Health tips: ಪುರುಷರ ವಯಸ್ಸು 30 ದಾಟುತ್ತಿದ್ದ ಹಾಗೆ, ಅವರಿಗೆ ಕೂದಲು ಉದುರುವ ಸಮಸ್ಯೆ ಮತ್ತು ದೇಹದಲ್ಲಿ ಅಶಕ್ತತೆ ಕಾಡಲು ಶುರು ಮಾಡುತ್ತದೆ. ಹಾಗಾದ್ರೆ ಪುರುಷರಲ್ಲಿ ಕೂದಲು ಉದುರಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲೆಲ್ಲ 40 ವರ್ಷ ದಾಟಿದ ಬಳಿಕ ಕೂದಲು ಉದುರುವ ಸಮಸ್ಯೆ, ಹೊಟ್ಟೆ ಸಮಸ್ಯೆ, ಅಶಕ್ತತೆ ಕಾಡುತ್ತಿತ್ತು. ಆದರೆ ಇಂದಿನ ಯುವ ಪೀಳಿಗೆಯವರಿಗೆ 30 ದಾಟುತ್ತಿದ್ದಂತೆ, ಎಲ್ಲ ಸಮಸ್ಯೆಗಳೂ ಶುರುವಾಗುತ್ತದೆ. ಯಾಕಂದ್ರೆ ಈಗಿನವರ ಜೀವನ ಶೈಲಿ ಆ ರೀತಿ ಇದೆ. ಸಮಯಕ್ಕೆ ಸರಿಯಾಗಿ ನಿದ್ದೆ, ಊಟವಿಲ್ಲ. ವ್ಯಾಯಮವಿಲ್ಲ. ಜಿಮ್‌ಗೆ ಹೋದರೆ, ಒಂದೇ ವಾರಕ್ಕೆ ಸುಸ್ತಾಗಿ ಅದಕ್ಕೂ ಬ್ರೇಕ್ ಬೀಳುತ್ತದೆ. ಹಾಗಾಗಿ ಅನಾರೋಗ್ಯಕರ ಜೀವನ ಶೈಲಿಯಿಂದ, 30 ಮೀರಿಯ ಯುವಕರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ.
ಅಲ್ಲದೇ, ಹಾರ್ಮೋನಲ್ ಇಂಬ್ಯಾಲೆನ್ಸ್ ಆದ ಕಾರಣಕ್ಕೂ ಈ ರೀತಿ ತಲೆಗೂದಲು ಉದುರುತ್ತದೆ. ಜಂಕ್ ಫುಡ್ ಸೇವನೆ, ಬೀದಿ ಬದಿ ತಿಂಡಿ ಸೇವನೆ, ಕರಿದ ತಿಂಡಿ ಸೇವನೆ ಇತ್ಯಾದಿಯಿಂದ, ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆಗುತ್ತದೆ. ಅಲ್ಲದೇ ಇಂಥ ತಿಂಡಿಗಳಲ್ಲಿ ಯಾವುದೇ ಪೋಷಕಾಂಶಗಳಿರುವುದಿಲ್ಲ. ಇದರಿಂದ ದೇಹಕ್ಕೆ ಶಕ್ತಿಯೂ ಸಿಗುವುದಿಲ್ಲ. ನಾಲಿಗೆ ರುಚಿ, ಹೊಟ್ಟೆ ತುಂಬುವುದಕ್ಕೆ ಮಾತ್ರ, ಈ ಆಹಾರವನ್ನು ನೀವು ಸೇವಿಸಬೇಕಾಗುತ್ತದೆ.
ಅಲ್ಲದೇ, ಜವಾಬ್ದಾರಿಗಳು ಹೆಗಲೇರುವ ಸಮಯ ಇದಾಗಿದ್ದರಿಂದ, ಒತ್ತಡದ ಜೀವನ ನಿರ್ವಹಿಸಬೇಕಾಗುತ್ತದೆ. ಇದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಮಾನಸಿಕ ನೆಮ್ಮದಿಯೂ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ಪುರುಷರ ಕೂದಲು ಉದುರುವಿಕೆಯ ಸಮಸ್ಯೆ ಶುರುವಾಗುತ್ತದೆ. ಕೂದಲು ಉದುರುವ ಸಮಸ್ಯೆ ಕಡಿಮೆಯಾಗಬೇಕು ಅಂದ್ರೆ, ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಭರಿತವಾದ, ಎಣ್ಣೆ, ಶ್ಯಾಂಪೂವನ್ನು ಬಳಸಬೇಡಿ.
ಆಯುರ್ವೇದಿಕ ಪುಡಿಗಳನ್ನು ಬಳಸಿ. ಸೀಗೇಕಾಯಿ, ಅಂಟಲಕಾಯಿ, ನೆಲ್ಲಿಕಾಯಿ ಪುಡಿ ಇವುಗಳನ್ನು ಬಳಸಿ, ಹೇರ್ ವಾಶ್ ಮಾಡಿ. ತೆಂಗಿನ ಎಣ್ಣೆಗಿಂತ ಅತ್ಯುತ್ತಮವಾದ ತೈಲ ಮತ್ತೊಂದಿಲ್ಲ. ಇದರಿಂದ ಮಸಾಜ್ ಮಾಡಿ, ತಲೆ ಸ್ನಾನ ಮಾಡುವುದರಿಂದ ಕೂದಲ ಆರೋಗ್ಯ ಚೆನ್ನಾಗಿರುತ್ತದೆ. ಆರೋಗ್ಯಕರ ಆಹಾರ ಸೇವನೆಯಿಂದ ನೀವು ನಿಮ್ಮ ಸೌಂದರ್ಯವನ್ನು ಮರಳಿ ಪಡೆಯಬಹುದು.
ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..
10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..