Spiritual: ಯಾರಾದರೂ ಜೀವನದಲ್ಲಿ ಆಸೆಯನ್ನಿಟ್ಟುಕೊಂಡು, ಆತ್ಮಹತ್ಯೆ ಮಾಡಿಕೊಂಡು ಸತ್ತರೆ, ಅಂಥವರು ಪ್ರೇತಾತ್ಮವಾಗಿ ಬರುತ್ತಾರೆ. ಮತ್ತು ಕಾಟ ಕೊಡುತ್ತಾರೆ ಎಂದು ಹೇಳಲಾಗಿದೆ. ಕೆಲವರ ಪ್ರಕಾರ, ಇದು ಮೂಢನಂಬಿಕೆಯಾದರೆ, ಇನ್ನು ಕೆಲವರು ಈ ಘಟನೆ ನಡೆದಿದೆ ಎಂಬುದಕ್ಕೆ ಸಾಕ್ಷಿಯೂ ಕೊಡುತ್ತಾರೆ. ಹಾಗಾದ್ರೆ ಪ್ರೇತ ಓರ್ವ ಮನುಷ್ಯನ ದೇಹ ಸೇರುವುದಾದರೂ ಹೇಗೆ..? ಇದರ ಹಿಂದಿರುವ ಸತ್ಯವೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ನೀವು ಹೊರಗೆ ಹೋದಾಗ ಎಲ್ಲಾದರೂ ಮೂತ್ರ ವಿಸರ್ಜನೆ ಮಾಡುವುದಿದ್ದರೆ, ಆ ಜಾಗದಲ್ಲಿ ಯಾವುದೇ, ದೇವಸ್ಥಾನ, ಸ್ಮಶಾನ, ನಕಾರಾತ್ಮಕ ಶಕ್ತಿ ಇರುವ ಮರ ಏನಾದರೂ ಇದೆಯಾ ಎಂದು ಮೊದಲು ನೋಡಿಕೊಳ್ಳಿ. ಬಳಿಕ ದೇವರನ್ನು ನೆನೆದು, ಮೂತ್ರ ವಿಸರ್ಜನೆ ಮಾಡಿ. ಏಕೆಂದರೆ, ಕೆಲವು ಸ್ಥಳದಲ್ಲಿ ವಾಸಿಸುವ ಪ್ರೇತಾತ್ಮಗಳು ಮೂತ್ರ ವಿಸರ್ಜನೆ ಮಾಡಿದವರ ಹಿಂದೆ ಬರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಎಲ್ಲೇ ಮೂತ್ರ ವಿಸರ್ಜನೆ ಮಾಡುವುದಿದ್ದರೂ, ಮೊದಲು ಜಾಗ ಎಂಥದ್ದು ಎಂದು ತಿಳಿದು ಮೂತ್ರ ವಿಸರ್ಜನೆ ಮಾಡಿ. ಪುರುಷರಾದರೆ ಮೊದಲು ಗಾಯತ್ರಿ ಮಂತ್ರ ಜಪಿಸಿ, ಬಳಿಕ ಮೂತ್‌ರ ವಿಸರ್ಜನೆ ಮಾಡಿ.
ಎರಡನೇಯದಾಗಿ ಯಾವುದಾದರೂ ಪ್ರಾಚೀನ ಕಾಲದ ಕೋಟೆ, ಸ್ಥಳ, ಕಾಡು ಇಂಥ ಸ್ಥಳಗಳಿಗೆ ಹೋದಾಗ, ಕೆಲವರಿಗೆ ಜೋರಾಗಿ ಹೆಸರು ಕೂಗುವ ಚಟವಿರುತ್ತದೆ. ಆದರೆ ಅಂಥ ಚಟಗಳಿಂದಲೇ ಪ್ರೇತಾತ್ಮ ನಿಮ್ಮ ಹಿಂದೆ ಬರುತ್ತದೆ. ನೀವು ಕೂಗಿದ ಹೆಸರಿನ ಪ್ರೇತಾತ್ಮವಿದ್ದರೆ, ಅದು ನಿಮ್ಮ ಹಿಂದೆ ಬರುವ ಸಾಧ್ಯತೆಗಳಿದೆ. ಇಂಥ ಘಟನೆಗಳು ಅನೇಕ ಬಾರಿ ನಡೆದ ಕಾರಣ, ಈ ರೀತಿಯಾಗಿಯೂ ಪ್ರೇತ ನಿಮ್ಮ ದೇಹ ಪ್ರವೇಶಿಸಬಹುದು ಎನ್ನಲಾಗಿದೆ.
ಮೂರನೇಯದಾಗಿ ನೀವು ಎಲ್ಲೇ ಹೋದರೂ, ಸಿಹಿ ತಿಂಡಿ ತಿಂದಾದ ಬಳಿಕ ಬಾಯಿ ಮುಕ್ಕಳಿಸಿ. ಇಲ್ಲದಿದ್ದಲ್ಲಿ,. ನಿಮ್ಮ ಬಾಯಿಂದ ಸಿಹಿ ಸುವಾಸನೆ ಬರುತ್ತದೆ. ಇದರಿಂದ ಪ್ರೇತ ನಿಮ್ಮತ್ತ ಸೆಳೆಯುತ್ತದೆ. ಕೆಲವರು ತಿನ್ನುವ ಬಯಕೆ ಇಟ್ಟುಕೊಂಡು ಸತ್ತಿರುತ್ತಾರೆ. ಅಂಥವರ ಆತ್ಮ ಅತೃಪ್ತವಾಗಿ ತಿರುಗಾಡುತ್ತಿರುತ್ತದೆ. ಹಾಗಾಗಿ ಏನೇ ತಿಂದರೂ ಬಾಯಿ ಮುಕ್ಕಳಿಸುವುದನ್ನು ಮರೆಯಬೇಡಿ.
ನಾಲ್ಕನೇಯದಾಗಿ ಹೆಣ್ಣು ಮಕ್ಕಳು ಕೂದಲು ಬಿಟ್ಟು ತಿರುಗಬಾರದು. ಮಧ್ಯಾಹ್ನದ ಬಳಿಕ ಯಾವ ಹೆಣ್ಣು ಮಕ್ಕಳೂ ಕೂದಲು ಬಿಟ್ಟು ತಿರುಗಾಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ, ಪ್ರೇತಾತ್ಮಗಳು ಹೀಗೆ ಕೂದಲು ಬಿಟ್ಟು ತಿರುಗಾಡುವವರತ್ತ ಆಕರ್ಷಿತವಾಗುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಕೂದಲು ಬಿಟ್ಟು ತಿರುಗಾಡಬಾರದು. ಅಲ್ಲದೇ ರಾತ್ರಿ ಕನ್ನಡಿ ನೋಡಿ ಮಲಗಬಾರದು ಅಂತಲೂ ಹೇಳಲಾಗುತ್ತದೆ.
ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..
ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..