Health tips: ಇತ್ತೀಚೆಗೆ ಹೆಚ್ಚಿನ ಮಕ್ಕಳಲ್ಲಿ ಮೆದುಳು ಜ್ವರ ಕಾಣಿಸಿಕೊಳ್ಳುತ್ತಿದೆ. ಅದಕ್ಕಾಗಿ ಮಕ್ಕಳಿಗೆ ಲಸಿಕೆಯನ್ನೂ ಹಾಕಲಾಗಿದೆ. ಹಾಗಾದ್ರೆ ಮೆದುಳು ಜ್ವರದ ಲಕ್ಷಣಗಳೇನು..? ಇದು ಬಂದ್ರೆ ಏನಾಗತ್ತೆ ಅನ್ನೋ ಬಗ್ಗೆ ಡಾ.ಸುರೇಂದ್ರ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ಡಾ.ಸುರೇಂದ್ರ ಅವರು ಈ ಬಗ್ಗೆ ವಿವರಿಸಿದ್ದು, ಮೆದುಳು ಜ್ವರದಲ್ಲಿ 2 ವಿಧಗಳಿದೆ. ಒಂದು ಎನ್ಸಫಲೈಟೀಸ್, ಇನ್ನೊಂದು ಮೆನಿಂಜೈಟೀಸ್. ಎನ್ಸಫಲೈಟೀಸ್ ಅಂದ್ರೆ, ಮೆದುಳು ಇನ್ಫೆಕ್ಷನ್ ಆಗುವುದು. ಬ್ರೇನ್ ಕವರಿಂಗ್ ಇನ್ಫೆಕ್ಷನ್ ಆಗುವುದನ್ನು ಮೆನಿಂಜೈಟೀಸ್ ಎಂದು ಕರೆಯುತ್ತೇವೆ. ಇದು ವೈರಲ್ ಮತ್ತು ಬ್ಯಾಕ್ಟೇರಿಯಲ್ ಇನ್ಫೆಕ್ಷನ್ ಮೂಲಕ ಬರುತ್ತದೆ.
ಅತೀಯಾದ ಜ್ವರ, ವಾಂತಿ, ತಲೆನೋವು, ಸರಿಯಾಗಿ ಪ್ರಜ್ಞೆ ಇಲ್ಲದಿರುವುದು ಈ ರೋಗದ ಲಕ್ಷಣವಾಗಿದೆ. ಕೆಲವರಿಗೆ ಪಿಡ್ಸ್ ಬರುತ್ತದೆ. ಇದೇ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಜ್ವರ ಬಂದಾಗ, ಮನೆ ಮದ್ದು ಮಾಡಿ ಸುಮ್ಮನಾಗಬಾರದು. ವೈದ್ಯರ ಬಳಿ ಹೋಗಿ ಚಿಕಿತ್ಸೆ ಕೊಡಿಸಲೇಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..




