Health Tips: ಬಾರ್ಲಿ ಸೇವನೆಯ ಬಗ್ಗೆ ಆಯುರ್ವೇದದಲ್ಲಿ ಚೆಂದವಾಗಿ ಉಲ್ಲೇಖಿಸಲಾಗಿದೆ. ಬಾರ್ಲಿ ಸೇವನೆಯಿಂದ ನಾವು ಹಲವು ರೋಗಗಳನ್ನು ತಡೆಯಬಹುದು. ಹಾಗಾದ್ರೆ ಬಾರ್ಲಿಯನ್ನು ಹೇಗೆ ಸೇವಿಸಬೇಕು..? ಇದರ ಸೇವನೆಯಿಂದ ಏನೇನು ಲಾಭವಿದೆ ಎಂದು ತಿಳಿಯೋಣ ಬನ್ನಿ..
ನೀವು ದಪ್ಪವಿದ್ದಲ್ಲಿ, ನಿಮ್ಮ ತೂಕವನ್ನು ಇಳಿಸಬೇಕೆಂದಲ್ಲಿ, ಪ್ರತಿದಿನ ಬಾರ್ಲಿ ನೀರು ಕುಡಿಯಬೇಕು. ನಿಯಮಿತವಾಗಿ ಬಾರ್ಲಿ ನೀರಿನ ಸೇವನೆ ಮಾಡುವುದರಿಂದ ದೇಹದ ತೂಕ ಆರೋಗ್ಯಕರವಾಗಿ ಇಳಿಯುತ್ತದೆ. ಅಗತ್ಯವಿದ್ದಲ್ಲಿ ಬಾರ್ಲಿಯ ರೊಟ್ಟಿ ಅಥವಾ ಚಪಾತಿ ಮಾಡಿಯೂ ಸೇವಿಸಬಹುದು. ದೇಹದಲ್ಲಿ ಕಲ್ಲಾಗುವುದನ್ನು ತಡೆಯಲು ನೀವು ಬಾರ್ಲಿ ನೀರನ್ನು ಸೇವನೆ ಮಾಡಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಾರ್ಲಿ ಸಹಾಯ ಮಾಡುತ್ತದೆ. ಹಿಮೋಗ್ಲೋಬಿನ್ ಹೆಚ್ಚಳಕ್ಕೂ ಬಾರ್ಲಿ ಸಹಕಾರಿಯಾಗಿದೆ.
ಅಲ್ಲದೇ, ಕ್ಯಾಲ್ಸಿಯಂ ಅಂಶ ಇದರಲ್ಲಿದ್ದು, ಬಾರ್ಲಿ ಸೇವನೆಯಿಂದ ಹಲ್ಲು, ಮೂಳೆಗಳು ಗಟ್ಟಿಯಾಗುತ್ತದೆ. ಕ್ಯಾನ್ಸರ್ ತಡೆಗಟ್ಟಲು ಬಾರ್ಲಿ ಸಹಕಾರಿಯಾಗಿದೆ. ದೇಹದಲ್ಲಿ ಉಷ್ಣತೆ ಹೆಚ್ಚಾಗಿ, ಉರಿಮೂತ್ರ ಸಮಸ್ಯೆ ತಡೆಗಟ್ಟಲು ಬಾರ್ಲಿ ಸೇವಿಸಬಹುದು. ಏಕೆಂದರೆ ಬಾರ್ಲಿ ನೀರು ದೇಹಕ್ಕೆ ತಂಪು ನೀಡುತ್ತದೆ. ಇನ್ನು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲವಾದಲ್ಲಿ, ಬಾರ್ಲಿ ನೀರು ಸೇವಿಸಿ. ಇದರಿಂದ ಜೀರ್ಣಕ್ರಿಯೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.