Health Tips: ಎಲ್ಲರಿಗೂ ಸಿಹಿ ಬೆರೆಸಿದ ಚಾಕೋಲೇಟ್ಸ್ ಅಂದ್ರೆ ತುಂಬಾ ಇಷ್ಟವಾಗಿರತ್ತೆ. ಯಾಕಂದ್ರೆ ಅದು ಟೇಸ್ಟಿಯಾಗಿರತ್ತೆ. ಅದೇ ಡಾರ್ಕ್ ಚಾಕೋಲೇಟ್ ತಿನ್ನಕ್ಕೆ ಹಲವರು ಇಷ್ಟಪಡಲ್ಲ. ಯಾಕಂದ್ರೆ ಅದು ಕಹಿಯಾಗಿರತ್ತೆ. ಆದರೆ ಇದು ಆರೋಗ್ಯಕ್ಕೆ ಉತ್ತಮ. ಹಾಗಾದರೆ ಡಾರ್ಕ್ ಚಾಕೋಲೇಟ್ ಎಷ್ಟು ತಿನ್ನಬೇಕು..? ಯಾಕೆ ತಿನ್ನಬೇಕು..? ಇದರಿಂದಾಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಮಧುಮೇಹದಿಂದ ದೂರವಿರಿಸಲು ಇದು ಸಹಕಾರಿಯಾಗಿದೆ. ಪ್ರತಿದಿನ ಚಿಕ್ಕ ತುಂಡು ಡಾರ್ಕ್ ಚಾಕೋಲೇಟ್ ಸೇವನೆ ಮಾಡುವುದರಿಂದ, ನೀವು ಚಾಕೋಲೇಟ್ ತಿಂದಹಾಗೂ ಆಗುತ್ತದೆ. ಶುಗರ್‌ನಿಂದ ದೂರವಿದ್ದ ಹಾಗೂ ಆಗುತ್‌ತದೆ. ಏಕೆಂದರೆ, ಇದರಲ್ಲಿ, ಸಕ್ಕರೆ ಅಂಶ ಕಡಿಮೆ ಇದ್ದು, ಕಹಿ ಅಂಶ ಹೆಚ್ಚಾಗಿರುತ್ತದೆ. ಇದು ಕೋಕೋ ಬಿಜದ ಕಹಿಯಾಗಿದ್ದು, ಆರೋಗ್ಯಕ್ಕೂ ಉತ್ತಮವಾಗಿದೆ. ಹಾಗಾಗಿ ಡಾರ್ಕ್ ಚಾಕೋಲೇಟ್ ಸೇವನೆಯಿಂದ ಶುಗರ್ ದೂರವಿಡಬಹುದು.
ಪ್ರತಿದಿನ ಒಂದು ಚಿಕ್ಕ ತುಂಡು ಡಾರ್ಕ್ ಚಾಕೋಲೇಟ್ ಸೇವನೆ ಮಾಡುವವರ ಹೃದಯ ಆರೋಗ್ಯವಾಗಿರುತ್ತದೆ. ಏಕೆಂದರೆ, ಇದು ರಕ್ತದೊತ್ತಜ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ರಕ್ತದೊತ್ತಡ ಕಡಿಮೆಯಾದಾಗ, ಹೃದಯ ಆರೋಗ್ಯ ವೃದ್ಧಿಸುತ್ತದೆ. ಅಂಥವರಿಗೆ ಹಾರ್ಟ್ ಅಟ್ಯಾಕ್ ಬರಲು ಸಾಧ್ಯವಿಲ್ಲ. ಹಾಗಾಗಿ ಡಾರ್ಕ್ ಚಾಕೋಲೇಟ್ ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಹೃದಯಕ್ಕೆ ರಕ್ತದ ಹರಿವು ಹೆಚ್ಚಿಸುವ ಕಾರಣಕ್ಕೆ, ಹೃದಯದ ಆರೋಗ್ಯದ ಜೊತೆಗೆ ಮೆದುಳಿನ ಆರೋಗ್ಯ ಕಾಪಾಡುವಲ್ಲಿಯೂ ಡಾರ್ಕ್ ಚಾಕೋಲೇಟ್ ಸಹಕಾರಿಯಾಗಿದೆ. ಜೊತೆಗೆ ಪ್ರತಿದಿನ ಇದರ ಸೇವನೆಯಿಂದ ಪಿಡ್ಸ್ ರೋಗದಿಂದಲೂ ದೂರವಿರಬಹುದು. ಇದರ ಸೇವನೆ ನಿಮ್ಮನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತದೆ. ಆದರೆ ನೆನಪಿರಲಿ ದಿನಕ್ಕೆ ಚಿಕ್ಕ ತುಂಡು ಡಾರ್ಕ್ ಚಾಕೋಲೇಟ್ ಸೇವನೆ ಸಾಕು. ಅದಕ್ಕಿಂತ ಹೆಚ್ಚು ತಿಂದಲ್ಲಿ, ನಿಮ್ಮ ಆರೋಗ್ಯ ಸುಧಾರಿಸುವ ಬದಲು, ಹಾಳಾಗುತ್ತದೆ.
ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಈ ಅಪಾಯಕಾರಿ ಸಮಸ್ಯೆ ತಪ್ಪಿದ್ದಲ್ಲ..
ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲ ಉತ್ತಮ ಪ್ರಯೋಜನವಿದೆ ಗೊತ್ತಾ..?