Friday, July 11, 2025

Latest Posts

ಜೇನುಹುಳು ಕಚ್ಚಿದರೆ ಏನು ಮಾಡಬೇಕು..?

- Advertisement -

Health Tips: ಜೇನುಗೂಡಿರುವ ಜಾಗಕ್ಕೆ ಹೋದಾಗ, ಅತೀ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ, ಜೇನುಹುಳು ಅಟ್ಯಾಕ್ ಮಾಡಿಬಿಡುತ್ತದೆ. ಜೇನುಹುಳುವಿನ ಅಟ್ಯಾಕ್ ಎಷ್ಟು ಡೇಂಜರ್ ಅಂದ್ರೆ, ನಮ್ಮ ಪ್ರಾಣವನ್ನ ಕೂಡ ಅದು ಕಿತ್ತುಕೊಳ್ಳಬಹುದು. ಹಾಗಾಗಿ ಆದಷ್ಟು ಹುಷಾರಾಗಿ ಇರುವುದು ಒಳ್ಳೆಯದು. ಇಂದು ನಾವು ಜೇನುಹುಳು ಕಚ್ಚಿದಾಗ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.

ಜೇನುಹುಳು ಕಚ್ಚಿದಾಗ, ಅದನ್ನು ಸರಿಪಡಿಸಲು ಇರುವ ಔಷಧವೆಂದರೆ ಜೇನುತುಪ್ಪ. ಜೇನುಹುಳು ಕಚ್ಚಿದ ಜಾಗದಲ್ಲಿ ಜೇನುತುಪ್ಪ ಹಚ್ಚಿದರೆ, ಗಾಯ ಬೇಗ ವಾಸಿಯಾಗುತ್ತದೆ.

ಎರಡನೇಯದಾಗಿ ಟೂತ್‌ಪೇಸ್ಟ್ ಬಳಸಬಹುದು. ಜೇನುಹುಳು ಕಚ್ಚಿದಾಗ, ಆ ಜಾಗಕ್ಕೆ ಟೂತ್‌ಪೇಸ್ಟ್ ಹಚ್ಚಿದರೆ, ಕೆರೆತ ಕಡಿಮೆಯಾಗುತ್ತದೆ. ಹೀಗೆ ಹಚ್ಚಿದ ಟೂತ್‌ಪೇಸ್ಟ್ 1 ಗಂಟೆಯಾದರೂ ಇರಬೇಕು.

ಪಪ್ಪಾಯಿ ಹಣ್ಣನ್ನು ಹಚ್ಚಬಹುದು. ಜೇನುಹುಳ ಕಚ್ಚಿದ ಜಾಗಕ್ಕೆ ಪಪ್ಪಾಯಿ ಹಣ್ಣನ್ನು ಸವರಿದರೆ, ತಂಪು ನೀಡುತ್ತದೆ. ಇದರಿಂದ ಕೆರೆತ ಕಡಿಮೆಯಾಗುತ್ತದೆ.

ಕೊನೆಯದಾಗಿ ಎಣ್ಣೆ. ಹಿರಿಯರ ಪ್ರಕಾರ, ಯಾವುದೇ ನೋವು, ಗಾಯಕ್ಕೆ ಮೊದಲನೇಯದಾಗಿ ನಾವು ಹಚ್ಚಬೇಕಾದ್ದೇ, ತೆಂಗಿನ ಎಣ್ಣೆ. ಹಾಗಾಗಿ ಜೇನುಹುಳು ಕಚ್ಚಿದ ಜಾಗಕ್ಕೆ ತೆಂಗಿನ ಎಣ್ಣೆಯನ್ನ ಸವರಿದರೆ, ಕೆರೆತ ಕಡಿಮೆಯಾಗುತ್ತದೆ.

ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೀಗೆ ಕಾಳಜಿ ವಹಿಸಿ..

ನಿಮ್ಮ ಮೂಳೆಯ ಆರೋಗ್ಯ ಸರಿಯಾಗಿ ಇರಬೇಕೆಂದಲ್ಲಿ, ಈ ವ್ಯಾಯಾಮ ಮಾಡಿ..

ಬೇಲದ ಹಣ್ಣಿನ ಜ್ಯೂಸ್ ರೆಸಿಪಿ

- Advertisement -

Latest Posts

Don't Miss