Spiritual: ಹುಟ್ಟಿದ ಪ್ರತೀ ಮನುಷ್ಯ ಸಾವನ್ನಪ್ಪಲೇಬೇಕು. ಇದು ವಿಧಿ ಲಿಖಿತ. ಇದನ್ನು ನಾವು ಬದಲಿಸಲು ಆಗುವುದಿಲ್ಲ. ಇನ್ನು ಹಿಂದೂ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು, ಸಾವಿನ ತನಕ ಹಲವಾರು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಅಲ್ಲದೇ, ಸಾವಿನ ಮನೆಗೆ ಹೋದಾಗ, ಮಾನವೀಯತೆಯೂ ಮುಖ್ಯವಾಗುತ್ತದೆ. ಹಾಗಾಗಿ ಇಂದು ನಾವು ಅಂತ್ಯಕ್ರಿಯೆಗೆ ಹೋದಾಗ ಮತ್ತು ಹೋಗಿ ಬಂದ ಬಳಿಕ ಎಂಥ ಕೆಲಸಗಳನ್ನು ಮಾಡಬಾರದು ಅಂತಾ ಹೇಳಲಿದ್ದೇವೆ.
ಸಾವಿನ ಮನೆಗೆ ಹೋದಾಗ, ಸತ್ತ ವ್ಯಕ್ತಿ ಬದುಕಿರುವಾಗ ಎಂಥದ್ದೇ ಕೆಲಸ ಮಾಡಿರಲಿ, ಅಥವಾ ಸಾಲ ತೆಗೆದುಕೊಂಡು, ಅದನ್ನು ವಾಪಸ್ ಕೊಡದೇ ಹಾಗೇ ಹೋಗಲಿ. ಯಾವುದೇ ಸ್ಥಿತಿ ಇರಲಿ. ಆದರೆ ಸತ್ತಾಗ ಮಾತ್ರ ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದು, ಬಯ್ಯುವುದು, ಮನೆಯವರ ಮನಸ್ಸು ನೋಯಿಸುವಂಥ ಕೆಲಸ ಮಾಡುವುದೆಲ್ಲ ಮಾಡಬೇಡಿ.
ಎರಡನೇಯದಾಗಿ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಗೆ ಮುಂದೆ ಒಳ್ಳೆಯ ಕುಟುಂಬದಲ್ಲಿ ಜನ್ಮ ಸಿಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಈ ವೇಳೆ ಶವಕ್ಕೆ ನಮಸ್ಕರಿಸಲಾಗುತ್ತದೆ. ಆಗ ಮನಸ್ಪೂರ್ತಿಯಾಗಿ ನಮಸ್ಕಾರ ಮಾಡಬೇಕೆ ಹೊರತು. ಒಲ್ಲದ ಮನಸ್ಸಿನಿಂದ ನಮಸ್ಕಾರ ಮಾಡಬಾರದು. ನಿಮಗೆ ಆ ವ್ಯಕ್ತಿಯನ್ನು ಕಂಡರೆ ಆಗುವುದಿಲ್ಲವೆಂದಲ್ಲಿ, ಅಲ್ಲಿ ಹೋಗಬೇಡಿ. ಆದರೆ ಅಲ್ಲಿ ಹೋದಾಗ, ಮನಸ್ಸಿನಿಂದ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ.
ಇನ್ನು ನೀವು ಯಾವುದಾದರೂ ದೇವರಿಗೆ ಸಂಬಂಧಿಸಿದ ದಾರವನ್ನು ಕೈಗೋ, ಕುತ್ತಿಗೆಗೋ ಕಟ್ಟಿಕೊಂಡಿರುತ್ತೀರಿ. ಅಥವಾ ರುದ್ರಾಕ್ಷಿಯನ್ನು ಧರಿಸಿರುತ್ತೀರಿ. ಸಾವಿನ ಮನೆಗೆ ಹೋಗುವಾಗ ಅದನ್ನು ತೆಗೆದಿಟ್ಟು ಹೋಗಬೇಕು. ಏಕೆಂದರೆ ಇದು ಪವಿತ್ರವಾದ ವಸ್ತುವಾಗಿರುತ್ತದೆ. ಇದನ್ನು ಮೈಲಿಗೆ ಇರುವಲ್ಲಿಗೆ ಕೊಂಡೊಯ್ಯಬಾರದು. ಅದರಿಂದ ಆ ವಸ್ತುವಿನ ಪಾವಿತ್ರ್ಯತೆ ಹಾಳಾಗುತ್ತದೆ.
ಇನ್ನು ಅಂತ್ಯಸಂಸ್ಕಾರ ಮುಗಿಸಿ, ಬಂದ ಬಳಿಕ, ತಲೆಸ್ನಾನ ಮಾಡಿಯೇ, ಎಲ್ಲರನ್ನೂ ಮುಟ್ಟಬೇಕು. ಏಕೆಂದರೆ, ಶವದ ಮೇಲೆ ಇರುವ ಕ್ರಿಮಿಕೀಟಗಳು ಗೊತ್ತಿಲ್ಲದೇ, ನಮ್ಮ ಮೈಗೆ ತಾಕುತ್ತದೆ. ಅದನ್ನು ಹಾಗೇ ಬಿಟ್ಟರೆ, ರೋಗ ರುಜಿನಗಳು ಬರುತ್ತದೆ. ಅದು ಇನ್ನೊಬ್ಬರ ಮೈಗೂ ತಾಕುತ್ತದೆ. ಆ ಕಾರಣಕ್ಕೆ ತಲೆಸ್ನಾನ ಮಾಡಿಯೇ, ಇನ್ನೊಬ್ಬರನ್ನು ಮುಟ್ಟಬೇಕು.
ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?

