Tuesday, December 24, 2024

Latest Posts

ಸ್ಪಟಿಕದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತಾ..?

- Advertisement -

Health Tips: ಸ್ಪಟಿಕವನ್ನು ಕೆಲವರು ಪಪ್ಪಡ್ ಖಾರಾ, ಫಿಟ್ಕರಿ ಅಂತಲೂ ಕರಿಯುತ್ತಾರೆ. ಇದನ್ನು ಬಳಸುವವರ ಸಂಖ್ಯೆ ತುಂಬಾ ಅಪರೂಪ. ಹಾಗಾಗಿ ಇದರ ಪ್ರಯೋಜನವನ್ನು ಹಲವರು ಅರಿತಿರುವುದಿಲ್ಲ. ಹಾಗಾಗಿ ಇಂದು ನಾವು ಸ್ಪಟಿಕದ ಆರೋಗ್ಯಕರ ಗುಣಗಳೇನು ಅಂತಾ ತಿಳಿಸಲಿದ್ದೇವೆ.

ಸ್ಪಟಿಕವನ್ನು ನೀರಿಗೆ ಹಾಕಿದ ತಕ್ಷಣ, ಆ ನೀರು ಸ್ವಚ್ಛವಾಗುತ್ತದೆ. ಅದಕ್ಕಾಗಿಯೇ ಹಲವರು ಹಪ್ಪಳ ತಯಾರಿಸುವಾಗ, ಅದಕ್ಕೆ ಬಳಸುವ ನೀರಿಗೆ ಸ್ಪಟಿಕವನ್ನು ಹಾಕುತ್ತಾರೆ. ಅಲ್ಲದೇ, ಹಲವು ಪುರುಷರು ಗಡ್ಡ ತೆಗೆದ ಬಳಿಕ, ಸ್ಪಟಿಕದಿಂದ ಸ್ವಚ್ಛಗೊಳಿಸುತ್ತಾರೆ. ಕಲ್ಲು ಸಕ್ಕರೆಯ ರೀತಿ ಕಾಣುವ ಈ ಸ್ಪಟಿಕ ರುಚಿಯಂತೂ ಇರುವುದಿಲ್ಲ.

ಇನ್ನು ಗಾಯವಾದಾಗ ಕೂಡ ಸ್ಪಟಿಕವನ್ನು ಹಚ್ಚಿ ಮಸಾಜ್ ಮಾಡಲಾಗುತ್ತದೆ. ಯಾಕಂದ್ರೆ ಇದರಲ್ಲಿ ಆ್ಯಂಟಿ ಸೆಪ್ಟಿಕ್ ಅಂಶವಿರುತ್ತದೆ. ಇದು ಆ ಗಾಯ ನಂಜಾಗಿ ಬದಲಾಗುವುದನ್ನು ತಡೆದು, ಗಾಯ ಬೇಗ ಮಾಸುವಂತೆ ಮಾಡುತ್ತದೆ. ನೀವು ಗಾಯವಾದಾಗ, ಆ್ಯಂಟಿ ಸೆಪ್ಟಿಕ್ ಕ್ರೀಮ್ ಹಚ್ಚುವ ಬದಲು, ಸ್ಪಟಿಕವನ್ನೇ ಬಳಸಬಹದು.

ಕೆಲವರು ತಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳುವುದಕ್ಕೂ ಕೂಡ ಸ್ಪಟಿಕವನ್ನು ಬಳಸುತ್ತಾರೆ. ಇದರಿಂದ ಮಸಾಜ್ ಮಾಡುವುದರಿಂದ, ಮುಖದ ಮೇಲಿನ ನೆರಿಗೆ ಕಡಿಮೆಯಾಗುತ್ತದೆ. ಚಿಕ್ಕ ಮಕ್ಕಳು ಬಿದ್ದು ಗಾಯ ಮಾಡಿಕೊಂಡರೆ, ಅಂಥ ಜಾಗದಲ್ಲಿ ಸ್ಪಟಿಕದಿಂದ ಮಸಾಜ್ ಮಾಡಿದರೆ ಸಾಕು. ಗಾಯ ಬೇಗ ವಾಸಿಯಾಗುತ್ತದೆ. ಅಲ್ಲದೇ ಸ್ಪಟಿಕ ನೆನೆಸಿದ ನೀರಿನಿಂದ ನೀವು ಬಾಯಿ ಸ್ವಚ್ಛಗೊಳಿಸಿದರೆ, ನಿಮ್ಮ ಬಾಯಿಯಲ್ಲಿರುವ ಕೀಟಾಗಳು ನಾಶವಾಗುತ್ತದೆ.

ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..

ಮನೋವೈದ್ಯರ ಬಳಿ ಸಲಹೆ ಕೇಳುವುದು ಇದೇ ಕಾರಣಕ್ಕೆ..

10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..

- Advertisement -

Latest Posts

Don't Miss