Health Tips: ಯಾರ ಲಿವರ್ ಆರೋಗ್ಯವಾಗಿರುತ್ತದೆಯೋ, ಅಂಥವರು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ, ಅವರು ಆರೋಗ್ಯವಂತರಾಗಿರುತ್ತಾರೆ. ಅದಕ್ಕಾಗಿ ಕೆಲವು ಕೆಟ್ಟ ಚಟಗಳನ್ನು ರೂಢಿಸಿಕೊಳ್ಳದೇ, ನಿಮ್ಮ ಲಿವರ್ನ್ನು ಆರೋಗ್ಯವಾಗಿ ಇಟ್ಟುಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ. ಇಂದು ನಾವು ಏನು ಮಾಡಿದಾಗ, ಲಿವರ್ ಆರೋಗ್ಯವಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ..
ನಮ್ಮ ಜೀರ್ಣಾಂಗದ ರಾಜಾ ಅಂದ್ರೆ ಅದು ಲಿವರ್ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ನಿಮ್ಮ ಲಿವರ್ಗೆ ಸಣ್ಣ ಪ್ರಾಬ್ಲಮ್ ಆದ್ರೂನು, ಅದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ನೋವು, ಅಜೀರ್ಣತೆ ಸೇರಿ ಇತ್ಯಾದಿ ಸಮಸ್ಯೆ ಆರಂಭವಾಗುತ್ತದೆ. ಹಾಗಾಗಿ ಲಿವರನ್ನು ನಾವು ಆರೋಗ್ಯಕರವಾಗಿರಿಸಿಕೊಳ್ಳುವುದು ತುಂಬಾ ಮುಖ್ಯ.
ಇದಕ್ಕಾಗಿ ನಾವು ಹಸಿರು ಸೊಪ್ಪುಗಳನ್ನು ಸ್ವಚ್ಛವಾಗಿ ತೊಳೆದು ತಿನ್ನಬೇಕು. ಪಾಲಕ್, ಮೆಂತ್ಯೆ, ಸಬ್ಬಸಿಗೆ, ಬಸಳೆ, ಹರಿವೆ, ನುಗ್ಗೆ ಸೊಪ್ಪು ಇಂಥ ಹಸಿರು ಸೊಪ್ಪುಗಳ ಸೇವನೆ ಮಾಡುವುದರಿಂದ ನಮ್ಮ ಲಿವರ್ ಆರೋಗ್ಯವಾಗಿರುತ್ತದೆ. ಅಲ್ಲದೇ, ಸಾಮಾನ್ಯ ಚಹಾ ಸೇವನೆ ಬದಲು, ಹರ್ಬಲ್ ಟೀ ಮಾಡಿ, ಸೇವನೆ ಮಾಡಬೇಕು.
ಬೆಳ್ಳುಳ್ಳಿ, ಅರಿಷಿನ, ಸಿರಿಧಾನ್ಯಗಳು, ವಿಟಾಮಿನ್ ಸಿ ಇರುವ ಹಣ್ಣುಗಳು, ಆ್ಯಪಲ್, ಬೀಟ್ರೂಟ್ ಇಂಥ ಆರೋಗ್ಯಕರ ಆಹಾರಗಳ ಸೇವನೆಯಿಂದ, ಲಿವರ್ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಬಹುದು. ಅಲ್ಲದೇ, ಇಂಥ ಆಹಾರಗಳನ್ನು ಸೇವಿಸುವ ಮೊದಲು ಅದನ್ನು ಸ್ವಚ್ಛವಾಗಿ ತೊಳೆದು ತಿನ್ನುವುದನ್ನು ಮರೆಯಬೇಡಿ.
ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..
10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..




