Shopping: ನಾವು ಹಾಕುವ ಬಟ್ಟೆ, ಸೀರೆಗೆ ಮ್ಯಾಚ್ ಆಗು ಜ್ಯೂವೆಲ್ಲರಿ ಧರಿಸಿದರೆ, ನಾವು ಚೆನ್ನಾಗಿ ಕಾಣುತ್ತೇವೆ. ಜೊತೆಗೆ ಸೇಮ್ ಚಪ್ಪಲಿಗಳನ್ನ ಧರಿಸಿದರೆ, ಇನ್ನೂ ಚೆನ್ನಾಗಿ ಕಾಣುತ್ತೇವೆ. ಹಾಗಾಗಿ ನಾವಿಂದು ಬೆಂಗಳೂರಲ್ಲಿ ಎಲ್ಲಿ ಕಡಿಮೆ ಬೆಲೆಗೆ ಚೆಂದದ ಚಪ್ಪಲಿಗಳು ಸಿಗುತ್ತದೆ ಅಂತಾ ಹೇಳಲಿದ್ದೇವೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಂಪಿಗೆ ರಸ್ತೆಯಲ್ಲಿರುವ ನೆಕ್ಸ್ಟ್ ಫುಟ್‌ವೇರ್ ಶಾಪ್‌ನಲ್ಲಿ ಹಲವಾರು ವಿಧದ ಚಪ್ಪಲಿ, ಸ್ಯಾಂಡಲ್ಸ್, ಶೂಸ್ ಸಿಗುತ್ತದೆ. ಚೂಡಿದಾರ ಧರಿಸಿದಾಗ ಹಾಕಬಹುದಾದ ಹೀಲ್ಸ್, ಜೀನ್ಸ್ ಹಾಕಿದಾಗ ಧರಿಸಬಹುದಾದ ಶೂಸ್, ಸೀರೆ ಉಟ್ಟಾಗ ಧರಿಸಬಹುದಾದ ಚಪ್ಪಲಿಗಳು ಇಲ್ಲಿ ಲಭ್ಯವಿದೆ. ಇಲ್ಲಿನ ಓನರ್ ಹೇಳುವಂತೆ, ಇಲ್ಲಿ ಬರುವ ಹೆಣ್ಣು ಮಕ್ಕಳು ಒಂದಾದರೂ ಜೋಡಿ ಚಪ್ಪಲಿಯನ್ನು ಖರೀದಿ ಮಾಡಿಯೇ ಹೋಗುತ್ತಾರೆ. ಚಪ್ಪಲಿ ಇಷ್ಟವಾಗಲಿಲ್ಲವೆಂದು ಬಿಟ್ಟು ಹೋದವರು ತುಂಬಾ ಅಪರೂಪವಂತೆ.
ಇನ್ನೂರರಿಂದ ಎರಡು ಸಾವಿರದವರೆಗೂ ಚಪ್ಪಲಿಯ ಬೆಲೆ ಇದೆ. ಇಲ್ಲಿ ಚಪ್ಪಲಿಗಳಿಗೆ ಫಿಕ್ಸ್ ರೇಟ್ ಇಲ್ಲದ ಕಾರಣ, ಡಿಸ್ಕೌಂಟ್ ಸಿಗುವ ಸಾಧ್ಯತೆಯೂ ಇದೆ. ಇಲ್ಲಿ ಚಪ್ಪಲಿ, ಶೂಸ್, ಅಷ್ಟೇ ಅಲ್ಲದೇ, ಬೇರೆ ಬೇರೆ ರೀತಿಯ ಬ್ಯಾಗ್‌ಗಳು ಕೂಡ ಸಿಗುತ್ತದೆ. ಟ್ರಿಪ್‌ಗೆ ಹೋಗುವಾಗ ತೆಗೆದುಕೊಂಡು ಹೋಗಬಹುದಾದ ಬ್ಯಾಗ್, ಬ್ಯಾಗ್‌ಪ್ಯಾಕ್, ವ್ಯಾನೆಟಿ ಬ್ಯಾಗ್‌ಗಳು ಕೂಡ ಇಲ್ಲಿ ಲಭ್ಯವಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ವೀಡಿಯೋ ನೋಡಿ..

