Wednesday, March 12, 2025

Latest Posts

ಸಲಿಂಗ ಪ್ರೇಮ ಸಹಜ ಗುಣ ನಾ..? ಇಂಥವರು ಧೈರ್ಯವಾಗಿ ಇರುವುದು ಹೇಗೆ..?

- Advertisement -

Health Tips: ಮನೋವೈದ್ಯರಾದ ಡಾ.ಶ್ರೀಧರ್ ಸಲಿಂಗ ಕಾಮದ ಬಗ್ಗೆ ಹಲವಾರು ವಿಷಯಗಳನ್ನು ಈಗಾಗಲೇ ನಿಮ್ಮ ಬಳಿ ಹೇಳಿದ್ದಾರೆ. ಅದೇ ರೀತಿ ಇಂದೂ ಕೂಡ ಸಲಿಂಗ ಕಾಮ ಸಹಜ ಗುಣವೇ..? ಈ ಬಗ್ಗೆ ತಂದೆ ತಾಯಿ ತಿಳಿದುಕೊಳ್ಳಬೇಕಾಗಿದ್ದೇನು..? ಸಲಿಂಗಿಗಳು ಹೇಗೆ ಧೈರ್ಯವಾಗಿರಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ.

ದಕ್ಷಿಣ ಭಾರತದ ವಿಶ್ವವಿದ್ಯಾನಿಲಯದ ಅಧ್ಯಾಪಕರೊಬ್ಬರು ಸಲಿಂಗಿಯಾಗಿದ್ದರು. ಆದರೆ ಈ ಬಗ್ಗೆ ಅವರಲ್ಲಿ ಹೆದರಿಕೆ ಇತ್ತು. ಅವರ ಬಗ್ಗೆ ಅವರಿಗೇ ಕೀಳರಿಮೆ ಇತ್ತು. ಅವರು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವ ಕಾರಣಕ್ಕೆ, ಬೇಡವೆಂದರೂ ಮನೆ ಜನ ಒತ್ತಾಯಪೂರ್ವಕವಾಗಿ, ಅವರನ್ನು ವಿರುದ್ಧ ಲಿಂಗಿಯ ಜೊತೆ ವಿವಾಹ ಮಾಡಿಸಿದರು. ಆದರೆ ಸಂಸಾರ ಮಾಡಲು ಸಾಧ್ಯವಾಗದೇ, ಅವರು ಆತ್ಮಹತ್ಯೆ ಮಾಡಿಕೊಂಡರು.

ಈ ರೀತಿಯಾಗಬಾರದು ಅಂದರೆ, ತಮ್ಮ ಬಗ್ಗೆ ತಮಗೇ ಕೀಳರಿಮೆ ಇರಬಾರದು. ಏಕೆಂದರೆ, ಸಲಿಂಗ ಪ್ರೇಮ ಎನ್ನುವುದು, ಕೆಟ್ಟ ಚಟ, ಕೆಟ್ಟ ಗುಣ ಅಲ್ಲ. ಇದೊಂದು ಜೀವನದ ಸಹಜ ಗುಣವಾಗಿದೆ. ಹಾಗಾಗಿ ಸಲಿಂಗಿಗಳು ಧೈರ್ಯವಾಗಿರಬೇಕೇ ಹೊರತು, ಹೆದರಬಾರದು. ಈ ಬಗ್ಗೆ ಅವರ ಪೋಷಕರಲ್ಲೂ ಅರಿವು ಮೂಡಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ವಿವರವಾಗಿ ಬೇಕಾಗಿದ್ದಲ್ಲಿ, ಈ ವೀಡಿಯೋ ನೋಡಿ..

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

- Advertisement -

Latest Posts

Don't Miss