Spiritual: ನಾವು ಈ ಮೊದಲೇ ನಿಮಗೆ ಎಂಥ ಸ್ಥಳದಲ್ಲಿ ನಾವು ತುಂಬ ಹೊತ್ತು ಇರಬಾರದು ಎಂದು ಹೇಳಿದ್ದೆವು. ಕ್ಷಾಮ, ಯುದ್ಧ, ದ್ವೇಷದ ವಾತಾವರಣ, ಹೀಗೆ ಜೀವಕ್ಕೆ ಕುತ್ತು ತರುವ ಜಾಗದಲ್ಲಿ ಇರಬಾರದು ಎಂಬ ಬಗ್ಗೆ ಚಾಣಕ್ಯರು ಏನು ಹೇಳಿದ್ದಾರೆ ಅಂತಾ ಹೇಳಿದ್ದೆವು. ಅದೇ ರೀತಿ ಚಾಣಕ್ಯರು ಕೆಲವೊಂದು ಜಾಗದಲ್ಲಿ ನಾವು ಇರುವುದು ಸೂಕ್ತವಲ್ಲ ಎಂದಿದ್ದಾರೆ. ಅಂಥ ಜಾಗದಲ್ಲಿದ್ದರೆ, ನಮ್ಮ ಜೀವವೇನೂ ಹೋಗುವುದಿಲ್ಲ. ಬದಲಾಗಿ, ನಾವು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ. ಹಾಗಾದ್ರೆ ಯಾವುದು ಆ ನಾಲ್ಕು ಜಾಗ ಅಂತಾ ತಿಳಿಯೋಣ ಬನ್ನಿ..
ದುಡಿಯಲು ಆಗದ ಸ್ಥಳ. ಯಾವ ಸ್ಥಳದಲ್ಲಿ ನಿಮಗೆ ದುಡಿದು ತಿನ್ನುವ ವ್ಯವಸ್ಥೆ ಇರುವುದಿಲ್ಲವೋ, ಅಂಥ ಸ್ಥಳದಲ್ಲಿ ನಿಮ್ಮ ಸಮಯ ಸುಮ್ಮನೆ ವ್ಯರ್ಥವಾಗುತ್ತದೆ. ಹಾಗಾಗಿ ಯಾವ ಸ್ಥಳದಲ್ಲಿ ನಿಮಗೆ ಕೆಲಸ ಮಾಡುವ ಅವಕಾಶವಿರುವುದಿಲ್ಲವೋ, ಅಂಥ ಸ್ಥಳದಲ್ಲಿ ನೀವು ಇರಬಾರದು ಎನ್ನುತ್ತಾರೆ ಚಾಣಕ್ಯರು.
ಉತ್ತಮ ಸಂಬಂಧಿಕರು, ಸ್ನೇಹಿತರು ಇರದ ಸ್ಥಳ. ಓರ್ವ ಮನುಷ್ಯ ವಾಸಿಸುವ ಜಾಗದಲ್ಲಿ ಅವನ ಮನೆಜನರು ಇರುತ್ತಾರೆ. ಅಂಥವಾ ಅವನ ಸಂಬಂಧಿಕರು, ಸ್ನೇಹಿತರು ಇರುತ್ತಾರೆ. ಆದರೆ ನಿಮ್ಮವರಲ್ಲದವರು ಇರುವ ಜಾಗದಲ್ಲಿ ನೀವೆಂದೂ ವಾಸಿಸಬಾರದು. ಅಂಥ ಜಾಗದಲ್ಲಿ ನಿಮಗೆ ಉತ್ತಮ ಸ್ನೇಹಿತರು ಸಿಕ್ಕರೆ, ನಿಮ್ಮ ಜೀವನ ಸುಲಭವಾಗಿರುತ್ತದೆ. ಆದರೆ ಅದೇ ಸ್ನೇಹಿತರು ಅಥವಾ ಸಂಬಂಧಿಕರು ನೀಚರಾಗಿದ್ದರೆ, ನಿಮ್ಮ ಜೀವನ ನಾಶವಾಗುತ್ತದೆ. ಇದಕ್ಕೆ ಉದಾಹರಣೆ ಎಂದರೆ, ಕೆಲವರು ವಿದೇಶಕ್ಕೆ ಹೋಗುತ್ತಾರೆ. ಅಲ್ಲಿ ಜೀವನ ಮಾಡಲು ಬಯಸುತ್ತಾರೆ. ಆಗ ಅಲ್ಲಿ ನೀವು ಜೀವನ ನಡೆಸಲು ಕೆಲವರ ಸಹಾಯ ಬೇಕಾಗುತ್ತದೆ. ನಿಮಗೆ ಅಲ್ಲಿ ಉತ್ತಮ ಸಂಬಂಧಿಕರು ಇದ್ದಲ್ಲಿ ಅಥವಾ ಸ್ನೇಹಿತರು ಇದ್ದಲ್ಲಿ ನೀವು ಅಲ್ಲಿ ಚೆನ್ನಾಗಿರಬಹುದು. ಅದೇ ಅವರು ದುಷ್ಟರಾಗಿದ್ದಲ್ಲಿ, ಅಥವಾ ಮೋಸಗಾರರಾಗಿದ್ದಲ್ಲಿ, ನೀವು ಪರದೇಶದಲ್ಲಿ ಪರದಾಡಬೇಕಾಗುತ್ತದೆ.
ಜ್ಞಾನವನ್ನು ಪಡೆಯಲಾಗದ ಸ್ಥಳ. ಯಾವ ಸ್ಥಳದಲ್ಲಿ ನಿಮಗೆ ಜ್ಞಾನ ಪಡೆಯಲು ಅನುಕೂಲವಿರುವುದಿಲ್ಲವೋ, ಅಂಥ ಜಾಗ ಸ್ಮಶಾನಕ್ಕೆ ಸಮ. ಅಂಥ ಜಾಗದಲ್ಲಿ ಶಾಲಾ- ಕಾಲೇಜುಗಳು ಇರುವುದಿಲ್ಲ. ಅಲ್ಲಿ ಅನಾಗರಿಕರು ವಾಸಿಸುತ್ತಾರೆ. ಅಂಥ ಜಾಗದಲ್ಲಿ ನೀವು ಯಾವುದೇ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ. ಕೆಲವು ಮನೆಗಳಲ್ಲಿ, ಶಾಲೆ ಕಲಿಯಲು, ಕಾಲೇಜಿಗೆ ಹೋಗಲು, ಅಥವಾ ನಿಮಗೆ ಬೇಕಾದ ಕೆಲಸ ಮಾಡಲು ಬಿಡುವುದಿಲ್ಲ. ನೀವು ನಾಲ್ಕು ಗೋಡೆಯ ಮಧ್ಯೆ ಇದ್ದು, ಮನೆಗೆಲಸ ಮಾಡಿಕೊಂಡು ಇರಬೇಕು ಎಂದು ಬಯಸುತ್ತಾರೆ. ಅಂಥ ಜಾಗದಲ್ಲಿ ಇರುವವರು ಎಂದಿಗೂ ಉದ್ಧಾರವಾಗುವುದಿಲ್ಲ. . ಅಂಥ ಜಾಗದಲ್ಲಿ ಎಂದಿಗೂ ಇರಬಾರದು ಎನ್ನುತ್ತಾರೆ ಚಾಣಕ್ಯರು.
ನಿಮಗೆ ಗೌರವ ಸಿಗದ ಸ್ಥಳ. ಯಾವ ಸ್ಥಳದಲ್ಲಿ ನಿಮಗೆ ಗೌರವ ಸಿಗುವುದಿಲ್ಲವೋ, ಅಂಥ ಸ್ಥಳದಲ್ಲಿ ನೀವು ಇರುವುದು ಒಳ್ಳೆಯದಲ್ಲ. ಅದು ನೀವು ಹುಟ್ಟಿ ಬೆಳೆದ ಮನೆಯಾಗಿರಬಹುದು. ನೀವು ಕೆಲಸ ಮಾಡುವ ಕಚೇರಿಯಾಗಬಹುದು. ಸಂಬಂಧಿಕರ ಮನೆಯಾಗಬಹುದು. ಯಾವುದೇ ಸ್ಥಳವಿರಲಿ ಅಂಥ ಸ್ಥಳದಲ್ಲಿ ನೀವೆಂದೂ ಇರಬಾರದು. ಹುಟ್ಟಿಸಿದ ತಂದೆ ತಾಯಿ, ನೀವು ಯುವಕನಾದ ಬಳಿಕ ದುಡಿಯಲಿ ಎಂದು ಬಯಸುತ್ತಾರೆ. ಯುವತಿಯಾದಲ್ಲಿ, ವಿವಾಹವಾಗಿ ಹೋಗಬೇಕು ಎಂದು ಬಯಸುತ್ತಾರೆ.
ಎಷ್ಟೇ ಹತ್ತಿರದ ಸಂಬಂಧಿಕರಾಗಲಿ, ನಿಮಗೆ ಪುಕ್ಕಟೆಯಾಗಿ ಊಟ ಹಾಕಲು ಯಾರೂ ಬಯಸುವುದಿಲ್ಲ. ನೀವು ಅವರು ಹೇಳಿದ ಕೆಲಸಗಳನ್ನು ಮಾಡಬೇಕು. ಇಲ್ಲವಾದಲ್ಲಿ ದುಡ್ಡು ಕೊಟ್ಟು ಅವರಲ್ಲಿ ನಿಲ್ಲಬೇಕು. ಎರಡೂ ಇಲ್ಲದಿದ್ದಲ್ಲಿ. ನಿಮಗೆ ಅಂಥ ಮನೆಯಲ್ಲಿ ಜಾಗವಿರುವುದಿಲ್ಲ. ಇನ್ನು ನೀವು ಕೆಲಸ ಮಾಡುವ ಆಫೀಸಿನಲ್ಲಿ ನೀವು ಎಷ್ಟೇ ಉತ್ತಮವಾಗಿ ಕೆಲಸ ಮಾಡಿದರೂ ನಿಮಗೆ ಗೌರವ ಸಿಗುತ್ತಿಲ್ಲವೆಂದಲ್ಲಿ, ನೀವು ಅಲ್ಲಿಂದ ಹೊರಡುವುದೇ ಲೇಸು.
ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..
ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?
ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..




