Shopping Tips: ಹಬ್ಬ ಹರಿದಿನಗಳು ಶುರುವಾಗಿದೆ. ಇಂಥ ಸಮಯದಲ್ಲಿ ಹಿಂದೂಗಳು ಮೂರ್ತಿಗಳ ಹುಡುಕಾಟದಲ್ಲಿ ಇರುತ್ತಾರೆ. ಹಾಗಾಗಿ ಇಂದು ನಾವು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಕಡಿಮೆ ಬೆಲೆಗೆ, ತಾಮ್ರ ಮತ್ತು ಹಿತ್ತಾಳೆಯ ಮೂರ್ತಿ, ಪೂಜಾ ಸಾಮಗ್ರಿಗಳು ಸಿಗುವ ಜಾಗದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಚಿಕ್ಕಪೇಟೆಯಲ್ಲಿರುವ ಕಾಮಧೇನು ಆರ್ಟ್ಸ್‌ನಲ್ಲಿ ತಾಮ್ರ ಮತ್ತು ಹಿತ್ತಾಳೆ ಮೂರ್ತಿಗಳು, ಸಾಮಗ್ರಿಗಳು ಸಿಗುತ್ತದೆ. ಜೊತೆಗೆ ಮದುವೆ ಮುಂಜಿ ಸಮಾರಂಭಗಳಲ್ಲಿ ಬಳಸುವ ಪ್ಲೇಟ್‌ಗಳು ಸಿಗುತ್ತದೆ. ಗಿಫ್ಟ್- ರಿಟರ್ನ್ ಗಿಫ್ಟ್ ಸಹ ಇಲ್ಲಿ ಸಿಗುತ್ತದೆ. ನೀವು 500 ಗಿಫ್ಟ್‌ಗಳನ್ನು ಖರೀದಿಸಿ, ಅದರಲ್ಲಿ 50ಕ್ಕೂ ಮೀರಿ ಉಳಿದಿದ್ದರೆ, ಅದನ್ನು ಇವರು ರಿಟರ್ನ್ ತೆಗೆದುಕೊಳ್ಳುತ್ತಾರೆ.
50 ರೂಪಾಯಿಯಿಂದ ಇಲ್ಲಿನ ಸಾಮಗ್ರಿಯ ಬೆಲೆ ಶುರುವಾಗುತ್ತದೆ. ನೀವು ನಿಮಗೆ ಬೇಕಾದಂಥ ವಿಗ್ರಹಗಳನ್ನು ಆರ್ಡರ್ ಕೊಟ್ಟು ಮಾಡಿಸಬಹುದು. ಅಲ್ಲದೇ, ನಿಮ್ಮಲ್ಲಿರುವ ವಿಗ್ರಹಗಳನ್ನು ಪಾಲಿಶ್ ಕೂಡ ಮಾಡಿಕೊಡಲಾಗುತ್ತದೆ. ಬೇರೆ ಬೇರೆ ಊರು, ರಾಜ್ಯ, ದೇಶಗಳಿಗೂ ಇಲ್ಲಿನ ವಿಗ್ರಹಗಳನ್ನು ಡೆಲಿವರಿ ಮಾಡಲಾಗುತ್ತದೆ. ಆದರೆ ಇದರ ಬೆಲೆಯೊಂದಿಗೆ ಶಿಪ್ಪಿಂಗ್ ಚಾರ್ಜಸ್ ಕೂಡ ಆ್ಯಡ್ ಆಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಅಡುಗೆಯನ್ನು ಫ್ರಿಜ್ನಲ್ಲಿರಿಸಿ, ಮತ್ತೆ ಬಿಸಿ ಮಾಡಿ ಸೇವಿಸುವುದು ಒಳ್ಳೆದಾ..? ಕೆಟ್ಟದ್ದಾ..?