Friday, June 20, 2025

Latest Posts

ತುಳಸಿ ಸೇವನೆ ದೇಹಕ್ಕೆ ಉತ್ತಮ ಹೌದಾ..? ಅಲ್ಲವಾ..?

- Advertisement -

health tips: ಅಸ್ತಮಾ ಇದ್ದವರು ತುಳಸಿ ಬಳಸಬೇಕು ಅಂತಾ ಹಲವರು ಹೇಳುತ್ತಾರೆ. ಹಾಗಾದ್ರೆ ತುಳಸಿಯ ಸೇವನೆಯಿಂದ ಅಸ್ತಮಾ ಸಮಸ್ಯೆ ದೂರವಾಗುತ್ತಾಇಲ್ಲವಾ ಅನ್ನೋ ಬಗ್ಗೆ ಡಾ. ಭೀಮ್‌ಸೇನ್ ರಾವ್ ವಿವರಿಸಿದ್ದಾರೆ. ಅಲ್ಲದೇ, ಬಣ್ಣ ಬಣ್ಣದ ಆಹಾರಗಳ ಸೇವನೆಯಿಂದ ಏನಾಗುತ್ತದೆ ಅನ್ನೋ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ.

ವೈದ್ಯರ ಪ್ರಕಾರ, ತುಳಸಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣದೊಂದಿಗೆ, ಹಲವು ಆರೋಗ್ಯಕರ ಗುಣಗಳಿರಬಹುದು. ಆದರೆ ಅಸ್ತಮಾ ರೋಗಿಗಳು, ಔಷಧಿ ನಿಲ್ಲಿಸಿ, ತುಳಸಿ ಸೇವಿಸಿದರೆ, ಅದರಿಂದ ರೋಗ ಗುಣವಾಗುತ್ತದೆ ಅಂತಾ ಹೇಳಲಾಗುವುದಿಲ್ಲ. ಈ ಬಗ್ಗೆ ಇನ್ನೂ ಪೂರ್ಣಪ್ರಮಾಣದಲ್ಲಿ ಸಾಬೀತಾಗಲಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಇನ್ನು ಅಸ್ತಮಾ ಇರುವವರು ಪ್ರಿಸರ್ವೇಟಿವ್ ಬಳಸಿದ ಆಹಾರ, ಕಲರ್ ಬಳಸಿದ ಆಹಾರಗಳನ್ನು ಅತೀಯಾಗಿ ಸೇವಿಸಬಾರದು. ಇನ್ನು ಕಲರ್ ಬೆರೆಸಿರುವ ಆಹಾರವನ್ನು ಅತೀಯಾಗಿ ಸೇವಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಅಲ್ಲದೇ, ತಂಬಾಕಿನ ಸೇವನೆಯಿಂದಲೂ ಕ್ಯಾನ್ಸರ್ ಬರುತ್ತದೆ.

ಇನ್ನು ಅಸ್ತಮಾ ಇರುವವರು ಕೊಲೆಸ್ಟ್ರಾಲ್ ಇರುವ ಆಹಾರ ಸೇವನೆ ಮಾಡಬಾರದು. ನಿಮ್ಮ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮತ್ತು ಉತ್ತಮವಲ್ಲದ ಕೊಲೆಸ್ಟ್ರಾಲ್ ಇರುತ್ತದೆ. ಉತ್ತಮವಲ್ಲದ ಕೊಲೆಸ್ಟ್ರಾಲ್ ಹೆಚ್ಚಾದಾಗ, ನಮ್ಮ ದೇಹದ ಬೊಜ್ಜು ಹೆಚ್ಚಾಗುತ್ತದೆ. ಇದರಿಂದ ರೋಗ ರುಜಿನಗಳು ಬರುತ್ತದೆ. ಹಾಗಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ, ಡಯಟ್ ಮಾಡಬೇಕು. ವಾಕಿಂಗ್ ಮಾಡಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಮಳೆಗಾಲದಲ್ಲಿ ಈ ರೋಗಗಳ ಬಗ್ಗೆ ಎಚ್ಚರವಿರಲಿ..

ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

- Advertisement -

Latest Posts

Don't Miss