ಬ್ರಾಹ್ಮಣರು ಸೇರಿ, ಹಲವು ಕೊಂಕಣಿಗರು ಪೂಜಿಸುವ ದೇವಿಯಾಗಿದ್ದಾಳೆ.
ಮಂಗೇಶಿ ದೇವಸ್ಥಾನ. ಪೋಂಡಾದ ಪ್ರಯೋಲ್ ಎಂಬಲ್ಲಿ ಮಂಗೇಶಿ ದೇವಸ್ಥಾನವಿದೆ. ಮಂಗೇಶಿ ಎಂದರೆ, ಶಿವನ ಮತ್ತೊಂದು ರೂಪವಾಗಿದೆ. ಈ ದೇವಸ್ಥಾನದ ಶಿಲ್ಪಕಲೆ ಉತ್ತಮವಾಗಿದ್ದು, ಇಲ್ಲಿರುವ ಬೃಹತ್ ಸ್ಥಂಭವೇ ಆಕರ್ಷಕವಾಗಿದೆ.
ಮಹಾಲಕ್ಷ್ಮೀ ದೇವಸ್ಥಾನ. ತನ್ನ ಸುಂದರ ಕಟ್ಟಡದಿಂದಲೇ ಕಣ್ಮನ ಸೆಳೆಯುವ ಮಹಾಲಕ್ಷ್ಮೀ ದೇವಸ್ಥಾನವು, ಗೋವಾದಲ್ಲಿರುವ ಹಿಂದೂ ದೇವಸ್ಥಾನದಲ್ಲಿ ಒಂದಾಗಿದೆ. ಗೋವಾ ರಾಜ್ಯದ ಪೋಂಡಾದಲ್ಲಿ ಈ ದೇವಸ್ಥಾನವಿದೆ. ಈ ನಿರ್ದಿಷ್ಟ ದೇವಾಲಯದ ಗರ್ಭಗುಡಿಯು ಭಗವತ್ಗೀತೆಯ ಪಂಥಗಳನ್ನು ಚಿತ್ರಿಸುವ 18 ಧಾರ್ಮಿಕ ಚಿತ್ರಗಳನ್ನು ಹೊಂದಿದೆ.
ಬ್ರಹ್ಮ ದೇವಸ್ಥಾನ. ಭಾರತದಲ್ಲಿ ಬ್ರಹ್ಮನ ದೇವಸ್ಥಾನವಿರುವುದೇ ವಿರಳ. ಪುಷ್ಕರ ಗಣ್ಯದಲ್ಲಿ ಬ್ರಹ್ಮನನ್ನು ಪೂಜಿಸಲಾಗುತ್ತದೆ. ಅದೇ ರೀತಿ ಗೋವಾದ ಸತಾರಿ ಜಿಲ್ಲೆಯ ವಾಲ್ಪೋಯ್ ಎಂಬಲ್ಲಿ ಬ್ರಹ್ಮನ ದೇವಸ್ಥಾನವಿದ್ದು, ಈ ದೇವಸ್ಥಾನದ ಕಟ್ಟಡ ಸುಂದರವಾಗಿದೆ. ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಬ್ರಹ್ಮನ ಕೃಪೆಗೆ ನೀವು ಪಾತ್ರರಾಗಬಹುದು.
ಈ ಗಿಡಗಳೇನಾದ್ರೂ ನಿಮ್ಮ ಮನೆಯಲ್ಲಿ ಇದ್ರೆ, ನಿಮ್ಮ ಮನೆಯ ನೆಮ್ಮದಿ ಹಾಳಾಗೋದು ಗ್ಯಾರಂಟಿ..




