ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 5

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಈ ಮೊದಲ ಮೂರು ಭಾಗದಲ್ಲಿ ವಿಷ್ಣುವಿನ 16 ಅವತಾರಗಳ ಬಗ್ಗೆ ಹೇಳಿದ್ದೆವು. ಈ ಭಾಗದಲ್ಲಿ ಇನ್ನೂ 4 ಅವತಾರಗಳ ಬಗ್ಗೆ ಹೇಳಲಿದ್ದೇವೆ.

ಹದಿನೇಳನೇಯ ಅವತಾರ ಹಯಗ್ರೀವ ಅವತಾರ. ಹಯಗ್ರೀವ ಎಂದರೆ, ಕುದುರೆ ಮುಖ ಮತ್ತು ಮಾನವ ಶರೀರದ ಅವತಾರ. ಬ್ರಹ್ಮನ ವೇದಗ್ರಂಥವನ್ನು ಕದ್ದ ಮಧು ಕೈಟಭರು, ಪಾತಾಳ ಲೋಕಕ್ಕೆ ಹೋಗಿ, ಬಚ್ಚಿಟ್ಟುಕೊಂಡರು. ಅವರ ಸಂಹಾರಕ್ಕಾಗಿ ಶ್ರೀವಿಷ್ಣು ಹಯಗ್ರೀವ ಅವತಾರವನ್ನು ತಾಳಿದ. ಇನ್ನೊಂದು ಕಥೆಯ ಪ್ರಕಾರ, ಹಯಗ್ರೀವ ಎಂಬ ರಾಕ್ಷಸನಿಗೆ ದೇವಿ ಭಗವತಿ ಅರ್ಧ ಮಾನವ ಮತ್ತು ಅರ್ಧ ಕುದುರೆ ಮುಖವುಳ್ಳ ವ್ಯಕ್ತಿಯಿಂದ ತನ್ನ ಸಾವಾಗಬೇಕು ಎಂದು ಬೇಡಿದ್ದನಂತೆ. ಅದಕ್ಕಾಗಿ ವಿಷ್ಣುವಿನ ಶಿರಕ್ಕೆ ಕುದುರೆ ಶಿರ ಸೇರಿಸಿ, ಹಯಗ್ರೀವ ರಾಕ್ಷಸನ ಸಂಹಾರ ಮಾಡಲಾಯಿತು.

ಹದಿನೆಂಟನೇಯ ಅವತಾರ ಪರಶುರಾಮ ಅವತಾರ. ಬ್ರಾಹ್ಮಣ ರೂಪದಲ್ಲಿದ್ದ ಕ್ಷತ್ರೀಯನೇ ಪರಶುರಾಮ. ಶಿವ ನೀಡಿದ ಪರಶುವಿನಿಂದ ಇವನಿಗೆ ಪರಶುರಾಮನೆಂಬ ಹೆಸರು ಬಂತು. ಹಲವು ರಾಕ್ಷಸರ ಸಂಹಾರ ಮಾಡಲು, ಮತ್ತು ಹಲವು ಪುಣ್ಯ ಕ್ಷೇತ್ರ ನಿರ್ಮಾಣಕ್ಕಾಗಿ ಶ್ರೀವಿಷ್ಣು ಪರಶುರಾಮ ಅವತಾರ ತಾಳಿದರು.

ಹತ್ತೊಂಭತ್ತನೇಯ ಅವತಾರ ವ್ಯಾಸ ಅವತಾರ. ಪುರಾಣ ಕಥೆಗಳಲ್ಲಿ ಬರುವ ಚಿರಂಜೀವಿಗಳಲ್ಲಿ ವೇದವ್ಯಾಸರೂ ಒಬ್ಬರು. ಮಹಾಭಾರತ ಮಹಾಕಾವ್ಯ ರಚನೆಯನ್ನು ಮಾಡಿದ ವ್ಯಾಸರು, ವೇದಗಳ ಸಂಕಲನದಲ್ಲಿ ಅಗ್ರಗಣ್ಯರಾಗಿದ್ದರು. ಇವರು ಶ್ರೀವಿಷ್ಣುವಿನ 19ನೇ ಸ್ಥಾನ.

ಇಪ್ಪತ್ತನೇಯ ಅವತಾರ ರಾಮನ ಅವತಾರ. ಇಡೀ ಭರತಖಂಡದ ರಾಜನಾಗಿ ಮೆರೆದಿದ್ದ ಶ್ರೀರಾಮ, ಶ್ರೀವಿಷ್ಣುವಿನ ಅವತಾರ. ರರಾವಣ ಸೇರಿ ಹಲವು ರಾಕ್ಷಸರನ್ನು ಸಂಹಾರ ಮಾಡುವುದಕ್ಕಾಗಿಯೇ, ವಿಷ್ಣು ಶ್ರೀರಾಮನ ಅವತಾರ ತಾಳಿದ ಎನ್ನಲಾಗಿದೆ. ಪುರಾಣ ಕಥೆಗಳ ಪ್ರಕಾರ, ನಾರದರು ಲಕ್ಷ್ಮೀಯನ್ನು ವರಿಸಬೇಕು. ನಾನೂ ಆಕೆಯ ಸ್ವಯಂವರಕ್ಕೆ ಹೋಗಬೇಕು. ನನ್ನನ್ನೂ ನಿನ್ನಂತೆ ಸುಂದರನನ್ನಾಗಿಸು ಎಂದು ವಿಷ್ಣುವಿನ ಬಳಿ ಹೇಳಿದರಂತೆ. ಅದಕ್ಕೆ ಶ್ರೀವಿಷ್ಣು ನಾರದರ ಮುಖ ವಾನರ ಮುಖದಂತೆ ಮಾಡಿ, ಅವಮಾನವಾಗುವಂತೆ ಮಾಡಿದ. ಅದಕ್ಕೆ ನಾರದರು, ನೀನು ಮುಂದಿನ ಜನ್ಮದಲ್ಲಿ, ನಿನ್ನ ಪ್ರಿಯತಮೆಯಿಂದ ದೂರವಿರುವಂತೆ ಆಗಲಿ. ಆಕೆಯನ್ನು ವರಿಸುವುದಕ್ಕೆ ನಿನಗೆ ವಾನನರ ಸಹಾಯ ತೆಗೆದುಕೊಳ್ಳುವಂತಾಗಲಿ ಎಂದು ಶಾಪ ನೀಡಿದರಂತೆ. ಹಾಗಾಗಿ ವಿಷ್ಣು, ರಾಮನ ರೂಪದಲ್ಲಿದ್ದಾಗ, ಸೀತೆಯನ್ನು ರಾವಣ ಅಪಹರಿಸಿದ್ದ. ಆಕೆಯನ್ನು ಪುನಃ ಕರೆತರಲು ಶ್ರೀರಾಮ, ಹನುಮಂತ ಸೇರಿ ವಾನರ ಸೇನೆಯ ಸಹಾಯ ಪಡೆದಿದ್ದ.

ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..

ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ

ತಿರುಪತಿಗೆ ಹೋದಾಗ, ನೀವು ಪಾಲಿಸಬೇಕಾದ ನಿಯಮಗಳೇನು..?

About The Author