ಡಾರ್ಕ್ ಅಂಡರ್ ಆರ್ಮ್ಸ್ ಚಿಂತೆ ಬಿಡಿ, ವೈದ್ಯರ ಈ ಸಲಹೆ ಫಾಲೋ ಮಾಡಿ..

Health Tips: ಹೆಣ್ಣು ಮಕ್ಕಳು ಮುಖ ಮತ್ತು ಕೂದಲು, ದೇಹದ ಸೌಂದರ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೋ, ಅಷ್ಟೇ ಪ್ರಾಮುಖ್ಯತೆ ಅಂಡರ್‌ಆರ್ಮ್ಸ್ ಅಂದ್ರೆ ಕಂಕುಳಿಗೆ ಕೊಡಬೇಕಾಗುತ್ತದೆ. ಏಕೆಂದರೆ ಇದು ಫ್ಯಾಷನ್ ಯುಗವಾದ ಕಾರಣ, ಸ್ಲಿವ್ಲೆಸ್ ಬಟ್ಟೆ ಧರಿಸುವುದು ಕಾಮನ್. ಅಂಥವರು ಅಂಡರ್ ಆರ್ಮ್ಸ್ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕೆಲವರಿಗೆ ಡಾರ್ಕ್ ಅಂಡರ್ ಆರ್ಮ್ಸ್ ಬಗ್ಗೆ ಗೊಂದಲವಿದೆ. ಈ ಬಗ್ಗೆ ವೈದ್ಯರೇ ಕೆಲ ಸಲಹೆಗಳನ್ನು ಕೊಟ್ಟಿದ್ದಾರೆ ನೋಡಿ..

ವೈದ್ಯರಾದ ಕಿಶೋರ್, ಡಾರ್ಕ್ ಅಂಡರ್ ಆರ್ಮ್ಸ್ ಗಾಗಿ ಕೆಲ ಟಿಪ್ಸ್ ಕೊಟ್ಟಿದ್ದಾರೆ. ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆ ಕೇಳಲು ಚಿಕ್ಕ ಸಮಸ್ಯೆ ಎನ್ನಿಸಬಹುದು. ಆದರೆ ಹಲವರು ಇದರಿಂದಲೇ ಕೀಳರಿಮೆ ಅನುಭವಿಸುತ್ತಿದ್ದಾರೆ. ನಾಲ್ಕು ಜನರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ. ಅಷ್ಟು ಮುಜುಗರವನ್ನುಂಟು ಮಾಡತ್ತೆ, ಈ ಅಂಡರ್ ಆರ್ಮ್ಸ್ ಸಮಸ್ಯೆ.

ಈ ಸಮಸ್ಯೆಗೆ ಪರಿಹಾರವೆಂದರೆ, ಆಲೂಗಡ್ಡೆ ತುರಿ, ಅದಕ್ಕೆ ಸ್ವಲ್ಪ ಅರಿಶಿನ, ಸ್ವಲ್ಪ ಪಚ್ಚಕರ್ಪೂರ, ಸ್ವಲ್ಪ ಮುಲ್ತಾನಿ ಮಿಟ್ಟಿ ಇವಿಷ್ಟನ್ನು ಹಾಕಿ ಮಿಕ್ಸ್ ಮಾಡಿ. ಆದರೆ ಆಲೂಗಡ್ಡೆ ತುರಿದ ಬಳಿಕ ಅದನ್ನು ನೀರಿಗೆ ಹಾಕಿ ಸ್ವಚ್ಛಗೊಳಿಸಿ. ಬಳಿಕ ಬಳಸಿ. ಇವಿಷ್ಟನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಇದಕ್ಕೆ ಫ್ರೆಶ್ ಆ್ಯಲೋವೆರಾ ಜೆಲ್ ಮಿಕ್ಸ್ ಮಾಡಿ. ಇದನ್ನು ಕಂಕುಳಿಗೆ ಅಪ್ಲೈ ಮಾಡಿ.

ಒಂದು ಗಂಟೆ ಬಳಿಕ ಆ ಸ್ಥಳಕ್ಕೆ ಸೋಪ್ ಬಳಸದೇ, ಸ್ನಾನ ಮಾಡಿ. ಹೀಗೆ ಪ್ರತಿದಿನ ಮಾಡಿದ್ರೆ, ನಿಮ್ಮ ಡಾರ್ಕ್ ಅಂಡರ್ ಆರ್ಮ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..

ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..

ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ

About The Author