Recipe: ಕೆಲ ದಿನಗಳಲ್ಲೇ ಗಣೇಶ ಚತುರ್ಥಿ ಹಬ್ಬ ಬರಲಿದೆ. ಗಣೇಶನಿಗಾಗಿ ಭಕ್ತರು ತರಹೇವಾರಿ ಭೋಜನಗಳನ್ನು ತಯಾರಿಸಿ, ನೈವೇದ್ಯ ಮಾಡುತ್ತಾರೆ. ಅದರಲ್ಲಿ ಗಣೇಶನಿಗೆ ಪ್ರಿಯವಾದ ಪದಾರ್ಥ ಅಂದರೆ, ಕಡಲೆ ಉಸುಳಿ. ಇಂದು ನಾವು ಕಡಲೆ ಉಸುಳಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು ಒಂದು ಕಪ್ ಕಡಲೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಅದನ್ನು ಬೇಯಿಸಿ. ಕಡಲೆಕಾಳು ಹೆಚ್ಚು ಬೆಂದಿರಬಾರದು. ಹದವಾಗಿ ಬೆಂದಿರಬೇಕು. ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಹಸಿಮೆಣಸು, ಕರಿಬೇವಿನ ಎಲೆ ಹಾಕಿ ಒಗ್ಗರಣೆ ಕೊಡಿ. ಇದಕ್ಕೆ ಬೇಯಿಸಿದ ಕಡಲೆ ಕಾಳು, ಚಿಕ್ಕ ತುಂಡು ಶುಂಠಿ, ಉಪ್ಪು, ಅರಿಶಿನ ಹಾಕಿ ಮಿಕ್ಸ್ ಮಾಡಿ. 2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಈಗ ಕಡಲೆ ಉಸುಳಿ ರೆಡಿ. ಇದಕ್ಕೆ ಕೊಬ್ಬರಿ ತುರಿ ಮತ್ತು ಕೊತ್ತೊಂಬರಿ ಸೊಪ್ಪನ್ನು ಸೇರಿಸಿ.
ಅಡುಗೆಯನ್ನು ಫ್ರಿಜ್ನಲ್ಲಿರಿಸಿ, ಮತ್ತೆ ಬಿಸಿ ಮಾಡಿ ಸೇವಿಸುವುದು ಒಳ್ಳೆದಾ..? ಕೆಟ್ಟದ್ದಾ..?