Monday, October 2, 2023

Latest Posts

ಮಳೆಗಾಲದಲ್ಲಿ ಕೆಸುವಿನ ಸೊಪ್ಪಿನ ಖಾದ್ಯ ಸೇವಿಸಬೇಕು ಅಂತಾ ಹೇಳುವುದು ಯಾಕೆ..?

- Advertisement -

Health Tips: ಮಳೆಗಾಲದಲ್ಲಿ. ಅದರಲ್ಲೂ ಶ್ರಾವಣ ಮಾಸದಲ್ಲಿ ಕೆಸುವಿನ ಸೊಪ್ಪಿನಿಂದ ಮಾಡುವ ಆಹಾರಗಳ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ. ಹಾಗಾಗಿಯೇ ಅಂತನೌಪಿಯಂದು, ಶ್ರಾವಣ ಮಾಸದಲ್ಲಿ ಕೆಸುವಿನ ಸೊಪ್ಪಿನ ಪತ್ರೋಡೆ, ಚಟ್ನಿ ಸೇರಿ ಇನ್ನೂ ಹಲವು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಹಾಗಾದರೆ, ಯಾಕೆ ಶ್ರಾವಣದಲ್ಲಿ ಕೆಸುವಿನ ಸೊಪ್ಪಿನ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..

ಹಸಿವನ್ನು ನಿಯಂತ್ರಿಸಿ, ದೇಹಕ್ಕೆ ಶಕ್ತಿ ನೀಡಿ, ನಮ್ಮ ತೂಕವನ್ನು ಸಮವಾಗಿ ಇರಿಸುವಲ್ಲಿ ಕೆಸುವಿನ ಎಲೆ ಸಹಾಯಕವಾಗಿದೆ. ಇದರ ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ. ಮತ್ತು ಹೆಚ್ಚು ಹಸಿವೂ ಆಗುವುದಿಲ್ಲ.

ದೇಹವನ್ನು ಶುದ್ಧ ಮಾಡುವಲ್ಲಿ ಕೆಸುವಿನ ಸೊಪ್ಪು ಸಹಕಾರಿಯಾಗಿದೆ. ಹಾಗಾಗಿಯೇ ಮಳೆಗಾಲದಲ್ಲಿ ಕೆಸುವಿನ ಸೊಪ್ಪು ತಿನ್ನಲೇಬೇಕು ಎನ್ನುವುದು. ಬಾಡಿ ಡೆಟಾಕ್ಸ್ ಮಾಡುವ ಅರ್ಹತೆಯನ್ನು ಕೆಸುವಿನ ಸೊಪ್ಪು ಹೊಂದಿರುವ ಕಾರಣಕ್ಕೆ, ಮಿತವಾಗಿಯಾದರೂ ಕೆಸುವಿನ ಸೊಪ್ಪಿನ ಪದಾರ್ಥದ ಸೇವನೆ ಮಾಡಬೇಕು.

ಇನ್ನು ಕೆಸುವಿನ ಸೊಪ್ಪಿನಲ್ಲಿ ಹಲವಾರು ಪೋಷಕಾಂಶಗಳಿದೆ. ಮಳೆಗಾಲದಲ್ಲಿ ಜ್ವರ, ಕೆಮ್ಮು ಬಂದು, ನಮ್ಮ ದೇಹದಲ್ಲಿ ಶಕ್ತಿ ಕುಂದಿರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಹಾಗಾಗಿ, ಕೆಸುವಿನ ಸೊಪ್ಪಿನ ಪದಾರ್ಥದ ಸೇವನೆಯಿಂದ ಆ ಪೋಷಕಾಂಶವೆಲ್ಲ ನಮ್ಮ ದೇಹ ಸೇರಿ, ಶಕ್ತಿ ತರುತ್ತದೆ.

ಮಳೆಗಾಲದಲ್ಲಿ ತ್ವಚೆಯ ಆರೋಗ್ಯ ಮತ್ತು ಕೂದಲ ಆರೋಗ್ಯ ಹಾಳಾಗುತ್ತದೆ. ನೀವು ಕೆಸುವಿನ ಸೊಪ್ಪಿನ ಬಳಕೆ ಮಾಡಿದ್ದಲ್ಲಿ, ನಿಮ್ಮ ಸೌಂದರ್ಯ ಸರಿಯಾಗಿ ಇರುತ್ತದೆ. ಇನ್ನು ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿರಿಸಿ, ಹೃದಯದ ಸಮಸ್ಯೆ ಸೇರಿ ಇತರೆ ಸಮಸ್ಯೆಗಳು ಬರದಂತೆ ಕಾಪಾಡುವಲ್ಲಿ ಕೆಸುವಿನ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ.

ಸಂಧಿವಾತದ ಸಮಸ್ಯೆ ತಡೆಗಟ್ಟುವಲ್ಲಿ ಕೆಸುವಿನ ಸೊಪ್ಪು ಸಹಕಾರಿಯಾಗಿದೆ. ಮಳೆಗಾಲದಲ್ಲಿ ಇಂಥ ಸಮಸ್ಯೆಗಳು ಹೆಚ್ಚು ಉಲ್ಬಣಿಸುತ್ತದೆ. ಈ ಕಾರಣಕ್ಕೆ ಕೆಸುವಿನ ಸೊಪ್ಪಿನ ಸೇವನೆ ಮಾಡಬೇಕು.

ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೀಗೆ ಕಾಳಜಿ ವಹಿಸಿ..

ನಿಮ್ಮ ಮೂಳೆಯ ಆರೋಗ್ಯ ಸರಿಯಾಗಿ ಇರಬೇಕೆಂದಲ್ಲಿ, ಈ ವ್ಯಾಯಾಮ ಮಾಡಿ..

ಬೇಲದ ಹಣ್ಣಿನ ಜ್ಯೂಸ್ ರೆಸಿಪಿ

- Advertisement -

Latest Posts

Don't Miss