Saturday, July 5, 2025

Latest Posts

ನಿಮ್ಮ ಮಗುವಿನ ಮೆದುಳಿನ ಆರೋಗ್ಯ, ನೆನಪಿನ ಶಕ್ತಿ ಉತ್ತಮವಾಗಿರಬೇಕೇ..? ಈ ಆಹಾರ ಕೊಡಿ..

- Advertisement -

Health Tips: ಎಲ್ಲರಿಗೂ ತಮ್ಮ ಮಗು ಓದುವುದರಲ್ಲಿ, ಸಂಗೀತ, ನೃತ್ಯ, ಆಟೋಟ ಎಲ್ಲದರಲ್ಲೂ ಮುಂದಿರಬೇಕು ಎನ್ನುವ ಆಸೆ ಇರುತ್ತದೆ. ಆದರೆ ಅದಕ್ಕೆ ತಕ್ಕಂತೆ ಪೌಷ್ಟಿಕಾಂಶ ಸಿಕ್ಕ ಮಕ್ಕಳಷ್ಟೇ, ಹೀಗೆ ಜಾಣರಾಗಿರುತ್ತಾರೆ. ನಿಮ್ಮ ಮಕ್ಕಳು ಸಹ ಚುರುಕಾಗಿರಬೇಕು, ಓದುವುದರಲ್ಲಿ ಜಾಣರಾಗಬೇಕು ಅಂದ್ರೆ, ನೀವು ಮಕ್ಕಳಿಗೆ ಕಲ ಆಹಾರಗಳನ್ನು ನೀಡಬೇಕು. ಹಾಗಾದ್ರೆ ಯಾವ ಆಹಾರ ನೀಡಬೇಕು ಅಂತಾ ತಿಳಿಯೋಣ ಬನ್ನಿ..

ನಿಮ್ಮ ಮಗುವಿನ ನೆನಪಿನ ಶಕ್ತಿ ಚೆನ್ನಾಗಿರಬೇಕು ಅಂದ್ರೆ, ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಎರಡು ನೆನೆಸಿ ಸಿಪ್ಪೆ ತೆಗೆದ ಬಾದಾಮಿ ಮತ್ತು 10ರಿಂದ 15 ಕಾಳು ನೆನೆಸಿದ ಶೇಂಗಾವನ್ನು ನಿಮ್ಮ ಮಕ್ಕಳಿಗೆ ನೀಡಬೇಕು. ನೆನೆಸಿದ ಬಾದಾಮ್‌ ಜೊತೆ ಶೇಂಗಾಕಾಳನ್ನು ನೀಡುವುದರಿಂದ ನಿಮ್ಮ ಮಕ್ಕಳ ನೆನಪಿನ ಶಕ್ತಿ ಉತ್ತಮವಾಗಿರುತ್ತದೆ. ನಿಮ್ಮ ಮಕ್ಕಳು ಚುರುಕಾಗಿರುತ್ತಾರೆ. ಇದು ದೇಹಕ್ಕೂ ಶಕ್ತಿ ಕೊಡುತ್ತದೆ.

ಇನ್ನು ಹಸಿರು ಸೊಪ್ಪುಗಳನ್ನು ತಿನ್ನಲು ಕೊಡಿ. ಪಾಲಕ್, ಹರಿವೆ, ಮೆಂತ್ಯೆ, ನುಗ್ಗೆಸೊಪ್ಪು, ಬಸಳೆ ಸೊಪ್ಪಿನ ಸಾಂಬಾರ್ ಮಾಡಿ ಕೊಡಿ. ಇವೆಲ್ಲ ಸೊಪ್ಪಿನ ಪದಾರ್ಥಗಳು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಇರುತ್ತದೆ. ಅಲ್ಲದೇ, ಇದರ ಸೇವನೆಯಿಂದ ನಿಮ್ಮ ಮಕ್ಕಳ ಆರೋಗ್ಯ ಮತ್ತು ಬುದ್ಧಿವಂತಿಕೆ ಉತ್ತಮವಾಗಿರುತ್ತದೆ.

ಇನ್ನು ಮಕ್ಕಳು ಚುರುಕಾರಿಗಬೇಕು ಮತ್ತು ಅವರಿಗೆ ಉತ್ತಮ ನೆನಪಿನ ಶಕ್ತಿ ಇರಬೇಕು ಅಂದ್ರೆ, ಗರ್ಭಿಣಿ ಇದ್ದಾಗಲೇ, ತಾಯಂದಿರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೊಂದು ಒಂದೆಲಗ ಎಲೆ ತಿನ್ನಬೇಕು. ಇದು ಸಾಧ್ಯವಾಗಲಿಲ್ಲವೆಂದಲ್ಲಿ, ಮಕ್ಕಳಿಗೆ ಪ್ರತಿದಿನ ಒಂದೊಂದು ಎಲೆ ತಿನ್ನಲು ಕೊಡಿ. ಇದು ಬುದ್ಧಿವಂತಿಕೆ ಹೆಚ್ಚಿಸಲು, ನೆನಪಿನ ಶಕ್ತಿ ಹೆಚ್ಚಿಸಲು ಅನುಕೂಲವಾಗಿದೆ. ನೀವು ಇದರ ತಂಬುಳಿ ಮಾಡಿ ಸೇವಿಸಬಹುದು.

ಇನ್ನು ನಾನ್‌ವೆಜ್ ಸೇವಿಸುವವರು ಬೇಯಿಸಿದ ಮೊಟ್ಟೆ, ಮೀನಿನ ಆಹಾರವನ್ನು ಮಕ್ಕಳಿಗೆ ತಿನ್ನಲು ನೀಡಿದರೆ, ಮಕ್ಕಳು ಆರೋಗ್ಯವಾಗಿಯೂ, ಚುರುಕಾಗಿಯೂ ಇರುತ್ತಾರೆ. ಆದರೆ ಇಲ್ಲಿ ನಾವು ಹೇಳಿದ ಆಹಾರ ಸೇವನೆ ಮಾಡಿದಾಗ, ನಿಮ್ಮ ಮಕ್ಕಳಿಗೆ ಅಲರ್ಜಿಯಾಗುತ್ತಿದೆ ಎಂದಲ್ಲಿ. ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.

Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?

Nipah Virus ಲಕ್ಷಣಗಳೇನು..? ಡಾಕ್ಟರ್ ಏನಂತಾರೆ ಗೊತ್ತಾ?

ತಾಯಿಗೆ ಮಗುವಿನ ಬಗ್ಗೆ ಏನೇನು ತಿಳಿದಿರಬೇಕು..?

- Advertisement -

Latest Posts

Don't Miss