ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 6

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಈ ಮೊದಲ ಮೂರು ಭಾಗದಲ್ಲಿ ವಿಷ್ಣುವಿನ 20 ಅವತಾರಗಳ ಬಗ್ಗೆ ಹೇಳಿದ್ದೆವು. ಕೊನೆಯ ಭಾಗದಲ್ಲಿ ಇನ್ನೂ 4 ಅವತಾರಗಳ ಬಗ್ಗೆ ಹೇಳಲಿದ್ದೇವೆ.

ಇಪ್ಪತ್ತೊಂದನೇಯ ಅವತಾರ ಶ್ರೀಕೃಷ್ಣನ ಅವತಾರ. ಅಧರ್ಮವನ್ನು ನಾಶ ಮಾಡಿ, ಧರ್ಮಸ್ಥಾಪನೆಗಾಗಿ ಬಂದವನೇ ಶ್ರೀಕೃಷ್ಣ. ವಾಸುದೇವ ಮತ್ತು ದೇವಕಿಯ ಎಂಟನೇಯ ಪುತ್ರನೇ ಶ್ರೀಕೃಷ್ಣ. ಮಾವ ಕಂಸನ ಸಂಹಾರಕ್ಕಾಗಿ ಜನ್ಮ ಪಡೆದಿದ್ದ ಶ್ರೀಕೃಷ್ಣ, ಅರ್ಜುನನಿಗೆ ಭಗವದ್ಗೀತೆಯ ಜ್ಞಾನವನ್ನು ನೀಡಿ, ಮಹಾಭಾರತ ಯುದ್ಧದಲ್ಲಿ ಕೌರವರ ವಿರುದ್ಧ ಗೆಲ್ಲಲು ಸಹಾಯ ಮಾಡಿದ.

ಇಪ್ಪತ್ತೆರಡನೇಯ ಅವತಾರ ಬುದ್ಧನ ಅವತಾರ. ಲೋಕದಲ್ಲಿ ಶಾಂತಿ ಸ್ಥಾಪನೆಗಾಗಿ ಹುಟ್ಟಿದವನೇ ಭಗವಾನ್ ಬುದ್ಧ. ಕಪಿಲ ವಸ್ತುವಿನ ರಾಜ ಶುದ್ಧೋದನನ ಮಗನೇ ಸಿದ್ಧಾರ್ಥ ಗೌತಮ. ಇವನು ಯಾವಾಗ ಹೊರಪ್ರಪಂಚ ಕಾಣುವನೋ, ಅಂದೇ ಸನ್ಯಾಸತ್ವ ಸ್ವೀಕರಿಸುವನು ಎಂದು ಜ್ಯೋತಿಷಿಗಳು ಹೇಳಿದ್ದರು. ಹಾಗಾಗಿ ರಾಜ, ತನ್ನ ಮಗನನ್ನು ಎಲ್ಲಿಯೂ ಹೋಗಲು ಬಿಡುತ್ತಿರಲಿಲ್ಲ. ಅರಮನೆಯಲ್ಲೇ ಇರಿಸಿದ್ದ. ಮತ್ತು ಅವನಿಗೆ ಬೇಕಾದ ಎಲ್ಲ ಸೌಕರ್ಯವನ್ನೂ ಮಾಡಿದ್ದ. ಆದರೆ ಒಂದು ದಿನ ಕೆಲಸದವರ ಸಹಾಯದೊಂದಿಗೆ ಗೌತಮ, ನಾನು ರಾಜ್ಯ ಸುತ್ತಬೇಕೆಂದು ಹೊರಟ. ಅಲ್ಲಿ, ಅಂಗವಿಕಲ, ಭಿಕ್ಷುಕ, ಸೇರಿ ಹಲವರ ನರಳಾದ ಕಂಡ. ಅಂದೇ ಗೌತಮ ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿ, ತನ್ನೆಲ್ಲ ಆಸ್ತಿಯನ್ನು ಬಿಟ್ಟು, ಅರಮನೆಯಿಂದ ಹೊರನಡೆದ. ಬಳಿಕ ಗೌತಮ ಬುದ್ಧನಾದ.

ಇಪ್ಪತ್ಮೂರನೇಯ ಅವತಾರ ಬಲರಾಮನ ಅವತಾರ. ಬಲರಾಮ ಆದಿಶೇಷ ಮತ್ತು ನಾರಾಯಣನ ಅವತಾರವೆಂದು ಹೇಳಲಾಗಿದೆ.

ಇಪ್ಪತ್ನಾಲ್ಕನೇಯ ಅವತಾರ ಕಲ್ಕಿ ಅವತಾರ. ಕಲಿಯುಗದಲ್ಲಿ ಶ್ರೀಕೃಷ್ಣ ಕಲ್ಕಿ ಅವತಾರ ತಾಳುತ್ತಾನಂತೆ. ದೇವದತ್ತನೆಂಬ ಕುದುರೆಯ ಮೇಲೆ ಸವಾರನಾಗಿ ಬರುವ ಕಲ್ಕಿ ದುರ್ಜನರ ವಿನಾಶ ಮಾಡುತ್ತಾನೆಂದು ಹೇಳಲಾಗಿದೆ.

ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..

ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ

ತಿರುಪತಿಗೆ ಹೋದಾಗ, ನೀವು ಪಾಲಿಸಬೇಕಾದ ನಿಯಮಗಳೇನು..?

About The Author